ಚಿಕ್ಕಮಗಳೂರು: ಚಿಕ್ಕಮಗಳೂರಿನ ಹಿರೇಕೊಳಲೆ ಸಮೀಪ ಇರುವ ಲೈಕ್ ವ್ಯೂ ಹಿರೇಕೊಳಲೆ ಹೋಂ ಸ್ಟೇಯನ್ನು ಪಟ್ಟಣ ಸಹಕಾರ ಬ್ಯಾಂಕ್ ಸಿಬ್ಬಂದಿ ಸೀಜ್ ಮಾಡಿದ್ದಾರೆ. ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಬ್ಯಾಂಕಿನ ಸಿಬ್ಬಂದಿಯು ಮಾಲೀಕರಿಗೆ ಹಲವು ಬಾರಿ ನೋಟಿಸ್ ನೀಡಿದ್ದಾರೆ. ನೋಟಿಸಿಗೆ ಯಾವುದೇ ಪ್ರತ್ಯುತ್ತರ ನೀಡಿದ ಹಿನ್ನೆಲೆಯಲ್ಲಿ ಸರ್ಫೇಸಿ ಕಾಯ್ದೆಯನ್ವಯ ಹೋಂ ಸ್ಟೇಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
2 ಎಕರೆ ಪ್ರದೇಶದಲ್ಲಿ ಇರುವ ಹೋಂ ಸ್ಟೇ ಮೇಲೆ ಕಾಂಗ್ರೆಸ್ ಮುಖಂಡ ಶ್ರೀಧರ್ ಉರಾಳ್, ಶಿವಾನಂದ, ಲೀಲಾವತಿ ಎನ್ನುವರು ಚಿಕ್ಕಮಗಳೂರು ನಗರದಲ್ಲಿರುವ ಪಟ್ಟಣ ಸಹಕಾರ ಬ್ಯಾಂಕಿನಲ್ಲಿ 1998 ರಲ್ಲಿ ಸಾಲ ಮಾಡಿದ್ದರು. ಹೋಂ ಸ್ಟೇ ಮೇಲೆ ಸಾಲ ತೆಗೆದುಕೊಂಡು ಇವರು ಸಾಲ ಮರುಪಾವತಿಯನ್ನೇ ಮಾಡಿರಲಿಲ್ಲ. ಹಲವು ಬಾರಿ ಬ್ಯಾಂಕಿನಿಂದ ನೋಟಿಸ್ ಜಾರಿ ಮಾಡಿದ್ದರು. ಇದಕ್ಕೆ ಯಾವುದೇ ಉತ್ತರವನ್ನು ಈ ಮೂವರು ಕೊಟ್ಟಿರಲಿಲ್ಲ ಎನ್ನಲಾಗ್ತಿದೆ. ಈ ಹಿನ್ನೆಲೆ ಬ್ಯಾಂಕಿನ ಸಿಬ್ಬಂದಿ ಹೋಂ ಸ್ಟೇಗೆ ನೋಟಿಸ್ ಅಂಟಿಸಿ ಮುಟ್ಟುಗೋಲು ಹಾಕಿಕೊಂಡರು.
ಜಿಲ್ಲಾಧಿಕಾರಿಗಳಾದ ರಮೇಶ್ ಹಾಗೂ ಪೊಲೀಸ್ ಇಲಾಖೆ ಅನುಮತಿ ಪಡೆದು ಬ್ಯಾಂಕ್ ಸಿಬ್ಬಂದಿ ಹೋಂ ಸ್ಟೇಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. 1998 ರಲ್ಲಿ 20 ಲಕ್ಷ ರೂಪಾಯಿ ಸಾಲವನ್ನು ಪಡೆದು ಅದರ ಬಡ್ಡಿ ಅಸಲನ್ನು ಈವರೆಗೂ ಕೂಡ ಮರುಪಾವತಿಯನ್ನು ಮಾಲೀಕರು ಮಾಡಿಲ್ಲ ಎನ್ನಲಾಗ್ತಿದೆ.
ಇದನ್ನೂ ಓದಿ: ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಲು ನಕಲಿ ಅಂಕಪಟ್ಟಿ ನೀಡಿದ ಆರೋಪ : ಯುವಕನ ವಿರುದ್ಧ ಎಫ್ಐಆರ್ ದಾಖಲು