ಚಿಕ್ಕಬಳ್ಳಾಪುರ: ಜಯಲಕ್ಷ್ಮಮ್ಮ ಎಂಬುವರು ಗಂಡ ಸತ್ತ ಮೇಲೆ ಆತನ ಆಸ್ತಿ ತಮಗೆ ಬರುತ್ತದೆ ಎಂದುಕೊಂಡಿದ್ದರು. ಹಾಗಾಗಿ ಆ ಆಸ್ತಿಯನ್ನು ಪೌತಿ ಖಾತೆ ಮೂಲಕ ತಮ್ಮ ಹೆಸರಿಗೆ ಮಾಡಿಸಿಕೊಳ್ಳೋಣ ಅಂತಾ ತಾಲೂಕು ಆಫೀಸ್ಗೆ ಹೋಗಿದ್ದಾರೆ. ಆದರೆ, ಅಲ್ಲಿ ಇವರಿಗಿಂತ ಮೊದಲೇ ಇನ್ನೊಬ್ಬ ಮಹಿಳೆ ಅದೇ ವ್ಯಕ್ತಿಯ ಆಸ್ತಿಗಾಗಿ ಅರ್ಜಿ ಹಾಕಿದ್ದಾರೆ. ಇದ್ದಕಿದ್ದಂತೆ ಎಲ್ಲಿಂದ ಬಂದ್ಲಪ್ಪಾ ಇನ್ನೊಬ್ಬ ಹೆಂಡತಿ ಎಂದು ಜಯಲಕ್ಷ್ಮಮ್ಮ ಮತ್ತು ಅವರ ಮಗಳು ಧನಲಕ್ಷ್ಮಿ ಶಾಕ್ ಆಗಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಹೋಬಳಿಯ ಚಿಕ್ಕನಹಳ್ಳಿ ಗ್ರಾಮದ ನೆನೆಕಪ್ಪ ಎಂಬುವವರನ್ನು ಜಯಲಕ್ಷ್ಮಮ್ಮ,1985 ರಲ್ಲಿ ಮದುವೆ ಆಗಿದ್ದರು. ಹಲವು ವರ್ಷಗಳ ಹಿಂದೆ ನೆನೆಕಪ್ಪ ಮೃತಪಟ್ಟಿದ್ದಾರೆ. ಲಗ್ನಪತ್ರಿಕೆ ಜೊತೆಗೆ ಗಂಡನ ಡೆತ್ ಸರ್ಟಿಫಿಕೇಟ್ ಸೇರಿದಂತೆ ಇತರ ದಾಖಲೆಗಳನ್ನು ಕೋರ್ಟ್ಗೆ ಒದಗಿಸಿದ್ದಾರೆ. ವಿಚಿತ್ರ ಅಂದ್ರೆ ಇನ್ನೊಬ್ಬ ಮಹಿಳೆಯ ಬಳಿಯೂ ದಾಖಲೆಗಳಿದ್ದು, ಯಾವುದು ಸತ್ಯ ಯಾವುದು ಸುಳ್ಳು ಎಂದು ಕೋರ್ಟ್ ಇತ್ಯರ್ಥ ಮಾಡಬೇಕಿದೆ.
ಇನ್ನು ಗಂಡ ನೆನೆಕಪ್ಪ ಅಲೆಮಾರಿಯಾಗಿದ್ದು, ಹೋದ ಬಂದ ಕಡೆ ಎಲ್ಲ ಒಂದೊಂದು ಸಂಸಾರ ಇಟ್ಟುಕೊಂಡಿದ್ದಾನೆ. ಇದೇ ವಿಚಾರ ಈಗ ಮೊದಲನೇ ಹೆಂಡತಿ ಎನ್ನಬಹುದಾದ ಧನಲಕ್ಷ್ಮಿಗೆ ತಲೆನೋವಾಗಿದೆ. ಇನ್ನೂ ಯಾರ್ಯ್ಯಾರು ಬಂದು ನನ್ನ ಗಂಡ ಅನ್ನುತ್ತಾರೋ ಎಂಬ ಆತಂಕವು ಕಾಡುತ್ತಿದೆ ಎಂದು ಜಯಲಕ್ಷ್ಮಮ್ಮ ಹೇಳುತ್ತಾರೆ.
ಇದನ್ನೂ ಓದಿ:ಸಿಎಂ ನಡೆ ಹಿಂಸೆ ಪ್ರಚೋದಿಸುವಂತಿದೆ, ಕೊಲೆಯಾದ ಇಬ್ಬರ ಮನೆಗಳಿಗೂ ಬೊಮ್ಮಾಯಿ ಭೇಟಿ ನೀಡ್ಬೇಕಿತ್ತು: ಹೆಚ್ಡಿಕೆ