ETV Bharat / state

ವೀರಮದಕರಿ ಸ್ಮಾರಕ ನಿರ್ಮಾಣದ ಹೋರಾಟ ಮುನ್ನೆಲೆಗೆ.. ಕಾಳಿಶ್ರೀ ಸಾಥ್

ವೀರ ಮದಕರಿ ನಾಯಕರ ಸ್ಮಾರಕದ ಹೋರಾಟವೂ ಮುನ್ನೆಲೆಗೆ ಬಂದಿದೆ. ಮದಕರಿ ವಂಶದ ಏಳನೇ ಕುಡಿ ಹಾಗೂ ಕಾಳಿಶ್ರೀ ಶ್ರೀರಂಗಪಟ್ಟಣದಲ್ಲೇ ಸ್ಮಾರಕ ನಿರ್ಮಾಣಕ್ಕೆ ಪಟ್ಟು ಹಿಡಿದಿದ್ದಾರೆ.

kali shree urges to construct a veera madakari monument
ವೀರಮದಕರಿ ಸ್ಮಾರಕದ ಹೋರಾಟ ಮುನ್ನಲೆಗೆ
author img

By

Published : Jun 12, 2022, 7:32 PM IST

ಚಿಕ್ಕಮಗಳೂರು: ಪುರಾತನ ಹಿಂದೂ ದೇವಾಲಯಗಳಿದ್ದ ಜಾಗದಲ್ಲಿ ಮತ್ತೆ ಮಂದಿರಗಳಾಗಬೇಕೆಂಬ ಹೋರಾಟ ನಡೆಯುತ್ತಿದ್ದು, ರಾಜ್ಯದಲ್ಲಿ ಧರ್ಮ ಸಂಘರ್ಷ ಜೋರಾಗಿದೆ. ಈ ಮಧ್ಯೆ ಕೋಟೆನಾಡಿನ ರಾಜ ವೀರ ಮದಕರಿ ನಾಯಕರ ಸ್ಮಾರಕದ ಹೋರಾಟವೂ ಮುನ್ನೆಲೆಗೆ ಬಂದಿದೆ. ಮದಕರಿ ವಂಶದ ಏಳನೇ ಕುಡಿ ಹಾಗೂ ಸ್ವಾಮೀಜಿಗಳು ಶ್ರೀರಂಗಪಟ್ಟಣದಲ್ಲೇ ಸ್ಮಾರಕ ನಿರ್ಮಾಣಕ್ಕೆ ಪಟ್ಟು ಹಿಡಿದಿದ್ದಾರೆ.

ಹೌದು, ಚಿತ್ರದುರ್ಗ-ಕಲ್ಲಿನ ಕೋಟೆಯ ರಾಜ ವೀರ ಮದಕರಿ ನಾಯಕರದ್ದು ಅಸಹಜ ಸಾವಲ್ಲ. ಅವರು ಯುದ್ಧದಲ್ಲೂ ಮಡಿದಿಲ್ಲ. ಅವರನ್ನು ಗೃಹಬಂಧನದಲ್ಲಿಟ್ಟು, ಸ್ವಾತಂತ್ರ್ಯವನ್ನು ಕಸಿದು ಹೈದರಾಲಿ ಊಟದಲ್ಲಿ ವಿಷ ಹಾಕಿ ಕೊಂದನೆಂದು ಯಾರಿಗೂ ತಿಳಿದಿಲ್ಲ. ಅವರದ್ದು ದುರಂತ ಸಾವು ಎಂದು ಮದಕರಿ ನಾಯಕರ ಏಳನೇ ತಲೆಮಾರಿನ ಕುಡಿ ಪರಶುರಾಮ ನಾಯಕ ಅರಸು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಅವರು ಮಡಿದ ಜಾಗ ಶ್ರೀರಂಗಪಟ್ಟಣದಲ್ಲೇ ಅವರ ಸ್ಮಾರಕ ನಿರ್ಮಾಣವಾಗಬೇಕೆಂದು ಆಗ್ರಹಿಸಿದ್ದಾರೆ.

ವೀರಮದಕರಿ ಸ್ಮಾರಕ ನಿರ್ಮಾಣದ ಹೋರಾಟ ಮುನ್ನಲೆಗೆ

ಇದಕ್ಕೆ ಕಾಫಿನಾಡಿನ ಋಷಿಕುಮಾರ್ ಶ್ರೀಗಳ ಜೊತೆ ನಾಡಿನ ವಿವಿಧ ಶ್ರೀಗಳು ಕೈಜೋಡಿಸಿದ್ದಾರೆ. ಕಾಳಿಮಠಕ್ಕೆ ಭೇಟಿ ನೀಡಿದ್ದ ಮದಕರಿ ವಂಶಸ್ಥ ಪರಶುರಾಮ ನಾಯಕ ಅರಸು ಕಾಳಿಶ್ರೀಗಳ ಜೊತೆ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮದಕರಿ ನಾಯಕರ ಮನೆ ದೇವರು ಉಚ್ಚಂಗಿ ಯಲ್ಲಮ್ಮ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮದಕರಿ ನಾಯಕರ ಸ್ಮಾರಕದ ಹೋರಾಟಕ್ಕೆ ಮುಂದಾಗುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರೆಸ್ ಕ್ಲಬ್ ಚುನಾವಣೆ ಫಲಿತಾಂಶ: ಅಧ್ಯಕ್ಷರಾಗಿ ಶ್ರೀಧರ್, ಉಪಾಧ್ಯಕ್ಷರಾಗಿ ಆನಂದ್ ಆಯ್ಕೆ

ಮದಕರಿ ನಾಯಕರು 11 ವರ್ಷಗಳ ಕಾಲ ಹೈದರಾಲಿಯನ್ನು ಕೋಟೆಯ ಗಡಿಗೂ ಬಿಟ್ಟಿರಲಿಲ್ಲ. ಬಂದಾಗೆಲ್ಲ ಸೋತಿದ್ದ. ಕೊನೆಗೆ ಮಾತುಕತೆಗೆಂದು ಕರೆಸಿ ಮೋಸದಿಂದ ಬಂಧಿಸಿ ಎರಡು ವರ್ಷಗಳ ಕಾಲ ಜೈಲಿನಲ್ಲಿಟ್ಟು ಊಟದಲ್ಲಿ ವಿಷ ಹಾಕಿ ಕೊಂದನು. ಅಲ್ಲೇ ಅವರ ಅಂತ್ಯ ಸಂಸ್ಕಾರ ಕೂಡ ಆಯಿತು. ಹಾಗಾಗಿ, ಅಲ್ಲೇ ಅವರ ಸ್ಮಾರಕ ನಿರ್ಮಾಣವಾಬೇಕೆಂದು ಅವರ ವಂಶಸ್ಥರ ಜೊತೆ ಕಾಳಿಶ್ರೀ ಕೂಡ ಪಟ್ಟು ಹಿಡಿದಿದ್ದಾರೆ. ಈ ವಿಚಾರವಾಗಿ ಕೆಲವರು ನನ್ನನ್ನು ಮಂಡ್ಯಕ್ಕೆ ಬರಲು ಬಿಡೋದಿಲ್ಲ ಅಂತಿದ್ದಾರೆ. ಯಾರು ತಡೆಯುತ್ತೀರಾ ತಡೆಯಿರಿ. ನಾವು ಶ್ರೀರಂಗಪಟ್ಟದಲ್ಲಿ ಸ್ಮಾರಕ ಮಾಡಿಸುತ್ತೇವೆಂದು ಕಾಳಿಶ್ರೀ ಕೂಡ ಸವಾಲು ಹಾಕಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.