ಚಿಕ್ಕಮಗಳೂರು: ಅಮೂಲ್ಯ, ಆರ್ದ್ರಾಳಂತೆ ದೇಶದ್ರೋಹ ಚಟುವಟಿಕೆ ಮಾಡುವವರಿಗೆ ಕ್ಷಮೆ ಇರಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಚಿಕ್ಕಮಗಳೂರಿನಲ್ಲಿ ಹೇಳಿದ್ದಾರೆ.
ದೇಶದ್ರೋಹಿ ಹೇಳಿಕೆ ನೀಡಿರುವ ಅವರ ಬಗ್ಗೆ ಕರುಣೆ ತೋರಬಾರದು, ಯಾರು ಕೂಡ ವಕಾಲತ್ತು ವಹಿಸಬಾರದು, ಪಾಕಿಸ್ತಾನ್ ಜಿಂದಾಬಾದ್ ಅಂತ ಕೂಗೋದು ದೇಶಭಕ್ತಿನಾ? ಫ್ರೀ ಕಾಶ್ಮೀರ ಅಂತ ಕೂಗೋದು ದೇಶಭಕ್ತಿನಾ ? ಅಸ್ಸಾಂ ರಾಜ್ಯವನ್ನು ತುಂಡರಿಸುವುದು ದೇಶಭಕ್ತಿನಾ ? ಇದೆಲ್ಲ ತುಕುಡೆ ಗ್ಯಾಂಗ್ ಗಳ ಕೆಲಸ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.
ತುಕಡೆ ಗ್ಯಾಂಗ್ ಗಳ ಯೋಜನೆಯ ಪ್ರಕಾರ ಅವರೆಲ್ಲಾ ಮಾತನಾಡುತ್ತಿದ್ದಾರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಮುಜುಗರ ಉಂಟು ಮಾಡಿ, ಪಾಕಿಗಳನ್ನ ಖುಷಿಪಡಿಸುವ ಕೆಲಸ ಮಾಡುತ್ತಿದ್ದು ಪಾಕಿಸ್ತಾನಕ್ಕೆ ಖುಷಿ ಪಡಿಸೋರಿಗೆ, ಖುಷಿ ಪಡಿಸೋ ಕೆಲಸ ಮಾಡುವವರಿಗೆ ನಮ್ಮ ದೇಶದಲ್ಲಿ ಏಕೆ ಅನ್ನ ಹಾಕಬೇಕು. ಅಂತವರನ್ನು ಪಾಕಿಸ್ತಾನಕ್ಕೆ ಕಳಿಸೋಣ. ಇಲ್ಲಿ ಮುಖ ತೋರಿಸಲು ಅವಕಾಶವಿದೆ. ಪಾಕಿಸ್ತಾನದಲ್ಲಿ ಮುಖ ತೋರಿಸಲು ಅವಕಾಶವಿಲ್ಲ ಎಂದು ಚಿಕ್ಕಮಗಳೂರಿನಲ್ಲಿ ಸಚಿವ ಸಿ.ಟಿ. ರವಿ ಹೇಳಿದರು.