ಚಿಕ್ಕಮಗಳೂರು: ಗಡಿ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು. ಎರಡು ರಾಜ್ಯಗಳ ವಾಹನಗಳಿಗೆ ಮಸಿ ಬಳಿಯುವುದೆಲ್ಲ ಪ್ರಚೋದನೆಯಾಗುತ್ತದೆ. ಇಂತಹ ಅಹಿತಕರ ಘಟನೆಗಳಿಗೆ ಯಾರೂ ಅವಕಾಶ ಕೊಡಬಾರದು. ಎರಡೂ ರಾಜ್ಯಗಳಲ್ಲಿ ಆಡಳಿತವನ್ನು ನಡೆಸುವವರಿಗೆ ಸೌಹಾರ್ದ ಕಾಪಾಡುವ ಜವಾಬ್ದಾರಿ ಇದೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ದೇವೇಂದ್ರ ಫಡ್ನವಿಸ್ ಈಗಾಗಲೇ ಮಾತಾಡಿದ್ದಾರೆ. ವಿವಾದವನ್ನು ಕಾನೂನಾನಾತ್ಮಕವಾಗಿ ನ್ಯಾಯಾಲಯದ ಮೂಲಕ ಬಗೆಹರಿಸಿಕೊಳ್ಳಲು ಇಬ್ಬರಿಗೂ ಅವಕಾಶವಿದೆ. ಗಡಿ ಮೀರಿ ಸಂಬಂಧಗಳು ಗಟ್ಟಿಯಾಗುತ್ತಿರುವ ಕಾಲದಲ್ಲಿ ಭಾರತೀಯರು ಅನ್ನೋ ಏಕೈಕ ಭಾವನೆಯಲ್ಲಿ ನಾವು ಕೆಲಸ ಮಾಡಬೇಕು. ಗಡಿ ಗೋಡೆಯನ್ನೆತ್ತಿ ಸಂಬಂಧ ಹಾಳು ಮಾಡುವ ಕೆಲಸವನ್ನು ಯಾರೂ ಕೂಡ ಮಾಡಬಾರದು ಎಂದು ಅವರು ಹೇಳಿದರು.
ಇದನ್ನೂ ಓದಿ :ಮಹಾರಾಷ್ಟ್ರ ಪ್ರದೇಶ ಅತಿಕ್ರಮಣಕ್ಕೆ ಕಾಂಗ್ರೆಸ್ ಕಾರಣ: ಉದ್ಧವ್ಗೆ ಸಿ.ಟಿ.ರವಿ ತಿರುಗೇಟು