ETV Bharat / state

ಚಿಕ್ಕಮಗಳೂರು: ತಂದೆಯ ಮೇಲಿನ ದ್ವೇಷಕ್ಕೆ ಅಪ್ರಾಪ್ತೆ ಮೇಲೆ ಅತ್ಯಾಚಾರ - ಅಪ್ರಾಪ್ತೆ ಅತ್ಯಾಚಾರ ಪ್ರಕರಣ

ತಂದೆಯ ಮೇಲಿನ ದ್ವೇಷಕ್ಕೆ ಕಾಮುಕನೋರ್ವ ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರವೆಸಗಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

chikkamagaluru
ಮಹೇಶ್ ಅತ್ಯಾಚಾರ ಎಸಗಿದ ಆರೋಪಿ
author img

By

Published : Mar 7, 2021, 3:32 PM IST

Updated : Mar 7, 2021, 4:14 PM IST

ಚಿಕ್ಕಮಗಳೂರು: ತಂದೆಯ ಮೇಲಿನ ದ್ವೇಷಕ್ಕೆ ಕಾಮುಕನೋರ್ವ ಬಾಲಕಿಯನ್ನು ಪುಸಲಾಯಿಸಿ ಶಾಲೆಯಿಂದ ಹೋಮ್‌ ಸ್ಟೇಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ. ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ಈ ಘಟನೆ ನಡೆದಿದೆ.

ಎಸ್​ಪಿ ಅಕ್ಷಯ್

ಮಹೇಶ್ ಅತ್ಯಾಚಾರ ಎಸಗಿದ ಆರೋಪಿ. ಈತ ಮನೆಯೊಂದರಲ್ಲಿ ಹಿಟಾಚಿ ಚಾಲಕನ ವೃತ್ತಿಗೆ ಸೇರಿದ್ದನಂತೆ. ಆದರೆ ಈತನ ನಡತೆ ಗಮನಿಸಿದ ಮಾಲೀಕ ಬುದ್ದಿ ಹೇಳಿದ್ದ. ಆದರೆ ಮಾಲೀಕನ ಮಗಳ ಮೇಲೆ ಮೋಹವಿಟ್ಟಿದ್ದ ಮಹೇಶ್, ಆಕೆಯನ್ನು ಪುಸಲಾಯಿಸಿ ಶಾಲೆಯಿಂದ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ ಎನ್ನಲಾಗ್ತಿದೆ.

ಆರೋಪಿ ಮಹೇಶ್,​ 'ನಿನ್ನ ತಂದೆಗೆ ಹುಷಾರಿಲ್ಲ. ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಿದ್ದು, ನಿನ್ನನ್ನು ಕರೆದುಕೊಂಡು ಬರಲು ಹೇಳಿದ್ದಾರೆ' ಎಂದು 8ನೇ ತರಗತಿ ಬಾಲಕಿಯನ್ನು ಸುಮಾರು 4 ಕಿ.ಮೀ. ದೂರ ಕರೆದುಕೊಂಡು ಹೋಗಿದ್ದಾನೆ. ಬೈಕ್ ಊರಿನ ದಾರಿ ಹಿಡಿಯದ ಕಾರಣ ಬಾಲಕಿ ಕೇಳಿದಾಗ ಒಂದೊಂದು ಊರಿನ ಹೆಸರನ್ನು ಹೇಳಿ 40 ಕಿ.ಮೀ. ದೂರದ ಹೋಮ್‌ ಸ್ಟೇ ಗೆ ಕರೆದೊಯ್ದಿದ್ದಾನೆ.

ಈ ವೇಳೆ ಬಾಲಕಿಗೆ ಕುಡಿಯುವ ನೀರಿನಲ್ಲಿ ಅಮಲು ಬರುವ ಪುಡಿ ಬೆರೆಸಿ ಕುಡಿಸಿ, ಪ್ರಜ್ಞೆ ತಪ್ಪಿದ ಬಾಲಕಿ ಮೇಲೆ ಕಾಮದಾಹ ತೀರಿಸಿಕೊಂಡಿದ್ದಾನೆ. ಬಾಲಕಿ ಎಚ್ಚರವಾದಾಗ ನಿಮ್ಮ ಅಪ್ಪನ ಮೇಲಿನ ದ್ವೇಷಕ್ಕೆ ಹೀಗೆ ಮಾಡಿದೆ ಎಂದು ಆರೋಪಿ ಹೇಳಿದ್ದನಂತೆ!.

ಬಾಳೆಹೊನ್ನೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: ಅತ್ಯಾಚಾರ: ಇಬ್ಬರು ಅಪರಾಧಿಗಳಿಗೆ 30 ವರ್ಷ ಜೈಲು ಶಿಕ್ಷೆ

Last Updated : Mar 7, 2021, 4:14 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.