ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ ಮಠಕ್ಕೆ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಮಹಾ ಕುಂಭಾಭಿಷೇಕದಲ್ಲಿ ಭಾಗಿಯಾದರು. ನರಸಿಂಹ ದೇವರ ದರ್ಶನ ಪಡೆದು ನಂತರ ಮಾಧ್ಯಮಗಳ ಜೊತೆ ಮಾತನಾಡುತ್ತಾ, ಈ ಸರ್ಕಾರದ ಜನ್ಮ ಭ್ರಷ್ಟಾಚಾರದ್ದು. ಆಪ್ ಪಾರ್ಟಿ ಸೇರಿರುವ ಭಾಸ್ಕರ್‌ರಾವ್ ಅವರೇ ದೂರಿದ್ದಾರೆ. ಇಂತಹ ಭ್ರಷ್ಟ ಸರ್ಕಾರದಿಂದ ಕರ್ನಾಟಕಕ್ಕೆ ಕೆಟ್ಟ ಹೆಸರು ಎಂದರು.
ಕಾಂಗ್ರೆಸ್ಸಿಗೂ ಪಿಎಸ್‌ಐ ನೇಮಕಾತಿ ಹಗರಣಕ್ಕೂ ಏನ್ ಸಂಬಂಧ?. ಈ ಹಗರಣದ ತನಿಖೆಗೆ ಒತ್ತಾಯಿಸಿದ್ದೇ ಕಾಂಗ್ರೆಸ್. ಕಾನೂನಿನಲ್ಲಿ ಯಾರು ಏನೇ ತಪ್ಪು ಮಾಡಿದರೂ ತನಿಖೆ ಆಗಬೇಕು. ಇಲ್ಲಿ ಸರ್ಕಾರದ ಆಡಳಿತದ ವೈಪಲ್ಯ ಎದ್ದು ಕಾಣುತ್ತಿದೆ ಎಂದರು.
ಕಾನ್ಸ್‌ಟೇಬಲ್ ಇರಲಿ, ಯಾರೇ ಇರಲಿ. ಕಾಂಗ್ರೆಸ್ ಅಧಿಕಾರದಲ್ಲಿ ಇದೆಯೇ?. ಅಧಿಕಾರ ನಡೆಸುತ್ತಿರುವುದು ಬಿಜೆಪಿ. ಅವರು ನಿಮ್ಮ ಆಫೀಸರ್ಗಳು. ನೂರಾರು ಯುವಕರಿಗೆ ಈ ರೀತಿ ಮೋಸ ಮಾಡುತ್ತಿದ್ದೀರಾ. ಒಂದೆಡೆ 40% ಕಮಿಷನ್, ಅದಲ್ಲದೇ ಉದ್ಯೋಗ ಕೊಡುವಾಗಲೂ ಅಕ್ರಮ ಹೀಗೆ ಸಾಲು ಸಾಲು ಅನ್ಯಾಯ ರಾಜ್ಯದ ಮೇಲೆ ಆಗುತ್ತಿದೆ. ಜನರೇ ಇದೆಲ್ಲವನ್ನು ಪ್ರಶ್ನಿಸಬೇಕು ಎಂದು ಹೇಳಿದರು.
ಇದನ್ನೂ ಓದಿ: ರಾಣಾ ದಂಪತಿಗೆ 14 ದಿನಗಳ ನ್ಯಾಯಾಂಗ ಬಂಧನ