ETV Bharat / state

ಚಿಕ್ಕಮಗಳೂರು: ಗ್ರಾಮಸ್ಥರಿಂದ ಗ್ರಾ.ಪಂ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊರನಾಡಿನಿಂದ ಶೃಂಗೇರಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಅಸಮರ್ಪಕ ಕಾಮಗಾರಿ ವಿರೋಧಿಸಿ ಹಾಗೂ ರಸ್ತೆ ಅಗಲೀಕರಣಕ್ಕೆ ಒತ್ತಾಯಿಸಿ ಗ್ರಾಮ ಪಂಚಾಯತ್ ಚುನಾವಣಾ ಬಹಿಷ್ಕಾರಕ್ಕೆ ಗ್ರಾಮಸ್ಥರು ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ.

gram panchayath Election boycott warning
ಗ್ರಾ.ಪಂ ಚುನಾವಣೆ ಬಹಿಷ್ಕಾರದ ಎಚ್ಚರಿಕೆ
author img

By

Published : Dec 9, 2020, 2:43 PM IST

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಗ್ರಾಮ ಪಂಚಾಯತ್ ಚುನಾವಣೆಯ ಬಹಿಷ್ಕಾರ ಬಿಸಿಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊರನಾಡಿನಿಂದ ಶೃಂಗೇರಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಅಸಮರ್ಪಕ ಕಾಮಗಾರಿ ವಿರೋಧಿಸಿ ಹಾಗೂ ರಸ್ತೆ ಅಗಲೀಕರಣಕ್ಕೆ ಒತ್ತಾಯಿಸಿ ಗ್ರಾಮ ಪಂಚಾಯತ್ ಚುನಾವಣಾ ಬಹಿಷ್ಕಾರಕ್ಕೆ ಈ ಭಾಗದ ಜನರು ಮುಂದಾಗಿದ್ದು, ಇಂದು ಮತ್ತೊಮ್ಮೆ ಎಚ್ಚರಿಕೆಯನ್ನು ನೀಡಿದ್ದಾರೆ.

ರಸ್ತೆ ಅಗಲೀಕರಣಕ್ಕೆ ಒತ್ತಾಯಿಸಿ ಗ್ರಾಮ ಪಂಚಾಯತ್ ಚುನಾವಣಾ ಬಹಿಷ್ಕಾರಕ್ಕೆ ಗ್ರಾಮಸ್ಥರು ಮತ್ತೊಮ್ಮೆ ಎಚ್ಚರಿಕೆಯನ್ನು ನೀಡಿದ್ದಾರೆ.

ಪ್ರಮುಖವಾಗಿ ಈ ಭಾಗದ ಪ್ರದೇಶಗಳಾದ ಮೇಲ್ ಮಂಚಿಗೆ, ಕಬ್ಬಿನ ಕುಂಬ್ರಿ, ಚಿಕ್ಕನಕುಡಿಗೆ, ಕೆಸವಿನಹೊಂಡ, ಅಣೆಅಡಿ, ದಂಟಗ, ಬಳಿಗೋಳ್, ಹೊನ್ನೆಕಾಡು, ತುರ, ಬಲಿಗೆ, ಹೊನ್ನೆ ಕಾಡುಮಕ್ಕಿ, ಮೆಣಸಿಹಾಡ್ಯ, ಸೋಮನಕಟ್ಟೆ, ಮಾವಿನಹೊಲ, ಆಡಿನ್ ಕೆರೆ, ಮರಡಿ, ತೋಟದ ಮನೆ, ಮಣ್ಣಿನ್ ಪಾಲ್, ಹೊಸನೆಲ,ಗೋರ್ ಗಲ್, ಕವನಹಳ್ಳಿ ಗ್ರಾಮಸ್ಥರು ಗ್ರಾಮ ಪಂಚಾಯತ್ ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.

