ETV Bharat / state

ಅಯ್ಯೋ.. 100 ರೂಪಾಯಿ ದುಡಿಯಲು ಹೋಗಿ ₹6000 ಕಳೆದುಕೊಂಡ ಆಟೋ ಚಾಲಕ.. - ಚಿಕ್ಕಮಗಳೂರಲ್ಲಿ ನೂರು ರೂಪಾಯಿ ಬಾಡಿಗೆಗಾಗಿ 6000 ಕಳೆದುಕೊಂಡ ಆಟೋ ಚಾಲಕ

ಸೇತುವೆ ಕುಸಿದಿದ್ದಕ್ಕೆ ಕಳಪೆ ಕಾಮಗಾರಿಯೇ ಕಾರಣ. ಅಧಿಕಾರಿಗಳು ಹಾಗೂ ಗುತ್ತಿಗೆದಾರನ ತಪ್ಪಿನಿಂದ ಈ ಅನಾಹುತ ಸಂಭವಿಸಿರೋದು. ಇದಕ್ಕೆ ಯಾರು ಹೊಣೆ ಎಂದು ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. 100 ರೂಪಾಯಿ ಬಾಡಿಗೆಗೆ ಬಂದ ಆಟೋ ಚಾಲಕ ₹6000 ಕಳೆದುಕೊಂಡು ಸಾಲಗಾರನಾದಂತಾಗಿದೆ..

100 ರೂಪಾಯಿ ಬಾಡಿಗೆಗೆ 6000 ಕಳೆದುಕೊಂಡ ಆಟೋ ಚಾಲಕ

author img

By

Published : Oct 22, 2021, 3:31 PM IST

Updated : Oct 22, 2021, 4:49 PM IST

ಚಿಕ್ಕಮಗಳೂರು : 100 ರೂಪಾಯಿ ಆಟೋ ಬಾಡಿಗೆಗೆ ಬಂದಿದ್ದ ಆಟೋ ಚಾಲಕ ತನ್ನ ಆಟೋವನ್ನ ರಕ್ಷಿಸಿಕೊಳ್ಳಲು 6000 ರೂಪಾಯಿ ದಂಡವಾಗಿ ತೆತ್ತ ಘಟನೆ ನಗರದಲ್ಲಿ ನಡೆದಿದೆ. ಜಿಲ್ಲಾಡಳಿತ, ಮುಕ್ತ ವಿಶ್ವವಿದ್ಯಾನಿಲಯಕ್ಕೆ ಬೇಡಿಕೊಂಡರು ಯಾರೂ ಸಹಾಯ ಮಾಡದ ಹಿನ್ನೆಲೆ ಕೊನೆಗೆ ತನ್ನ ಆಟೋವನ್ನ ರಕ್ಷಿಸಲು ತಾನೇ ₹ 6000 ಸಾವಿರ ಸಾಲ ಮಾಡಿ ರಕ್ಷಿಸಿಕೊಂಡಿದ್ದಾರೆ.

100 ರೂಪಾಯಿ ದುಡಿಯಲು ಹೋಗಿ ₹6000 ಕಳೆದುಕೊಂಡ ಆಟೋ ಚಾಲಕ

ನಗರದಲ್ಲಿ ಮೊನ್ನೆ ರಾತ್ರಿ ಭಾರೀ ಮಳೆ ಸುರಿದಿತ್ತು. ಭಾರೀ ಮಳೆಯಿಂದ ನಗರದ ಮಧುವನ ಲೇಔಟ್‍ನಲ್ಲಿರುವ ಮುಕ್ತ ವಿಶ್ವವಿದ್ಯಾಲಯದ ಗೇಟ್ ಬಳಿಯ ಸೇತುವೆಯೂ ಕುಸಿದಿತ್ತು. ಇದರಿಂದ ಪರೀಕ್ಷೆ ಬರೆಯಲು ಬಂದಿದ್ದ ಸುಮಾರು 40 ವಿದ್ಯಾರ್ಥಿಗಳು ಹೊರ ಬರಲು ಜಾಗವಿಲ್ಲದೇ ಅಲ್ಲೇ ಉಳಿದಿದ್ದರು.

