ETV Bharat / state

ಅನಂತ್​ಕುಮಾರ್​ ಹೆಗಡೆ ಹೇಳಿಕೆ ಸಮರ್ಥನೀಯವಲ್ಲ; ಸ್ವ-ಪಕ್ಷದವರಿಂದ ಬೇಸರ - ಕಾಂಗ್ರೆಸ್​ ನಾಯಕರ ಹೇಳಿಕೆಗಳು

ಕಾಂಗ್ರೆಸ್​ ಸೇರಿದಂತೆ ಸ್ವ-ಪಕ್ಷದ ಕೆಲವು ನಾಯಕರು ಸಹ ಸಂಸದ ಅನಂತ್‌ಕುಮಾರ್ ಹೆಗಡೆ ಹೇಳಿಕೆಗೆ ಕಿಡಿ ಕಾರಿದ್ದಾರೆ.

ಸ್ವ-ಪಕ್ಷದವರಿಂದ ಬೇಸರ
ಸ್ವ-ಪಕ್ಷದವರಿಂದ ಬೇಸರ
author img

By ETV Bharat Karnataka Team

Published : Jan 16, 2024, 9:09 PM IST

Updated : Jan 16, 2024, 11:03 PM IST

ಮಾಜಿ ಸಚಿವ ಸಿಟಿ ರವಿ

ಚಿಕ್ಕಮಗಳೂರು: ಸಂಸದ ಅನಂತ್‌ಕುಮಾರ್ ಹೆಗಡೆ ಹೇಳಿಕೆಗೆ ಸ್ವ-ಪಕ್ಷದ ಕೆಲವು ನಾಯಕರು ಕಿಡಿ ಕಾರಿದ್ದಾರೆ. ಮಾಜಿ ಸಚಿವ ಸಿಟಿ ರವಿ, ಮಾಜಿ‌ ಶಾಸಕ ಎಂಪಿ ರೇಣುಕಾಚಾರ್ಯ ಸೇರಿದಂತೆ ಹಲವರು ಅನಂತ್‌ಕುಮಾರ್​ ಅವರ ಹೇಳಿಕೆಯನ್ನು ನಾವು ಸಮರ್ಥಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯರು ಮತ್ತು ಅವರ ಸ್ಥಾನಕ್ಕೆ ಕೊಡಬೇಕಾದ ಗೌರವವನ್ನ ಯಾರೇ ಅದರು ಕೊಡಬೇಕು. ಅನಂತ್‌ಕುಮಾರ್ ಹೆಗಡೆ ಅವರ ಕಾರ್ಯಶೈಲಿ ಭಿನ್ನವಿದೆ. ಹಾಗಂತ, ಮತ್ತೊಬ್ಬರನ್ನ ಹರ್ಟ್ ಮಾಡಬಾರದು. ಅವರ ಹೇಳಿಕೆಯನ್ನ ನಾವು ಸಮರ್ಥಿಸಿಕೊಳ್ಳುವುದಿಲ್ಲ. ಯಾರೇ ಆದರೂ ಏಕವಚನದಲ್ಲಿ ಮಾತನಾಡೋದು, ಅಗೌರವ ತೋರುವುದನ್ನ ನಾವು ಒಪ್ಪುವುದಿಲ್ಲ. ಮಾತನಾಡುವ ಭರದಲ್ಲಿ ಶಿವರಾಜ್ ತಂಗಡಗಿಯವರು ಹೇಳಿದ್ದು ಕೂಡ ತಪ್ಪೇ. ದೇಶದ ಪ್ರಧಾನಿಯನ್ನ ಸಿದ್ದರಾಮಯ್ಯ ಏಕವಚನದಲ್ಲಿ ಮಾತನಾಡಿದ್ದು ತಪ್ಪೇ. ಹಿರಿಯರಾದವರು ಪ್ರಧಾನಿ ಬಗ್ಗೆ ಏಕವಚನದಲ್ಲಿ ಮಾತನಾಡುವುದು ಎಷ್ಟು ಸರಿ? ಎಂದು ಕಿಡಿ ಕಾರಿದರು.

ಮಾಜಿ‌ ಶಾಸಕ ಎಂಪಿ ರೇಣುಕಾಚಾರ್ಯ

ಯಾರು ಒಪ್ಪಲು ಸಾಧ್ಯವಿಲ್ಲ: ಮಾಜಿ‌ ಶಾಸಕ ಎಂಪಿ ರೇಣುಕಾಚಾರ್ಯ ಕೂಡ ಅನಂತ್‌ಕುಮಾರ್ ಹೆಗಡೆ ಹೇಳಿಕೆ ಯಾರು ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು, ಮೋದಿ ಸಬ್​ ಕಾ ಸಾಥ್ ಸಬ್ ಕಾ ವಿಕಾಸ್​ ಅನ್ನೊ ಸಿದ್ಧಾಂತದ ಮೇಲೆ ಅಧಿಕಾರಕ್ಕೆ ಬಂದಿದ್ದಾರೆ. ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿ. ಮುಖ್ಯಮಂತ್ರಿ ಮುಖ್ಯಮಂತ್ರಿಯೇ. ರಾಜಕೀಯ ವಿರೋಧ ಮಾಡಲಿ. ಏಕವಚನದಿಂದ ಅಗೌರವದಿಂದ ಮಾತನಾಡಬಾರದು. ಅನಂತ್‌ಕುಮಾರ್ ಹೆಗಡೆ ಹೇಳಿಕೆ ಎಲ್ಲರೂ ಸರ್ವಸಮ್ಮತವಾಗಿ ಖಂಡಿಸುತ್ತೇವೆ. ಏಕವಚನದಿಂದ ಮಾತನಾಡಿದ್ದು ತಪ್ಪು, ಹಾಗಂತ ಸಿದ್ದರಾಮಯ್ಯ ಸರ್ಜಿಕಲ್ ಸ್ಟ್ರೈಕ್ ವಿಚಾರದಲ್ಲಿ ಮಾತನಾಡಿದ್ದೂ ತಪ್ಪು ಎಂದರು.

