ಚಿಕ್ಕಬಳ್ಳಾಪುರ: ಚಲಿಸುತ್ತಿದ್ದ ರೈಲಿಗೆ ಸಿಲುಕಿದ ಯುವಕನೋರ್ವ ಮೃತಪಟ್ಟ ಘಟನೆ ಜಿಲ್ಲೆಯ ಪೂಜನಹಳ್ಳಿ ಬಳಿ ನಡೆದಿದೆ.
ಇದೇ ಗ್ರಾಮದ ವಸಂತ್ (18) ಮೃತ ಯುವಕ. ಯುವಕ ಹಳಿ ದಾಟುತ್ತಿದ್ದ ವೇಳೆ ಬರುತ್ತಿರುವ ರೈಲನ್ನು ಗಮನಿಸದೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ರೈಲ್ವೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.