ETV Bharat / state

ಅಂತೂ ಹೊರಗೆ ಬಂದ್ವಿ.... ಅಪಾಯಕ್ಕೆ ಸಿಲುಕಿದ ಭಕ್ತರ ನಿಟ್ಟುಸಿರು... ಅಗ್ನಿಶಾಮಕ ಸಿಬ್ಬಂದಿ- ಸ್ಥಳೀಯರಿಗೆ ಸಲಾಂ! - ಕಲ್ಲತ್ತಗಿರಿಯ ಜಲಪಾತ

ತರೀಕೆರೆ ತಾಲೂಕಿನ ಕಲ್ಲತ್ತಗಿರಿ ಫಾಲ್ಸ್ ಉಕ್ಕಿ ಹರಿಯುತ್ತಿದ್ದು, ಕಲ್ಲತ್ತಗಿರಿಯ ವೀರಭದ್ರೇಶ್ವರ ದೇವಸ್ಥಾನಕ್ಕೆ ಹೋದವರು ಬರಲಾಗದೇ ಪರದಾಟ ನಡೆಸುವಂತಾಗಿತ್ತು. ಅಗ್ನಿ ಶ್ಯಾಮಕದಳದ ಸಿಬ್ಬಂದಿ ಭಕ್ತಾಧಿಗಳನ್ನು ಸದ್ಯ ಸೇಫ್​​ ಮಾಡಿದ್ದಾರೆ.

ಕಲ್ಲತ್ತಗಿರಿಯ ವೀರಭದ್ರೇಶ್ವರ ದೇವಾಲಯದಲ್ಲಿ ಸಿಲುಕಿರುವ ಭಕ್ತರು
author img

By

Published : Aug 6, 2019, 5:21 PM IST

Updated : Aug 6, 2019, 6:56 PM IST

ಚಿಕ್ಕಮಗಳೂರು: ಕಲ್ಲತ್ತಗಿರಿಯ ವೀರಭದ್ರೇಶ್ವರ ದೇವಸ್ಥಾನದಲ್ಲಿ 10 ಕ್ಕೂ ಹೆಚ್ಚು ಜನರು ಅಪಾಯದಲ್ಲಿ ಸಿಲುಕಿಕೊಂಡಿದ್ದು, ಅತ್ತವೂ ಬರಲಾಗದೇ ಇತ್ತವು ಹೋಗಲಾಗದೇ ಜೀವ ಭಯದಲ್ಲಿದ್ದರು. ಅಗ್ನಿ ಶಾಮಕದಳ ಸಿಬ್ಬಂದಿ ಒಬ್ಬಬ್ಬರನ್ನಾಗಿ ಹಗ್ಗದ ಸಹಾಯದಿಂದ ಸುರಕ್ಷಿತವಾಗಿ ಭಕ್ತಾಧಿಗಳನ್ನು ದಡಕ್ಕೆ ಸೇರಿಸಿದ್ದಾರೆ.

ದೇವಾಲಯದಿಂದ ದಡಕ್ಕೆ ಬಂದ ಭಕ್ತರು

ಕಲ್ಲತ್ತಗಿರಿಯಲ್ಲಿ ನೀರಿನ ಹರಿವಿನ ಮಟ್ಟದಲ್ಲಿ ಹೆಚ್ಚಳ ಉಂಟಾಗಿದ್ದು ವೀರಭದ್ರೇಶ್ವರ ದೇವಾಲಯಕ್ಕೆ ತೆರಳಿದ ಭಕ್ತರು ಪ್ರವಾಹದಲ್ಲಿ ಸಿಲುಕಿ ಕೊಂಡಿದ್ದರು. ಕ್ಷಣ ಕ್ಷಣಕ್ಕೂ ನೀರಿನ ಮಟ್ಟ ಹೆಚ್ಚಾಗುತ್ತಿರುವುದರಿಂದ ಭಕ್ತರಲ್ಲಿ ಭಯದ ವಾತವರಣ ಉಂಟಾಗಿತ್ತು. ಜಲಪಾತದ ಬಲ ಭಾಗದಲ್ಲಿಯೇ ದೇವಸ್ಥಾನ ಇರುವ ಕಾರಣ ಎಲ್ಲಿಯೂ ಹೋಗಲಾರದೇ ಭಕ್ತರು ಅಲ್ಲಿಯೇ ಉಳಿಯುವಂತಾಗಿತ್ತು.

