ETV Bharat / state

ಮಹಾಮಳೆ: ಹಾಸನ, ಚಿಕ್ಕಮಗಳೂರಲ್ಲಿ ಮತ್ತೆರಡು ಬಲಿ...! - ಮೃತದೇಹ ಪತ್ತೆ

ಚಿಕ್ಕಮಗಳೂರಿನಲ್ಲಿ ಮತ್ತೊಂದು ಮೃತದೇಹ ಪತ್ತೆಯಾಗಿದೆ. ಹಾಸನದಲ್ಲಿ ಮಹಾಮಳೆಗೆ 61 ವರ್ಷದ ಪ್ರಕಾಶ್ ಎಂಬುವವರು ಮೃತಪಟ್ಟಿದ್ದು,  ಮರಗಡಿ ಗ್ರಾಮದಲ್ಲಿ ಒಬ್ಬ ವ್ಯಕ್ತಿ ನಾಪತ್ತೆಯಾಗಿದ್ದಾರೆ.

ಮೃತದೇಹ ಪತ್ತೆ
author img

By

Published : Aug 12, 2019, 7:51 PM IST

Updated : Aug 12, 2019, 8:06 PM IST

ಚಿಕ್ಕಮಗಳೂರು/ಹಾಸನ : ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಮತ್ತೊಂದು ಮೃತದೇಹ ಪತ್ತೆಯಾಗಿದೆ. ನಿರಂತರ ಮಳೆಯ ಕಾರಣ ಹಾಗೂ ಗುಡ್ಡು ಕುಸಿತದಿಂದ ಹಲವಾರು ಜನರು ನೀರಿನಲ್ಲಿ ನಾಪತ್ತೆಯಾಗಿದ್ದರು. ಇದರಲ್ಲಿ ಕೆಲವರು ಪತ್ತೆಯಾದರೇ, ಇನ್ನು ಕೆಲವರು ಪತ್ತೆಯಾಗಿಲ್ಲ.

ಮೂಡಿಗೆರೆಯ ಕಿರುಗುಂದದ ಸಮೀಪ ಜಪಾವತಿಯ ಪಕ್ಕದ ಗದ್ದೆಯ ಕೆಸರಿನಲ್ಲಿ ಮೃತ ದೇಹಪತ್ತೆಯಾಗಿದೆ. ಮೃತ ವ್ಯಕ್ತಿ ಸಕಲೇಶಪುರ ತಾಲೂಕಿನ ಕೊರಡಿ ಗ್ರಾಮದ ಪ್ರಕಾಶ್ ಎಂದು ಹೇಳಲಾಗುತ್ತಿದೆ. ಸ್ಥಳೀಯ ಜನರು ಕೆಸರಿನಲ್ಲಿ ಹೂತಿದ್ದ ದೇಹವನ್ನು ಮೇಲೆತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ.

ಮೃತದೇಹ ಪತ್ತೆ

ಒಬ್ಬ ಬಲಿ, ಇನ್ನೋರ್ವ ನಾಪತ್ತೆ :

ಜಿಲ್ಲೆಯಲ್ಲಿ ಸುರಿದ ಮಹಾಮಳೆಗೆ ಸಕಲೇಶಪುರ ತಾಲೂಕಿನ ಹಾನುಬಾಳ್ ಹೋಬಳಿಯ ಕೊರಡಿ ಗ್ರಾಮದ 61 ವರ್ಷದ ಪ್ರಕಾಶ್ ಎಂಬುವವರು ಮೃತಪಟ್ಟಿದ್ದಾರೆ. ಕಳೆದ 8ನೇ ತಾರೀಖಿನಂದು ಮಧ್ಯಾಹ್ನದ ಸಮಯ ಗದ್ದೆಗೆ ಹೋಗಿದ್ದ ಪ್ರಕಾಶ್ ಕಾಲು ಜಾರಿ ಚಿಕ್ಕಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ರಕ್ಷಣಾ ತಂಡ ಕಾರ್ಯಾಚರಣೆ ನಡೆಸಿದ್ದು, ಗದ್ದೆಯ ಸಮೀಪದ ಹೇಮಾವತಿ ತೊರೆಯ ಹತ್ತಿರವೇ ಮೃತದಹ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆ ಮಾಡಿದ ನಂತರ ಮೃತರ ಶವ ಕುಟುಂಬದವರಿಗೆ ಒಪ್ಪಿಸಲಾಗಿದೆ.

