ಚಿಕ್ಕಮಗಳೂರು : ಜಿಲ್ಲೆಯ ಅಜ್ಜಂಪುರ ತಾಲೂಕಿನಲ್ಲಿ ನಡೆಯುತ್ತಿರುವ ಅಂತರಘಟ್ಟಮ್ಮ ಅಂತರಗಟ್ಟೆ ಜಾತ್ರೆಗೆ ಟಗರಿನ ಗಾಡಿಯಲ್ಲಿ ರೈತ ಹೊರಟು ಬಂದಿರುವ ಘಟನೆ ನಡೆದಿದೆ.
ಜಿಲ್ಲೆಯ ಅಜ್ಜಂಪುರ ತಾಲೂಕಿನ ಬಗ್ಗವಳ್ಳಿಯ ರೈತ ವಿಶೇಷವಾಗಿ ಈ ಜಾತ್ರೆಗೆ ಟಗರಿನ ಗಾಡಿಯನ್ನು ಶೃಂಗರಿಸಿ ಆಗಮಿಸಿದ್ದಾನೆ. ನಿನ್ನೆ ರಾತ್ರಿ ಹೊರಟು ಇಂದು ಬೆಳಗ್ಗೆ ಅಂತರಗಟ್ಟೆಯನ್ನು ರೈತ ಲಿಂಗಪ್ಪ ತಲುಪಿದ್ದು, ಮನೆಯಿಂದ ಟಗರುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಜಾತ್ರೆಗೆ ಪ್ರಯಾಣ ಬೆಳೆಸಿದ್ದಾನೆ.
ಹಾವೇರಿಯಿಂದ ಟಗರಿನ ಗಾಡಿ ತಂದು ಅಲಂಕಾರ ಮಾಡಿದ್ದರಿಂದ ಗಾಡಿ ನೋಡಲು ದಾರಿಯುದ್ದಕ್ಕೂ ಸಾವಿರಾರು ಜನರು ಸೇರಿದ್ದು ಕಂಡು ಬಂತು.
ಓದಿ: ಮತೀಯ ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು : ಸಚಿವ ಆರಗ ಜ್ಞಾನೇಂದ್ರ