ETV Bharat / state

ಚಿಕ್ಕಮಗಳೂರಲ್ಲಿ ಅಕ್ರಮ ಭೂಮಿ ಮಂಜೂರು: ನಾಲ್ವರ ವಿರುದ್ಧ ದೂರು ದಾಖಲು.. ಇಬ್ಬರು ಅರೆಸ್ಟ್​ - ಭೂಮಿ ಆಪರೇಟರ್

ಅಕ್ರಮ ಭೂ ಮಂಜೂರು ಹಿನ್ನೆಲೆ ನಾಲ್ವರು ಅಧಿಕಾರಿಗಳ ವಿರುದ್ಧ ಮೂಡಿಗೆರೆ ತಹಶೀಲ್ದಾರ್ ತಿಪ್ಪೇಸ್ವಾಮಿ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮೂಡಿಗೆರೆ ತಹಶೀಲ್ದಾರ್ ತಿಪ್ಪೇಸ್ವಾಮಿ
ಮೂಡಿಗೆರೆ ತಹಶೀಲ್ದಾರ್ ತಿಪ್ಪೇಸ್ವಾಮಿ
author img

By ETV Bharat Karnataka Team

Published : Sep 28, 2023, 9:21 PM IST

ಮೂಡಿಗೆರೆ ತಹಶೀಲ್ದಾರ್ ತಿಪ್ಪೇಸ್ವಾಮಿ

ಚಿಕ್ಕಮಗಳೂರು : ಕಡೂರು ಹಾಗೂ ಮೂಡಿಗೆರೆ ತಾಲೂಕಿನ ಈ ಲ್ಯಾಂಡ್ ಸ್ಕ್ಯಾಂ ರಾಜ್ಯದಲ್ಲೇ ದೊಡ್ಡದಾಗಿದೆ. ಕಡೂರು ತಹಶೀಲ್ದಾರ್ ಆಗಿದ್ದ ಉಮೇಶ್ 3500 ಎಕರೆ ಅಕ್ರಮ ಮಾಡಿದ್ರೆ, ಮೂಡಿಗೆರೆ ತಹಶೀಲ್ದಾರ್ ಆಗಿದ್ದ ರಮೇಶ್ 2200 ಎಕರೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ದ ಹಾಲಿ ತಹಶೀಲ್ದಾರ್ ತಿಪ್ಪೇಸ್ವಾಮಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈಗಾಗಲೇ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಮೂಡಿಗೆರೆಯಲ್ಲಿ 2019-2021ರ ವರೆಗೆ ತಹಶೀಲ್ದಾರ್ ಆಗಿದ್ದ ರಮೇಶ್ ಬಾಳೂರು ಹೋಬಳಿಯ ಹಾದಿಓಣಿ ಗ್ರಾಮದ ಸರ್ವೇ ನಂಬರ್ 21ರಲ್ಲಿ 7 ಜನಕ್ಕೆ, ಕೂವೆ ಗ್ರಾಮದ ಸರ್ವೇ ನಂಬರ್ 87ರಲ್ಲಿ 6 ಜನ ಸೇರಿದಂತೆ ಒಟ್ಟು 13 ಜನಕ್ಕೆ ಭೂಮಿ ಮಂಜೂರು ಮಾಡಿದ್ದಾರೆ. ಆದರೆ ಅರ್ಜಿ ಇಲ್ಲ, ಕಮಿಟಿಯಲ್ಲಿ ಫೈಲ್ ಇಲ್ಲ, ಸಾಗುವಳಿ ಚೀಟಿಯೂ ಇಲ್ಲ ಎಂಬುದು ತಿಳಿದುಬಂದಿದೆ.

