ಚಿಕ್ಕಮಗಳೂರು : ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ದೇಹದ ಪಕ್ಕವೇ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ರೇ, ಅವರ ಪಕ್ಕವೇ ಸಂಬಂಧಿಕರೂ ಇರಬೇಕಾದ ಸ್ಥಿತಿ ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಯಲ್ಲಿ ಇದೆ.
ಚಿಕ್ಕಮಗಳೂರು ಕೋವಿಡ್ ಆಸ್ಪತ್ರೆಯ ಅವಾಂತರಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪಕ್ಕದ ಬೆಡ್ನಲ್ಲಿ ಮೃತದೇಹವಿದ್ರೂ ಸೋಂಕಿತರು ಅಲ್ಲೇ ಊಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪಿಪಿಇ ಕಿಟ್ ಧರಿಸದೆ ಸೋಂಕಿತರ ಸಂಪರ್ಕವನ್ನು ಸಂಬಂಧಿಕರು ಮಾಡುತ್ತಿದ್ದಾರೆ. ಸಂಬಂಧಿಕರು ಹೊರಗಡೆ ಬಂದ ನಂತರ, ಬಿಂದಾಸಾಗಿ ಓಡಾಟ ನಡೆಸುತ್ತಿದ್ದಾರೆ.
ಕೆಲ ಜನರ ಈ ರೀತಿಯ ಬೇಜವಾಬ್ದಾರಿಯಿಂದಲೇ ಕೊರೋನಾ ಹೆಚ್ಚಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇಂತಹ ಕಾರಣಗಳಿಂದಲೇ ಕೊರೊನಾ ಹೆಚ್ಚಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಮೂರು ಬಾರಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಐನಾತಿ ಕಳ್ಳರು ನಾಲ್ಕನೇ ಬಾರಿಗೆ ಅಂದರ್