ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಗೌರಿಗದ್ದೆಯಲ್ಲಿರುವ ಅವಧೂತ ಶ್ರೀ ವಿನಯ್ ಗುರೂಜಿ ಅವರ ಆಶ್ರಮಕ್ಕೆ ಮಾಜಿ ಡಿಸಿಎಂ ಡಾ. ಜಿ.ಪರಮೇಶ್ವರ್ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ.
![ಶ್ರೀ ವಿನಯ್ ಗುರೂಜಿ ಆಶ್ರಮಕ್ಕೆ ಭೇಟಿ ನೀಡಿದ ಪರಮೇಶ್ವರ್](https://etvbharatimages.akamaized.net/etvbharat/prod-images/kn-ckm-06-dr-parameshwar-av-7202347_25062020161930_2506f_1593082170_262.jpg)
ಬೆಳಗ್ಗೆ ಗೌರಿಗದ್ದೆ ಆಶ್ರಮಕ್ಕೆ ಬಂದಿರುವ ಡಾ. ಜಿ.ಪರಮೇಶ್ವರ್, ಸುಮಾರು ಎರಡು ಗಂಟೆಗೂ ಅಧಿಕ ಕಾಲ ಆಶ್ರಮದಲ್ಲಿಯೇ ಉಳಿದು ಅವಧೂತ ವಿನಯ್ ಗುರೂಜಿ ಅವರ ಜೊತೆ ಚರ್ಚೆ ನಡೆಸಿದ್ದಾರೆ. ಡಾ. ಜಿ.ಪರಮೇಶ್ವರ್ ಆಶ್ರಮಕ್ಕೆ ಬರುತ್ತಿದ್ದಂತೆಯೇ ಆತ್ಮೀಯವಾಗಿ ಬರಮಾಡಿಕೊಂಡು ಗುರೂಜಿ ಆಶ್ರಮದ ವತಿಯಿಂದ ಗೌರವಿಸಲಾಯಿತು. ನಂತರ ಪರಮೇಶ್ವರ್ ಅವರು ಆಶ್ರಮದಲ್ಲಿರುವ ದೇವರುಗಳ ದರ್ಶನ ಮಾಡಿದ್ರು.
![ಶ್ರೀ ವಿನಯ್ ಗುರೂಜಿ ಆಶ್ರಮಕ್ಕೆ ಭೇಟಿ ನೀಡಿದ ಪರಮೇಶ್ವರ್](https://etvbharatimages.akamaized.net/etvbharat/prod-images/kn-ckm-06-dr-parameshwar-av-7202347_25062020161930_2506f_1593082170_100.jpg)
ಯಾವ ವಿಚಾರವಾಗಿ ಚರ್ಚೆ ನಡೆಸಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಜಿಲ್ಲೆಯಲ್ಲಿ ಕಾಂಗ್ರೆಸ್ನ ಯಾವ ಮುಖಂಡರ ಗಮನಕ್ಕೂ ಬಾರದ ಹಾಗೆ ಅವರು ಗುರೂಜಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಇವರಿಗೆ ಸಾಥ್ ನೀಡಿದ್ದಾರೆ.