ಚಿಕ್ಕಮಗಳೂರು: ನಗರದಲ್ಲಿ ಮನೆಯೊಂದರ ಬಾಗಿಲ ಮುಂದೆ ಕಾಣಿಸಿಕೊಂಡಿದ್ದ ಬೃಹತ್ ಗಾತ್ರದ ನಾಗರಹಾವನ್ನು ಸೆರೆ ಹಿಡಿಯಲಾಗಿದೆ.
ನಗರದ ಮಧುವನ ಲೇಜೌಟ್ ಬಡಾವಣೆಯಲ್ಲಿ ಭರತ್ ಎಂಬುವರ ಮನೆಯ ಬಾಗಿಲಿನಲ್ಲಿ ಬೃಹತ್ ಗಾತ್ರದ ನಾಗರಹಾವು ಮಲಗಿತ್ತು. ಮನೆಯ ಸೊಸೆ ಬಾಗಿಲು ತೆರೆದಾಗ ನಾಗರಹಾವು ಕಂಡಿದೆ. ಉರಗ ತಜ್ಞ ಸ್ನೇಕ್ ನರೇಶ್ ಹಾವ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಈ ದೊಡ್ಡ ಗಾತ್ರದ ನಾಗರಹಾವನ್ನು ಅರಣ್ಯಕ್ಕೆ ಬಿಡಲಾಗಿದೆ.