ETV Bharat / state

ಮಳೆಗಾಗಿ ಋಷ್ಯಶೃಂಗನಿಗೆ ಪರ್ಜನ್ಯ ಜಪ ನೆರವೇರಿಸಿದ ಕೈ ನಾಯಕರು - undefined

ಮಳೆ ದೇವರೆಂದೇ ಖ್ಯಾತಿಯಾಗಿರೋ ಋಷ್ಯಶೃಂಗನ ಸನ್ನಿಧಿಯಲ್ಲಿ ಸಚಿವ ಡಿ.ಕೆ‌.ಶಿವಕುಮಾರ್ ಹಾಗೂ ಪಿ.ಟಿ.ಪರಮೇಶ್ವರ್ ನಾಯ್ಕ ಪರ್ಜನ್ಯ  ಜಪ, ಪೂಜೆ ನೆರವೇರಿಸಿದರು.

ಮಳೆಗಾಗಿ ಋಶ್ಯಶೃಂಗನಿಗೆ ಪರ್ಜನ್ಯ ಜಪ ನೆರವೇರಿಸಿದ ಕೈ ನಾಯಕರು
author img

By

Published : Jun 6, 2019, 8:56 AM IST

Updated : Jun 6, 2019, 11:14 AM IST

ಚಿಕ್ಕಮಗಳೂರು: ಮಳೆಗಾಗಿ ಪ್ರರ್ಥಿಸಿ ಶೃಂಗೇರಿಯ ಕಿಗ್ಗಾದಲ್ಲಿರುವ ಋಷ್ಯಶೃಂಗ ಮಳೆ ದೇವರಿಗೆ ಸಚಿವ ಡಿ.ಕೆ‌.ಶಿವಕುಮಾರ್ ಹಾಗೂ ಪಿ.ಟಿ.ಪರಮೇಶ್ವರ್ ನಾಯ್ಕ ಪರ್ಜನ್ಯ ಜಪ ನೆರವೇರಿಸಿದರು.

ಮಳೆಗಾಗಿ ಋಶ್ಯಶೃಂಗನಿಗೆ ಪರ್ಜನ್ಯ ಜಪ ನೆರವೇರಿಸಿದ ಕೈ ನಾಯಕರು

ರಾಜ್ಯದಲ್ಲಿ ಉತ್ತಮ ಮಳೆಗಾಗಿ ಮಳೆ ದೇವರು ಋಷ್ಯಶೃಂಗನಿಗೆ ವಿಶೇಷ ಪೂಜೆ ನಡೆಸಲಾಯಿತು. ಪರ್ಜನ್ಯ ಜಪ ಬೆಳಿಗ್ಗೆ 5.30ಕ್ಕೆ ಪ್ರಾರಂಭವಾಗಿ 6.30ರವರೆಗೆ ನಡೆಯಿತು. ಜೊತೆಗೆ 6 ಗಂಟೆ 5 ನಿಮಿಷಕ್ಕೆ ಬ್ರಾಹ್ಮಿ ಮಹೂರ್ತದ ಸಂಕಲ್ಪ ಕಾರ್ಯ ಕೂಡ ನೆರವೇರಿತು.

ಮಳೆ ದೇವರೆಂದೇ ಖ್ಯಾತಿಯಾಗಿರೋ ಋಷ್ಯಶೃಂಗನಿಗೆ 21 ಅರ್ಚಕರಿಂದ ಪರ್ಜನ್ಯ ಜಪ ನೆರವೇರಿತು. ಪ್ರತಿ ಅರ್ಚಕರು 1008ರಂತೆ ಸುಮಾರು 10 ಸಾವಿರಕ್ಕು ಹೆಚ್ಚು ಅಧಿಕ ಪರ್ಜನ್ಯ ಜಪಗಳನ್ನು ಸಮೃದ್ಧ ಮಳೆಗಾಗಿ ನಡೆಸಿದರು. ಅನಂತರ ಋಷ್ಯಶೃಂಗನಿಗೆ ರುದ್ರಾಭಿಷೇಕ ಜಪ ಪ್ರಾರಂಭವಾಗಿದ್ದು, ಕೈ ಸಚಿವ ಪರಮೇಶ್ವರ್​ ನಾಯ್ಕ ಚಾಲನೆ ನೀಡಿದರು.

ಈ ವಿಶೇಷ ಪೂಜೆಗಾಗಿ ಕಳೆದ ರಾತ್ರಿಯೇ ಶೃಂಗೇರಿಯಲ್ಲಿ‌ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಪಿ.ಟಿ.ಪರಮೇಶ್ವರ್ ನಾಯ್ಕ ವಾಸ್ತವ್ಯ ಹೂಡಿದ್ದರು. ಕಿಗ್ಗಾದ ಋಷ್ಯಶೃಂಗ, ಡಿ.ಕೆ.ಶಿವಕುಮಾರ್ ಅವರ ನಂಬಿಕೆಯ ಹಾಗೂ ಇಷ್ಟ ದೈವ ಆಗಿದೆ. ಈ ಹಿಂದೆ ಕೂಡ ಮಳೆಗಾಗಿ ಡಿ.ಕೆ.ಶಿವಕುಮಾರ್ ಇಲ್ಲಿ ಮಳೆಗಾಗಿ ಬೇಡಿಕೊಂಡಿದ್ದರು. ಅನಂತರ ರಾಜ್ಯದಲ್ಲಿ ಉತ್ತಮ ಮಳೆಯಾಗಿತ್ತು. ಮಳೆಯಾದ ಮೇಲೆ ಡಿ.ಕೆ.ಶಿವಕುಮಾರ್ ಅವರು ದೇವಸ್ಥಾನಕ್ಕೆ ಬಂದು ಹರಕೆ ತೀರಿಸಿದ್ದರು.

