ಚಿಕ್ಕಮಗಳೂರು: ಭಾರತವನ್ನು ಇಬ್ಭಾಗ ಮಾಡುವಾಗ ಸಹಿ ಹಾಕಿದ್ದು ಕಾಂಗ್ರೆಸ್, ಬಿಜೆಪಿಯಲ್ಲ ಎಂದು ಚಿಕ್ಕಮಗಳೂರಿನಲ್ಲಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
ಈ ಕುರಿತು ನಗರದಲ್ಲಿ ಮಾತನಾಡಿದ ಅವರು, ಕೋಟ್ಯಾಂತರ ಜೀವವನ್ನ ಮತಾಂದರ ಕೈಗೆ ಕೊಟ್ಟು ಬಂದರು. ಮಹಿಳೆಯರು ಮಾನ-ಪ್ರಾಣ ಉಳಿಸಿಕೊಳ್ಳಲಾಗದೆ ಸಾಯಬೇಕಾಯ್ತು. ಇಂತಹ ವಿಭಜಿತ ಭಾರತವನ್ನ ಸ್ವಾತಂತ್ರ್ಯ ಹೋರಾಟಗಾರರು ನಿರೀಕ್ಷಿಸಿರಲಿಲ್ಲ. ಅದಕ್ಕೆ ಕಾಂಗ್ರೆಸ್ಗೆ ಪಶ್ಚಾತಾಪ ಇದೆಯಾ? ಎಂದು ಸಿ.ಟಿ ರವಿ ಪ್ರಶ್ನೆ ಹಾಕಿದರು.
ತುರ್ತು ಪರಿಸ್ಥಿತಿ ಹೇರಿಕೆ ನಮ್ಮಿಂದಾದ ಅಪರಾಧ ಅಂತ ವರ್ಷಗಳ ಬಳಿಕ ಪಶ್ಚಾತ್ತಾಪಪಟ್ಟಿತು. ಭಾರತ ವಿಭಜನೆಗೆ ಸಹಿ ಹಾಕಿದ್ದು ಅಪರಾಧ ಅಂತ ಕಾಂಗ್ರೆಸ್ಗೆ ಅನ್ನಿಸುತ್ತದೆಯೇ? ಈ ಪ್ರಶ್ನೆಗೆ ಉತ್ತರಿಸಿ ಕಾಂಗ್ರೆಸ್ ಪಾದಯಾತ್ರೆ ಮುಂದುವರೆಸಲಿ, ಆಗ ಅದಕ್ಕೊಂದು ಅರ್ಥವಿರುತ್ತದೆ. ಕಾಂಗ್ರೆಸ್ ದುರ್ಬಲವಾಗುತ್ತಿದೆ. ಅದಕ್ಕೆ ರಾಹುಲ್ ಗಾಂಧಿ ಬಲ ತುಂಬಲು ಹೊರಟಿದ್ದಾರೆ. ಪ್ರಿಯಾಂಕ ವಾದ್ರಾ ಅವರೇ ನೇತೃತ್ವ ವಹಿಸಿದ್ದರೂ 387 ಸ್ಥಾನದಲ್ಲಿ ಠೇವಣಿ ಹೋಯ್ತು. ನೀತಿ, ನಿಯತ್ತು, ನೇತೃತ್ವ ಇಲ್ಲದ ಕಡೆ ಬಲ ಸಿಗಲ್ಲ. ಕಾಂಗ್ರೆಸ್ಗೆ ಈ ಮೂರೂ ಇಲ್ಲ ಎಂದರು.
ಓದಿ: ಬಿಜೆಪಿಯವರು ಅನಗತ್ಯವಾಗಿ ಜಗಳಕ್ಕೆ ಬರ್ತಿದ್ದಾರೆ: ಸಿಎಂ ಇಬ್ರಾಹಿಂ ವಾಗ್ದಾಳಿ