ವಿಷಯ ತಿಳಿದ ಜಿಲ್ಲಾಡಳಿತ ಹಾಗೂ ಅಗ್ನಿಶಾಮಕ ಸಿಬ್ಬಂದಿ ವಿದ್ಯಾರ್ಥಿಗಳನ್ನ ರಕ್ಷಣೆ ಮಾಡಿತ್ತು. ಆದರೆ, ವಿದ್ಯಾರ್ಥಿಗಳನ್ನ ಕರೆ ತಂದಿದ್ದ ಆಟೋ ಚಾಲಕ ಕಚೇರಿ ಬಳಿಯೇ ಲಾಕ್ ಆಗಿದ್ದ. ಸೇತುವೆ ದೊಡ್ಡ ಪ್ರಮಾಣದಲ್ಲಿ ಕುಸಿದ ಕಾರಣ ಆಟೋ ಹೊರ ಬರಲು ಜಾಗವೇ ಇರಲಿಲ್ಲ. ಈ ವೇಳೆ, ವಿಶ್ವವಿದ್ಯಾಲಯದ ಅಧಿಕಾರಿಗಳು ಆಟೋ ಚಾಲಕನಿಗೆ ಸಹಾಯ ಮಾಡುವ ಭರವಸೆ ನೀಡಿದ್ದರು. ಆದರೆ, ಯಾರೂ ಸಹಾಯ ಮಾಡಲಿಲ್ಲವಂತೆ.

ವಿದ್ಯಾರ್ಥಿಗಳನ್ನ ರಕ್ಷಿಸಿದ ಜಿಲ್ಲಾಡಳಿತ ಹಾಗೂ ಅಗ್ನಿಶಾಮಕ ಸಿಬ್ಬಂದಿ ಯಾವುದೇ ರೀತಿಯ ಸಹಾಯ ಮಾಡಲಿಲ್ಲ. ಕೊನೆಗೆ ವಿಶ್ವವಿದ್ಯಾಲಯದ ಅಧಿಕಾರಿಗಳು ನಿಮ್ಮ ಹಣದಲ್ಲಿ ನೀವೇ ಆಟೋವನ್ನ ಲಿಫ್ಟ್ ಮಾಡಿಕೊಳ್ಳಿ ಅಂತಾ ಆಟೋಚಾಲಕನಿಗೆ ಸೂಚಿಸಿದರು.

ಕೊನೆಗೆ ಸೇತುವೆ ನಿರ್ಮಾಣಗೊಳ್ಳಲು ತಿಂಗಳುಗಳೇ ಬೇಕು. ಅಲ್ಲಿಯವರೆಗೆ ಆಟೋ ನಿಂತರೆ ಹಾಳಾಗುತ್ತೆ. ಜೊತೆಗೆ ಜೀವನ ಹೇಗೆಂದು ಆಟೋ ಚಾಲಕ ವಿನೋದ್ 6,000 ರೂ. ಸಾಲ ಮಾಡಿ ತನ್ನ ಆಟೋವನ್ನ ಕ್ರೇನ್ ಮೂಲಕ ಲಿಫ್ಟ್ ಮಾಡಿಸಿಕೊಂಡಿದ್ದಾರೆ.

ಸೇತುವೆ ಕುಸಿದಿದ್ದಕ್ಕೆ ಕಳಪೆ ಕಾಮಗಾರಿಯೇ ಕಾರಣ. ಅಧಿಕಾರಿಗಳು ಹಾಗೂ ಗುತ್ತಿಗೆದಾರನ ತಪ್ಪಿನಿಂದ ಈ ಅನಾಹುತ ಸಂಭವಿಸಿರೋದು. ಇದಕ್ಕೆ ಯಾರು ಹೊಣೆ ಎಂದು ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. 100 ರೂಪಾಯಿ ಬಾಡಿಗೆಗೆ ಬಂದ ಆಟೋ ಚಾಲಕ ₹6000 ಕಳೆದುಕೊಂಡು ಸಾಲಗಾರನಾದಂತಾಗಿದೆ.

Last Updated : Oct 22, 2021, 4:49 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.