ಅದೆ ರೀತಿ, ತಾಲೂಕಿನ ದೇವಾಲಯದ ಕೆರೆ ಸಮೀಪದ ಮರಗಡಿ ಗ್ರಾಮದ 60 ವರ್ಷದ ರೈತ ರಮೇಶ್ ಎಂಬುವರು ಕಳೆದ 7 ನೇ ತಾರೀಖಿನಂದು ಹಾಲು ಕೊಟ್ಟು ಬರಲು ತೆರಳಿದಾಗ ನಾಪತ್ತೆಯಾಗಿದ್ದರು. ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

Intro:ಹಾಸನ : ಜಿಲ್ಲೆಯಲ್ಲಿ ಸುರಿದ ಮಹಾಮಳೆಗೆ ಓರ್ವ ವ್ಯಕ್ತಿ ಮೃತಪಟ್ಟಿದ್ದರೆ ಮತ್ತೋರ್ವ ವ್ಯಕ್ತಿ ಕಾಣೆಯಾಗಿರುವ ಪ್ರಕರಣ ದಾಖಲಾಗಿದೆ.

Body:ಸಕಲೇಶಪುರ ತಾಲೂಕಿನ ಹಾನುಬಾಳ್ ಹೋಬಳಿಯ ಕೊರಡಿ ಗ್ರಾಮದ ೬೧ವರ್ಷದ ಪ್ರಕಾಶ್ ಮೃತಪಟ್ಟ ದುರ್ದೈವಿಯಾಗಿದ್ದು, ಕಳೆದ ೮ನೇ ತಾರೀಖಿನಂದು ಮಧ್ಯಾಹ್ನದ ಸಮಯದಲ್ಲಿ ಭಾರಿ ಮಳೆ ಬೀಳುತ್ತಿದ್ದ ಸಮಯದಲ್ಲಿ ಗದ್ದೆಯನ್ನು ನೋಡಲು ಹೋಗಿದ್ದ ಪ್ರಕಾಶ್ ಕಾಲು ಜಾರಿ ಗದ್ದೆಯ ಸಮೀಪವಿದ್ದ ಚಿಕ್ಕಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಈ ಬಗ್ಗೆ ವ್ಯಕ್ತಿ ಕಳೆದು ಹೋಗಿರುವ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ರಕ್ಷಣಾ ತಂಡ ಕಾರ್ಯಾಚರಣೆ ನಡೆಸಿದ್ದು ಗದ್ದೆಯ ಸಮೀಪದ ಹೇಮಾವತಿ ತೊರೆಯ ಹತ್ತಿರವೇ ಮೃತದಹ ಪತ್ತೆಯಾಗಿದ್ದು ಮರಣೋತ್ತರ ಪರೀಕ್ಷೆ ಮಾಡಿದ ನಂತರ ಮೃತರ ಶವ ಕುಟುಂಬದವರಿಗೆ ಒಪ್ಪಿಸಲಾಗಿದೆ.

Conclusion:ಅದೆ ರೀತಿ ತಾಲೂಕಿನ ದೇವಾಲದಕೆರೆ ಸಮೀಪದ ಮರಗಡಿ ಗ್ರಾಮದ ೬೦ವರ್ಷದ ರೈತ ರಮೇಶ್ ಎಂಬುವರು ಕಳೆದ ೭ನೇ ತಾರೀಖಿನಂದು ಮುಂಜಾನೆ ೧೦.೩೦ಕ್ಕೆ ಹಾಲು ಕೊಟ್ಟು ಬರಲು ರೆಸಾರ್ಟ್‌ವೊಂದಕ್ಕೆ ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಹೋದವರು ಮನೆಗೆ ಮರಳಿ ಬಂದಿಲ್ಲ. ಸಂಭಂದಿಕರು ಸ್ನೇಹಿತರ ಮನೆಗಳಲ್ಲಿ ವಿಚಾರಿಸಿದರು ಯಾವುದೆ ಮಾಹಿತಿ ಲಭ್ಯವಿಲ್ಲ ಈ ಹಿನ್ನೆಲೆಯಲ್ಲಿ ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದ್ದು ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.
Last Updated : Aug 12, 2019, 8:06 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.