ETV Bharat / state

ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ₹10 ಕೋಟಿ ಬಿಡುಗಡೆ: ಸಿಎಂ ಬೊಮ್ಮಾಯಿ

ಎಲೆಚುಕ್ಕಿ ರೋಗಕ್ಕೆ ಸಂಬಂಧಿಸಿದಂತೆ ಸರ್ಕಾರ ಯೂನಿವರ್ಸಿಟಿ ತಂಡ ಕಳುಹಿಸಿ ಅಧ್ಯಯನ ಮಾಡುತ್ತಿದೆ. ವಿಜ್ಞಾನಿಗಳು ಯಾವ ಔಷಧಿ ಹೇಳುತ್ತಾರೋ ಅದನ್ನು ಕೂಡಲೇ ಸಿಂಪಡಿಸಲಾಗುವುದು- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

CM Bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
author img

By

Published : Nov 27, 2022, 1:13 PM IST

ಚಿಕ್ಕಮಗಳೂರು: ನಿರಂತರ ಮಳೆ ಇರುವುದರಿಂದ ಎಲೆಚುಕ್ಕಿ ರೋಗ ಹರಡುತ್ತಿದೆ. ಫಂಗಸ್ ತಡೆಯಲು ಔಷಧಿ ಸಿಂಪಡಿಸುವ ಕೆಲಸವಾಗುತ್ತಿದೆ. ರೋಗ ನಿಯಂತ್ರಣಕ್ಕೆ 10 ಕೋಟಿ ರೂ.ಬಿಡುಗಡೆ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ₹10 ಕೋಟಿ ಬಿಡುಗಡೆ: ಸಿಎಂ ಬೊಮ್ಮಾಯಿ

ಚಿಕ್ಕಮಗಳೂರಿನ ಕೊಪ್ಪದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ಯೂನಿವರ್ಸಿಟಿ ತಂಡ ಕಳುಹಿಸಿ ಅಧ್ಯಯನ ಮಾಡುತ್ತಿದೆ. ವಿಜ್ಞಾನಿಗಳು ಯಾವ ಔಷಧಿ ಹೇಳುತ್ತಾರೋ ಅದನ್ನು ಕೂಡಲೇ ಸಿಂಪಡಿಸಲಾಗುವುದು ಎಂದರು.

ಮೂಡಿಗೆರೆ ಶಾಸಕರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಈ ಬಗ್ಗೆ ಚಿಕ್ಕಮಗಳೂರಿನ ಎಸ್​ಪಿ ಜತೆ ಮಾತನಾಡಿದ್ದೇನೆ. ಸಮಗ್ರ ತನಿಖೆ ಮಾಡುವಂತೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

ಇದನ್ನೂ ಓದಿ: ಅಡಕೆ ಬೆಳೆಗಾರರನ್ನು ಹಿಂಡಿಹಿಪ್ಪೆ ಮಾಡುತ್ತಿರುವ ಎಲೆಚುಕ್ಕಿ ರೋಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.