ETV Bharat / state

ಪೊಲೀಸ್ ಸಿಬ್ಬಂದಿಗೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ ಕಿಡಿಗೇಡಿ - ತುರ್ತು ವಾಹನದ ಚಾಲಕನಗೆ ಬೆಂಕಿ ಹಚ್ಚಿದ ಕಿಡಿಗೇಡಿ

ಪೊಲೀಸ್​ 112 ತುರ್ತು ವಾಹನ ಚಾಲಕ ತ್ರಿಮೂರ್ತಿ ಮೇಲೆ ದೇವರಾಜ್ ಪೆಟೋಲ್​ ಎರಚಿ ಬೆಂಕಿ ಹಚ್ಚಿದ್ದಾನೆ. ತ್ರಿಮೂರ್ತಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ದೇವರಾಜ್​ನನ್ನು ಸ್ಥಳೀಯರು ಮರಕ್ಕೆ ಕಟ್ಟಿಹಾಕಿ ಪೊಲೀಸರಿಗೆ ಒಪ್ಪಿಸಿದ್ದಾರೆ.

Patrol attack on police
ಕಳಸ ವ್ಯಾಪ್ತಿಯಲ್ಲಿ ಕಳ್ಳತನ
author img

By

Published : Mar 15, 2022, 10:46 PM IST

ಚಿಕ್ಕಮಗಳೂರು: ಪೊಲೀಸ್ 112 ತುರ್ತು ವಾಹನದ ಚಾಲಕನ ಮೇಲೆ ಕಿಡಿಗೇಡಿಯೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

ಕೊಪ್ಪ ತಾಲೂಕಿನ ನುಗ್ಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಗೆ ಗ್ರಾಮದ ಜಂಬೇಕಾಡು ಎಂಬಲ್ಲಿ ಈ ಘಟನೆ ನಡೆದಿದ್ದು, ಜಂಬೇಕಾಡು ಗ್ರಾಮದ ದೇವರಾಜ್ (25) ಎಂಬ ಯುವಕನು ಗ್ರಾಮದಲ್ಲಿ ಆಗಾಗ್ಗೆ ಘಲಾಟೆಗಳನ್ನು ಮಾಡುತ್ತಿದ್ದ. ಆತನ ತಂದೆ, ತಾಯಿ ಜೊತೆ ಗಲಾಟೆ ನಡೆಸಿ, ವಾಸವಿದ್ದ ಗುಡಿಸಲಿಗೆ ಬೆಂಕಿ ಹಚ್ಚಿದ್ದ. ಈ ವೇಳೆಯಲ್ಲಿ ಸ್ಥಳೀಯರು 112 ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆಗ ಕೊಪ್ಪದ 112 ವಾಹನ ಚಾಲಕ ತ್ರಿಮೂರ್ತಿ ಹಾಗೂ ಪೇದೆ ರಘು ಘಟನಾ ಸ್ಥಳಕ್ಕೆ ಹೋದಾಗ ಈ ಘಟನೆ ನಡೆದಿದೆ.

ಪೊಲೀಸ್ ಸಿಬ್ಬಂದಿಗೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ ಕಿಡಿಗೇಡಿ

ದೇವರಾಜ್‌ನ ಗುಡಿಸಲು ಬಳಿ ಚಾಲಕ ತ್ರಿಮೂರ್ತಿ ಹಾಗೂ ಪೇದೆ ರಘು ವಿಚಾರಿಸಿಲು ತೆರಳಿದ್ದಾರೆ. ಈ ವೇಳೆಯಲ್ಲಿ ಆತನು ಕಾಲಿನ ಭಾಗಕ್ಕೆ ಪೆಟ್ರೋಲ್ ಎರಚಿ ಬೆಂಕಿ ಹಾಕಿದ್ದಾನೆ. ಸಮೀಪದಲ್ಲಿ ಇದ್ದ ಸ್ಥಳೀಯರು ಚಾಲಕನ ನೆರವಿಗೆ ಧಾವಿಸಿದ್ದಾರೆ.

ಚಾಲಕನ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಾಕಿದ ದೇವರಾಜ್‌ನನ್ನು ಸ್ಥಳೀಯರು ಹಿಡಿದು ಮರಕ್ಕೆ ಕಟ್ಟಿ ಹಾಕಿದ್ದಾರೆ. ಕೊಪ್ಪ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ. ಆಸ್ಪತ್ರೆಗೆ ಕೊಪ್ಪ ಠಾಣಾಧಿಕಾರಿ ಶ್ರೀನಾಥ್ ರೆಡ್ಡಿ ಬೇಟಿ ನೀಡಿ, ಪರಿಶೀಲನೆ ನಡೆಸಿ ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಕಳಸ ವ್ಯಾಪ್ತಿಯಲ್ಲಿ ಕಳ್ಳತನ: ಹಿರೇಬೈಲ್ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಮೂರು ಅಂಗಡಿ ಕಳ್ಳತನ ಮಾಡಲಾಗಿದ್ದು, ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಹಿರೇಬೈಲ್ ಗ್ರಾಮದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.

ಕಳಸ ವ್ಯಾಪ್ತಿಯಲ್ಲಿ ಕಳ್ಳತನ

ಚಾಲಾಕಿ ಖದೀಮ ಕಳ್ಳತನ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಗ್ಯಾರೇಜ್, ಸಲೂನ್ ಶಾಪ್, ಚಪ್ಪಲಿ ಅಂಗಡಿಗಳಲ್ಲಿ ಕಳ್ಳತನ ಮಾಡಿದ್ದಾನೆ. ಈ ಬಗ್ಗೆ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಈ ಕುರಿತು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧಕಾರ್ಯ ಮುಂದುವರಿಸಿದ್ದಾರೆ.

ಇದನ್ನೂ ಓದಿ: ದೊಡ್ಡಬಳ್ಳಾಪುರ: ಪೂಜಾ ಸಾಮಗ್ರಿ ತರಲು ಹೋಗಿದ್ದ ತಂದೆ-ಮಗ ರಸ್ತೆ ಅಪಘಾತದಲ್ಲಿ ದುರ್ಮರಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.