ಓದಿ: ಚಿಕ್ಕಮಗಳೂರು: ಗ್ರಾಮ ಪಂಚಾಯತ್ ಚುನಾವಣಾ ಬಹಿಷ್ಕಾರಕ್ಕೆ ಮುಂದಾದ ಜನ

ಹೊರನಾಡಿನಿಂದ ಶೃಂಗೇರಿಗೆ ಬಲಿಗೆ ಮೆಣಸಿನ ಹಾಡ್ಯ ಅತೀ ಹತ್ತಿರದ ಸಂಪರ್ಕ ಕಲ್ಪಿಸುವ 6.50 ಕಿ.ಮೀ ವರೆಗಿನ ರಸ್ತೆಗೆ 2018 ರಲ್ಲಿ 8.50 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಈವರೆಗೂ ಕೇವಲ 3 ಕಿ.ಮೀ ದುರಸ್ಥಿಗೊಳಿಸಲಾಗಿದ್ದು, ಕಳೆದ ವರ್ಷದ ಜನ ಸಂಪರ್ಕ ಸಭೆಯಲ್ಲಿ ಅವೈಜ್ಞಾನಿಕ ರಸ್ತೆ ಅಗಲೀಕರಣ ಹಾಗೂ ಕಾಮಗಾರಿ ಬಗ್ಗೆ ಹೇಳಿದ್ದರೂ ಯಾವುದೇ ರೀತಿಯ ಪ್ರಯೋಜನ ಆಗಿಲ್ಲ. ಈ ರಸ್ತೆಯಲ್ಲಿ ಸಂಚಾರ ಮಾಡುವ ಪ್ರವಾಸಿಗರಿಗೆ ಹಾಗೂ ಸ್ಥಳೀಯರಿಗೆ ತುಂಬಾ ತೊಂದರೆಯಾಗುತ್ತಿದ್ದು, ಕೂಡಲೇ ಈ ರಸ್ತೆಯ ದುರಸ್ಥಿ ಕಾರ್ಯ ಮಾಡಬೇಕು, ಇಲ್ಲದಿದ್ದರೆ ನಾವು ಗ್ರಾಮ ಪಂಚಾಯತ್ ಚುನಾವಣೆ ಬಹಿಷ್ಕಾರ ಮಾಡುತ್ತೇವೆ ಎಂದು ಸಂಬಂಧಪಟ್ಟವರಿಗೆ ಈ ಭಾಗದ ಜನರು ಎಚ್ಚರಿಕೆ ನೀಡಿದ್ದರೂ ಕೂಡ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಇವರ ಮನವಿಗೆ ಸ್ಪಂದಿಸಿಲ್ಲ.

ಈ ಹಿನ್ನೆಲೆ ಇಲ್ಲಿನ ಗ್ರಾಮಸ್ಥರು ಹೊರನಾಡು ಗ್ರಾಮ ಪಂಚಾಯಿತಿಗೆ ತೆರಳಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಕೂಡಲೇ ನಮ್ಮ ಸಮಸ್ಯೆಯನ್ನು ಬಗೆಹರಿಸಲೇಬೇಕು. ನಾವು ಯಾವುದೇ ಕಾರಣಕ್ಕೂ ಚುನಾವಣಾ ನಾಮಪತ್ರ ಸಲ್ಲಿಸಲು ಯಾರಿಗೂ ಬಿಡುವುದಿಲ್ಲ. ನಾವು ಚುನಾವಣೆಯನ್ನು ಬಹಿಷ್ಕಾರ ಮಾಡುತ್ತಿದ್ದೇವೆ. ನಮ್ಮ ಸಮಸ್ಯೆ ವಿಚಾರವಾಗಿ ಯಾವುದೇ ರೀತಿಯ ಅಹಿತಕರ ಘಟನೆ ನಡೆದರೂ ಅದಕ್ಕೆ ಅಧಿಕಾರಿಗಳೇ ನೇರ ಹೊಣೆ ಎಂದು ಗ್ರಾಮಸ್ಥರು ಹೊರನಾಡು ಗ್ರಾಮ ಪಂಚಾಯಿತಿ ಅಧಿಕಾರಿಗೆ ಮನವಿ ಸಲ್ಲಿಸಿ ಮತ್ತೊಮ್ಮೆ ಚುನಾವಣೆ ಬಹಿಷ್ಕಾರದ ಎಚ್ಚರಿಕೆಯನ್ನು ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.