ಚಿಕ್ಕಮಗಳೂರು: 85 ವರ್ಷದ ತುಂಬು ಜೀವನ ನಡೆಸಿ, ಗಣಿ ವಿಜ್ಞಾನಿಯಾಗಿ, ಉಪನ್ಯಾಸಕನಾಗಿ, ಸಾಹಿತಿಯಾಗಿ, ಕವಿಯಾಗಿ ನಾಡಿಗೆ ಹಾಗೂ ನಾಡಿನ ಸಾಹಿತ್ಯ ಲೋಕವನ್ನು ಕೆ.ಎಸ್.ನಿಸಾರ್ ಅಹಮದ್ ಶ್ರೀಮಂತಗೊಳಿಸಿದ್ದಾರೆ. ನಾಡೋಜ ಸೇರಿದಂತೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗೆ ಭಾಜನರಾಗಿದ್ದ ನಿತ್ಯೋತ್ಸವದ ಕವಿ ನಮ್ಮನ್ನು ಆಗಲಿದ್ದಾರೆ. ಅವರ ಕುಟುಂಬಕ್ಕೆ ದು:ಖ ಭರಿಸುವ ಶಕ್ತಿ ದೇವರು ದಯಾಪಾಲಿಸಲಿ ಎಂದು ಸಚಿವ ಸಿ.ಟಿ. ರವಿ ಸಂತಾಪ ಸೂಚಿಸಿದ್ದಾರೆ.
ಒಬ್ಬ ಕವಿಯಾಗಿ ಅನುಭವಿಸಿ ಬರೆಯುತ್ತಿದ್ದ ಅವರ ಕವಿತ್ವಗಳಲ್ಲಿ, ಭಾವ ತುಂಬಿದ ಅನುಭವದ ಭಾವನೆಯಿತ್ತು. ಕರ್ನಾಟಕ ಸರ್ಕಾರ, ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ತುಂಬು ಹೃದಯದ ಶ್ರದ್ಧಾಂಜಲಿಯನ್ನು ಅವರಿಗೆ ಸಲ್ಲಿಸುತ್ತೇವೆ ಎಂದು ಅವರು ಹೇಳಿದ್ದಾರೆ.