ಚಿಕ್ಕಮಗಳೂರು: ಕೊರೊನಾ ಭೀತಿ ಮರೆತು ಕರ್ಫ್ಯೂ ನಿಯಮ ಉಲ್ಲಂಘಿಸಿ ಜನರು ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದ ದೃಶ್ಯ ನಗರದ ಮೀನು ಮಾರುಕಟ್ಟೆಯಲ್ಲಿ ಕಂಡು ಬಂತು.
ಸರ್ಕಾರ ಕೋವಿಡ್ ಚೇನ್ ಕಟ್ ಮಾಡಲು ಲಾಕ್ಡೌನ್ ಪ್ರಯೋಗ ಬಳಸಿದರೂ ಜನರು ಮಾತ್ರ ತಮಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವ ರೀತಿ ವರ್ತಿಸುತ್ತಿದ್ದಾರೆ. ಮೊದಲೇ ರಾಜ್ಯದಲ್ಲಿ ಲಸಿಕೆ, ಆಕ್ಸಿಜನ್, ಬೆಡ್ ಸಮಸ್ಯೆ ತಲೆದೋರಿದ್ದು, ಈ ರೀತಿಯ ಘಟನೆಗಳಿಂದ ಸೋಂಕು ಹೆಚ್ಚಾಗುವ ಭೀತಿ ಉಂಟಾಗಿದೆ.
ಅಲ್ಲದೆ, ನಾಳೆಯಿಂದ ರಾಜ್ಯದಲ್ಲಿ ಕಠಿಣ ಲಾಕ್ಡೌನ್ ಜಾರಿಗೆ ಬರಲಿದ್ದು, ಸುಖಾಸುಮ್ಮನೆ ರಸ್ತೆಗೆ ಬಂದ್ರೆ ಪೊಲೀಸರ ಲಾಠಿ ಏಟಿನ ರುಚಿ ಸವಿಯುವದಂತೂ ನಿಜ. ಆದ್ರೂ ಸರ್ಕಾರದ ಕೆಲ ನಿಯಮಗಳು ಕೂಡಾ ಜನರು ಗುಂಪುಗೂಡಲು ಅವಕಾಶ ಮಾಡಿಕೊಡುತ್ತಿವೆ.