ಚಿಕ್ಕಮಗಳೂರು : ಜಿಲ್ಲೆಯಲ್ಲಿ ಈ ದಿನ ಕೊರೊನಾ ಸೋಂಕಿನಿಂದ 139 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಗುಣಮುಖ :
ಈ ದಿನ ಗುಣಮುಖರಾದವರು ಸೇರಿದಂತೆ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 10,214 ಜನರು ಗುಣಮುಖರಾಗಿದ್ದಾರೆ.
ತಾಲೂಕುವಾರು ಕೋವಿಡ್ ಪ್ರಕರಣಗಳಿಷ್ಟು :
ಚಿಕ್ಕಮಗಳೂರು ತಾಲೂಕಿನಲ್ಲಿ 36, ಕಡೂರು ತಾಲೂಕಿನಲ್ಲಿ 36, ಮೂಡಿಗೆರೆ ತಾಲೂಕಿನಲ್ಲಿ 08, ತರೀಕೆರೆ ತಾಲ್ಲೂಕಿನಲ್ಲಿ 24, ಶೃಂಗೇರಿ ತಾಲೂಕಿನಲ್ಲಿ 07, ಕೊಪ್ಪ ತಾಲ್ಲೂಕಿನಲ್ಲಿ 04, ಎನ್ಆರ್ ಪುರ ತಾಲೂಕಿನಲ್ಲಿ 04, ಸೋಂಕಿತ ಪ್ರಕರಣಗಳು ಪತ್ತೆಯಾಗಿದೆ. ಇಂದು 119 ಮಂದಿಗೆ ಸೋಂಕು ತಗುಲಿದೆ. ಈ ಮೂಲಕ ಸೋಂಕಿತರ ಸಂಖ್ಯೆ 11,513 ಕ್ಕೆ ಏರಿಕೆಯಾಗಿದೆ.
ಮೃತರ ಮಾಹಿತಿ :
ಈವರೆಗೂ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಇದುವರೆಗೆ 134 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಜಿಲ್ಲೆಯಲ್ಲಿ 1,026 ಸಕ್ರಿಯ ಪ್ರಕರಣಗಳಿವೆ.
ಈ ದಿನ ಪತ್ತೆಯಾದ ಸೋಂಕಿತರು ವಾಸ ಮಾಡುತ್ತಿದ್ದ ಮನೆಯನ್ನು ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಸಂಪೂರ್ಣ ಸೀಲ್ ಡೌನ್ ಮಾಡಿ ಕಟ್ಟೆಚ್ಚರ ವಹಿಸಿದೆ.