ETV Bharat / state

ರಾಜೀನಾಮೆಗೆ ಒತ್ತಾಯಿಸೋದು ಸ್ವಾಭಾವಿಕ, ನಾವು ವಿಪಕ್ಷದಲ್ಲಿದ್ದರೂ ಅದನ್ನೇ ಮಾಡುತ್ತಿದ್ದೆವು: ಸಿ.ಟಿ. ರವಿ - c t ravi on santhosh suicide case

ಸಂತೋಷ್ ಪಾಟೀಲ್ ಸಾವು ದುರಾದೃಷ್ಟಕರ. ಅವರು ಆತ್ಮಹತ್ಯೆ ದಾರಿ ಹಿಡಿಯಬಾರದಿತ್ತು. ಈ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಮುಖ್ಯಮಂತ್ರಿಗೆ ಮನವಿ ಮಾಡುತ್ತೇನೆಂದರು. ಯಾವುದೇ ಕಾಮಗಾರಿಯಾದರೂ ಸರ್ಕಾರದ ನಿಯಮಗಳ ಅಡಿಯಲ್ಲಿ ಕಾರ್ಯ ನಿರ್ವಹಿಸಬೇಕು..

c t ravi reacts on eshwarappa resignation matter
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ
author img

By

Published : Apr 13, 2022, 2:46 PM IST

ಚಿಕ್ಕಮಗಳೂರು : ಇಂತಹ ಪ್ರಕರಣಗಳು ನಡೆದಾಗ ಆಡಳಿತ ಪಕ್ಷದವರು ರಾಜೀನಾಮೆ ನೀಡಬೇಕೆಂದು ವಿರೋಧ ಪಕ್ಷದವರು ಕೇಳೋದು ಸ್ವಾಭಾವಿಕ. ನಾವು ವಿಪಕ್ಷದಲ್ಲಿದ್ದರೂ ಅದನ್ನೇ ಮಾಡುತ್ತಿದ್ದೆವು. ಸಚಿವ ಕೆ.ಎಸ್ ಈಶ್ವರಪ್ಪ ವಯಸ್ಸು, ಅನುಭವ ಎರಡರಲ್ಲೂ ದೊಡ್ಡವರು. ಸಾರ್ವಜನಿಕ ಸಂಶಯ ದೂರವಾಗಿಸಲು ಮುಖ್ಯಮಂತ್ರಿ ಬೊಮ್ಮಾಯಿ, ಸಚಿವ ಈಶ್ವರಪ್ಪ ಸೂಕ್ತ ನಿರ್ಣಯ ಕೈಗೊಳ್ಳುತ್ತಾರೆ ಎಂದು ಗುತ್ತಿಗೆದಾರ ಸಂತೋಷ್ ಪಾಟೀಲ್ ಅತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪ್ರತಿಕ್ರಿಯೆ ನೀಡಿದ್ದಾರೆ.

ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ ಸಂಬಂಧ ಬಿಜೆಪಿ ರಾಷ್ಟ್ರೀಯ ಪ್ರ. ಕಾರ್ಯದರ್ಶಿ ಸಿ ಟಿ ರವಿ ಪ್ರತಿಕ್ರಿಯೆ ನೀಡಿರುವುದು..

ಈ ಬಗ್ಗೆ ಪಕ್ಷದಿಂದ ಯಾವುದೇ ಸೂಚನೆ ನೀಡಿಲ್ಲ. ಪ್ರಕರಣದಲ್ಲಿ ಮೇಲ್ನೋಟಕ್ಕೆ ಈಶ್ವರಪ್ಪನವರ ಪಾತ್ರ ಕಂಡು ಬಂದಿಲ್ಲ. ನಾನು ಹೇಳಿದ್ರೆ ಯಾರೂ ನಂಬಲ್ಲ. ನಾನು ತನಿಖಾ ಏಜೆನ್ಸಿ ಅಲ್ಲ. ಕಾಂಗ್ರೆಸ್ ಅಥವಾ ಬೇರೆಯವರು ದಾಖಲೆ ಇದ್ರೆ ತನಿಖಾ ಸಂಸ್ಥೆ ಮುಂದೆ ಸಲ್ಲಿಸಲಿ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸ್ತಾರೆ ಎಂದು ಹೇಳಿದರು.

ಇದನ್ನೂ ಓದಿ: ನೂರಕ್ಕೆ ನೂರರಷ್ಟು ನಾನು ರಾಜೀನಾಮೆ ಕೊಡುವುದಿಲ್ಲ; ಸಚಿವ ಈಶ್ವರಪ್ಪ

ಸಂತೋಷ್ ಪಾಟೀಲ್ ಸಾವು ದುರಾದೃಷ್ಟಕರ. ಅವರು ಆತ್ಮಹತ್ಯೆ ದಾರಿ ಹಿಡಿಯಬಾರದಿತ್ತು. ಈ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಮುಖ್ಯಮಂತ್ರಿಗೆ ಮನವಿ ಮಾಡುತ್ತೇನೆಂದರು. ಯಾವುದೇ ಕಾಮಗಾರಿಯಾದರೂ ಸರ್ಕಾರದ ನಿಯಮಗಳ ಅಡಿಯಲ್ಲಿ ಕಾರ್ಯ ನಿರ್ವಹಿಸಬೇಕು.

ವರ್ಕ್ ಅರ್ಡರ್ ಇಲ್ಲದೇ ಬಿಲ್ ಕೊಡೋಕೆ ಸಾಧ್ಯವಿಲ್ಲ. ಯಾರ ಮಾತು ಕೇಳಿ ಕೆಲಸ ಮಾಡಿರುವ ಬಗ್ಗೆ ತನಿಖೆಯಿಂದ ಗೊತ್ತಾಗಬೇಕು. ವರ್ಕ್ ಆರ್ಡರ್ ಇಲ್ಲದೇ ಯಾಕೆ ಕೆಲಸ ಮಾಡಿದ್ರು, ಹೇಗೆ ಮಾಡಿದ್ರು ಎಂಬುದನ್ನು ತಿಳಿಯಲು ಈ ಕೇಸ್ ಬಗ್ಗೆ ಸಮಗ್ರ ತನಿಖೆಗೆ ಆಗ್ರಹಿಸುತ್ತೇನೆಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.