ಈ ಬಗ್ಗೆ ಮೂಡಿಗೆರೆ ತಹಶೀಲ್ದಾರ್ ತಿಪ್ಪೇಸ್ವಾಮಿ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಬಾಳೂರು ಹೋಬಳಿ ಸರ್ವೇ ನಂಬರ್ 21ರಲ್ಲಿ 7 ಜನಕ್ಕೆ ಅಕ್ರಮವಾಗಿ ಖಾತೆ ಮಾಡಿದ್ದಾರೆ. ಅಕ್ರಮವಾಗಿ ಅಂದರೆ ಯಾವುದೇ ಅರ್ಜಿ ಇಲ್ಲ. ಸಮಿತಿಗೆ ಮಂಡಿಸಿಲ್ಲ. ಸಾಗುವಳಿ ಚೀಟಿ ನೀಡಿಲ್ಲ. ಈ ಬಗ್ಗೆ ಡಿಸಿ ಆಫೀಸ್​ನಲ್ಲಿ ಕಂಪ್ಲೇಂಟ್​ ಆಗಿತ್ತು. ಡಿಸಿಯವರು ಡೈರೆಕ್ಷನ್ಸ್​ ಕೊಟ್ರು. ಅದರಲ್ಲಿ ಕೋರ್ಟ್​ನಲ್ಲಿ 7 ಜನರದ್ದು ಖಾತೆ ರದ್ದಾಗಿತ್ತು. ಇನ್ನು 6 ಜನರದ್ದು ತನಿಖೆ ನಡೆಯುತ್ತಿದೆ. ಖಾತೆ ರದ್ದುಪಡಿಸಿ ನಮಗೆ ನಿರ್ದೇಶನ​ ಕೊಟ್ಟಿದ್ದಾರೆ ಎಂದರು.

ಅವರು ಅಕ್ರಮವಾಗಿ ಖಾತೆಗೆ ಕ್ರಮ ವಹಿಸಿರುವುದರಿಂದ ನಾವು ಐಪಿಸಿ ಸೆಕ್ಷನ್ 409, 464 ಹಾಗೂ ಕೆಎಲ್​ಆರ್ ಆ್ಯಕ್ಟ್​ 964 ಹಾಗೂ 192ಎ ಮತ್ತು 192 ಬಿ ರಡಿಯಲ್ಲಿ ನಾಲ್ಕು ಜನರ ಮೇಲೆ ನಾವು ಮೂಡಿಗೆರೆ ಸಬ್​​ಇನ್ಸ್​ಪೆಕ್ಟರ್​ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ತಹಶೀಲ್ದಾರ್​, ಶಿರಸ್ತೇದಾರ್​, ಗ್ರಾಮ ಲೆಕ್ಕಾಧಿಕಾರಿ ಮತ್ತು ಭೂಮಿ ಆಪರೇಟರ್ ಒಟ್ಟು ನಾಲ್ಕು ಜನರ ವಿರುದ್ಧ​ ದೂರು ಸಲ್ಲಿಸಲಾಗಿದೆ. ಈಗ ಗಿರೀಶ್​ ಹಾಗೂ ನೇತ್ರಾವತಿ ಎಂಬುವರನ್ನು ಬಂಧಿಸಲಾಗಿದೆ ಎಂದು ಆಗಿದ್ದಾರೆ.

2019-2021ರವರೆಗೂ ಮೂಡಿಗೆರೆ ತಾಲೂಕಿನಲ್ಲಿ ರಮೇಶ್​ ಎಂಬುವವರು ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಇನ್ನೊಬ್ಬರು ಶಿರಸ್ತೇದಾರರಾದ ಪಾಲಯ್ಯ ಎಂಬುವವರು ಕರ್ತವ್ಯ ನಿರ್ವಹಿಸಿದ್ದಾರೆ. ಗಿರೀಶ್​ ಎಂಬುವವರು ಬಾಳೂರು ಹೋಬಳಿಯಲ್ಲಿ ಗ್ರಾಮ ಲೆಕ್ಕಾಧಿಕಾರಿ, ಇವರು ಆರ್​ಐ ಇನ್​ಚಾರ್ಜ್​ ಆಗಿದ್ದಾರೆ. ಭೂಮಿ ಆಪರೇಟರ್​ ಆಗಿ ನೇತ್ರಾವತಿ ಎಂಬುವವರು ಕೆಲಸ ನಿರ್ವಹಿಸುತ್ತಿದ್ದರು ಎಂದು ಮಾಹಿತಿ ನೀಡಿದ್ದಾರೆ. ಇದೀಗ ತಲೆಮರೆಸಿಕೊಂಡಿರುವ ರಮೇಶ್ ಹಾಗೂ ಪಾಲಯ್ಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ ಎಂದು ತಹಶೀಲ್ದಾರ್​ ತಿಪ್ಪೇಸ್ವಾಮಿ ತಿಳಿಸಿದರು.

ಇದನ್ನೂ ಓದಿ: ಅಕ್ರಮವಾಗಿ ಸರ್ಕಾರಿ, ಅರಣ್ಯ ಭೂಮಿ ಮಂಜೂರು: ಕಡೂರು ತಹಶೀಲ್ದಾರ್ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.