ಲೋಕಸಭಾ ಟಿಕೆಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಟಿಕೆಟ್ ಅನ್ನು ಸ್ಥಳೀಯರಿಗೆ ನೀಡಬೇಕು ಎಂಬ ಅಪೇಕ್ಷೆ ಇದೆ. ಸಮೀಕ್ಷೆ ಮಾಡಿಸಿ ಅದರಲ್ಲಿ ಯಾರ ಹೆಸರು ಬರುತ್ತದೋ ಅವರ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ. ಈ ಕುರಿತು ಹೈಕಮಾಂಡ್​ಗೆ ತಿಳಿಸುವ ಪ್ರಯತ್ನ ಮಾಡುತ್ತೇವೆ. ಹಾಲಿ ಸಂಸದರಾದ ಸಿದ್ಧೇಶ್ವರ್ ದಾವಣಗೆರೆಯಿಂದ ನಾಲ್ಕು ಬಾರಿ ಆಯ್ಕೆ ಆಗಿದ್ದಾರೆ. ಈ ಬಾರಿ ಜಿಲ್ಲೆಯವರಿಗೆ ಆಗಲಿ ಅನ್ನೋದು ವಿನಂತಿ ಎಂದರು. ಇದೇ ವೇಳೆ ಹರಿಹರದ ಮಾಜಿ ಶಾಸಕ ಎಸ್ ರಾಮಪ್ಪ ಹೇಳಿಕೆಗೂ ಕಿಡಿ ಕಾರಿದರು.

ಪ್ರತಿಭಟನಾ ಮೆರವಣಿಗೆ: ಅನಂತ್​ಕುಮಾರ್ ಹೆಗಡೆ ಅವರನ್ನು ಸಂಸದ ಸ್ಥಾನದಿಂದ ವಜಾ ಮಾಡಬೇಕೆಂದು ಆಗ್ರಹಿಸಿ ಶಿವಮೊಗ್ಗದ ಜಿಲ್ಲಾ ಕಾಂಗ್ರೆಸ್ ವತಿಯಿಂದ ಇಂದು ಪ್ರತಿಭಟನೆ ಕೂಡ ನಡೆಸಲಾಯಿತು. ಜಿಲ್ಲಾ‌ ಕಾಂಗ್ರೆಸ್ ಭವನದಿಂದ ಮಹಾವೀರ ವೃತ್ತದ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಪ್ರತಿಭಟನ ಮೆರವಣಿಗೆಯಲ್ಲಿ ಸಂಸದ ವಿರುದ್ಧ ಆಕ್ರೋಶ ಹೊರ ಹಾಕಲಾಯಿತು. ಓರ್ವ ಸಂಸದ ರಾಜ್ಯದ ಮುಖ್ಯಮಂತ್ರಿ ಕುರಿತು ಹೇಗೆ ಮಾತನಾಡಬೇಕೆಂದು ತಿಳಿದಿಲ್ಲ. ಇಂತಹವರು ಸಂಸದ ಸ್ಥಾನದಲ್ಲಿ ಉಳಿದುಕೊಳ್ಳಲು ಅನರ್ಹರು. ಇದರಿಂದ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಲಾಯಿತು.

ಶಾಸಕ ಗೋಪಾಲಕೃಷ್ಣ ಬೇಳೂರು

ಶಾಸಕ ಬೇಳೂರು ಕಿಡಿ: ಸಂಸದರಾದವರಿಗೆ ಮುಖ್ಯಮಂತ್ರಿಗಳ ಬಗ್ಗೆ ಹೇಗೆ ಮಾತನಾಡಬೇಕು ಎಂಬುದು ತಿಳಿದಿಲ್ಲ, ಇದೇನಾ ಬಿಜೆಪಿ ಸಂಸ್ಕೃತಿ ಎಂದು ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಕೂಡ ಪ್ರಶ್ನಿಸಿದ್ದಾರೆ. ಸಾಗರದಲ್ಲಿ ಮಾತನಾಡಿದ ಅವರು, ಹೆಗಡೆ ಅವರಿಗೆ ಮಾನಸಿಕವಾಗಿ ಏನಾಗಿದೆ ಗೊತ್ತಿಲ್ಲ. ಮುಂಚಿನಿಂದ ಫೈಯರ್ ಬ್ರಾಂಡ್ ಎಂದು ಗುರುತಿಸಿಕೊಂಡವರು. ಗೊಂದಲ ಮಾಡುವುದು, ಗೊಂದಲ ಸೃಷ್ಟಿಸುದು ಅವರ ಗುಣವಾಗಿದೆ. ನಮಗೂ ಕೆಟ್ಟದಾಗಿ ಬೈಯೋಕೆ ಬರುತ್ತದೆ. ಬೇಳೂರಿಗೆ ಕೆಟ್ಟದಾಗಿ ಬೈಯುವುದು ಹೇಳಿಕೊಡುವುದು ಬೇಡ ಎಂದು ಕಿಡಿ ಕಾರಿದರು.

ಇದನ್ನೂ ಓದಿ: ಬಿಜೆಪಿಯವರು ಕೂಗುಮಾರಿಗಳಂತೆ ವರ್ತಿಸುತ್ತಿದ್ದಾರೆ: ಮಾಜಿ ಸಚಿವ ಹೆಚ್​ ಎಂ ರೇವಣ್ಣ ಲೇವಡಿ

Last Updated : Jan 16, 2024, 11:03 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.