ತದನಂತರ ಸ್ಥಳೀಯರು ಮತ್ತು ಅಗ್ನಿಶಾಮಕದಳದ ಸಹಾಯದಿಂದ ಭಕ್ತಾಧಿಗಳು ಸುರಕ್ಷಿತವಾಗಿ ಹೊರಗಡೆ ಬಂದಿದ್ದು, ಸದ್ಯ ಜೀವಭಯದಿಂದ ಪಾರಾಗಿದ್ದಾರೆ.

Intro:Kn_Ckm_09_Kallatha giri_av_7202347Body:ಚಿಕ್ಕಮಗಳೂರು :-

ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಧಾರಕಾರ ಮಳೆ ಮುಂದುವರೆದಿದೆ.ತರೀಕೆರೆ ತಾಲೂಕಿನಲ್ಲಿ ಧಾರಕಾರ ಮಳೆ ಮುಂದುವರೆದಿದ್ದು ದೇವಸ್ಥಾನಕ್ಕೆ ಹೋಗಿದ್ದಂತಹ ಭಕ್ತರು ಕಲ್ಲತ್ತ ಗಿರಿ ಫಾಲ್ಸ್ ನಲ್ಲಿ ನೀರು ಹೆಚ್ಚಳ ಉಂಟಾಗಿರುವ ಕಾರಣ ಅತ್ತವೂ ಹೋಗದೇ ಇತ್ತವೂ ಬರಲಾಗದೇ ದೇವಸ್ಥಾನದಲ್ಲಿಯೇ ಉಳಿಯುವಂತಾಗಿದೆ.ಕಲ್ಲತ್ತಗಿರಿಯಲ್ಲಿ ನೀರಿನ ಹರಿವಿನ ಮಟ್ಟದಲ್ಲಿ ಹೆಚ್ಚಳ ಉಂಟಾಗಿದ್ದು ವೀರಭದ್ರೇಶ್ವರ ದೇವಾಲಯದಲ್ಲಿ ಭಕ್ತರು ಸಿಲುಕಿ ಕೊಂಡಿದ್ದಾರೆ.ಕ್ಷಣ ಕ್ಷಣಕ್ಕೂ ನೀರಿನ ಮಟ್ಟ ಹೆಚ್ಚಾಗುತ್ತಿರುವುದರಿಂದ ಭಕ್ತರದಲ್ಲಿ ಭಯದ ವಾತವರಣ ಉಂಟಾಗಿದ್ದು ಜಲಪಾತದ ಬಲ ಭಾಗದಲ್ಲಿಯೇ ದೇವಸ್ಥಾನ ಇರೋ ಕಾರಣ ಅಲ್ಲಿಯೇ ಭಕ್ತರು ಉಳಿಯುವಂತಾಗಿದೆ.ಸ್ಥಳಕ್ಕೇ ಅಗ್ನಿಶಾಮಕ ದಳ ಹಾಗೂ ಪೋಲಿಸರು ಸ್ಥಳಕ್ಕೇ ಭೇಟಿ ನೀಡಿದ್ದು ದೇವಸ್ಥಾನದಲ್ಲಿ ಸಿಲುಕಿರುವ ಭಕ್ತಾಧಿಗಳನ್ನು ಸುರಕ್ಷಿತವಾಗಿ ಹೇಗೇ ತರೋದು ಎಂಬ ಕಾರ್ಯಚರಣೆಯಲ್ಲಿದ್ದಾರೆ.....

Conclusion:ರಾಜಕುಮಾರ್.....
ಈ ಟಿವಿ ಭಾರತ್....
ಚಿಕ್ಕಮಗಳೂರು....
Last Updated : Aug 6, 2019, 6:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.