Intro:R_kn_ckm_01_06_kigga pooje_Rajakumar_ckm_av_7202347Body:

ಚಿಕ್ಕಮಗಳೂರು :-

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಗಾಗಿ ರಾಜ್ಯ ಮೈತ್ರಿ ಸರ್ಕಾರದಿಂದ ವಿಶೇಷ ಪೂಜೆ, ಹೋಮ ಮಾಡಲಾಗುತ್ತಿದೆ.ಮೈತ್ರಿ ಸರ್ಕಾರದ ವತಿಯಿಂದ ಸಚಿವ ಡಿ.ಕೆ‌ ಶಿವಕುಮಾರ್, ಪಿ.ಟಿ ಪರಮೇಶ್ವರ್ ನಾಯ್ಕ್ ರಿಂದ ಶೃಂಗೇರಿಯ ಕಿಗ್ಗಾ ದಲ್ಲಿರುವ ಋಶ್ಯ ಶೃಂಗ ಮಳೆ ದೇವರಿಗೆ ವಿಶೇಷ ಪೂಜೆ ಮಾಡಲಾಗುತ್ತಿದ್ದು ರಾಜ್ಯದಲ್ಲಿ ಉತ್ತಮ ಮಳೆಗಾಗಿ ಮಳೆ ದೇವರು ಋಷ್ಯಶೃಂಗನಿಗೆ ವಿಶೇಷ ಪೂಜೆ ನಡೆಸಲಾಗುತ್ತಿದೆ. ಶೃಂಗೇರಿ ತಾಲೂಕಿನಲ್ಲಿರುವ ಕಿಗ್ಗಾ ಋಷ್ಯಶೃಂಗ ದೇವಾಲಯದಲ್ಲಿ ಇಬ್ಬರು ಸಚಿವರಿಂದ ಮಳೆಗಾಗಿ ಪರ್ಜನ್ಯ ಹೋಮ, ಜಪ, ನಡೆಸಲಾಗುತ್ತಿದೆ.ಸಚಿವ ಡಿ.ಕೆ.ಶಿವಕುಮಾರ್, ಪಿ.ಟಿ‌ ಪರಮೇಶ್ವರ್ ನಾಯ್ಕ್ ನೇತೃತ್ವದಲ್ಲಿ ವಿಶೇಷ ಪೂಜೆ ಹಾಗೂ ಹೋಮ ಮಾಡುತ್ತಿದ್ದು ಬೆಳಿಗ್ಗೆ 5.30 ರಿಂದ ಪರ್ಜನ್ಯ ಹೋಮ ಪ್ರಾರಂಭ ಆಗಲಿದೆ.ಈ ವಿಶೇಷ ಪೂಜೆಗಾಗಿ ಕಳೆದ ರಾತ್ರಿಯೇ ಶೃಂಗೇರಿಯಲ್ಲಿ‌ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಪಿ.ಟಿ ಪರಮೇಶ್ವರ್ ನಾಯ್ಕ ವಾಸ್ತವ್ಯ ಮಾಡಿದರು.ಕಿಗ್ಗಾ ದ
ಋಷ್ಯಶೃಂಗ, ಡಿ.ಕೆ ಶಿವಕುಮಾರ್ ಅವರ ನಂಬಿಕೆಯ ಹಾಗೂ ಇಷ್ಟದೈವ ಆಗಿದೆ.ಈ ಹಿಂದೆ ಕೂಡ ಮಳೆಗಾಗಿ ಡಿಕೆ ಶಿವಕುಮಾರ್ ಇಲ್ಲಿ ಮಳೆಗಾಗಿ ಬೇಡಿಕೊಂಡಿದ್ದರು ನಂತರ ರಾಜ್ಯದಲ್ಲಿ ಉತ್ತಮ ಸಮೃದ್ಧ ಮಳೆಯಾಗಿತ್ತು. ಮಳೆಯಾದ ಮೇಲೆ ಬಂದು ಡಿ ಕೆ ಶಿವಕುಮಾರ್ ಅವರು ದೇವಸ್ಥಾನಕ್ಕೆ ಬಂದು ಹರಕೆ ತೀರಿಸಿದ್ದರು...Conclusion:ರಾಜಕುಮಾರ್....
ಈಟಿವಿ ಭಾರತ್....
ಚಿಕ್ಕಮಗಳೂರು....
Last Updated : Jun 6, 2019, 11:14 AM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.