ಚಿಕ್ಕಬಳ್ಳಾಪುರ : ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರ ಹೋಬಳಿಯ ಹದಿನೈದು ಸರ್ವೆ ನಂಬರ್ಗಳಲ್ಲಿ ಹಾದು ಹೋಗುವ ರಸ್ತೆ ಕಳೆದ ಹಲವಾರು ದಿನಗಳಿಂದ ಒತ್ತುವರಿ ಆಗಿದ್ದು ಇಂದು ಅಧಿಕಾರಿಗಳು ತೆರವು ಗೊಳಿಸಿದರು.
ತಾಲೂಕು ದಂಡಾಧಿಕಾರಿಗಳಾದ ವಿಶ್ವನಾಥ್ ಸೇರಿದಂತೆ ಕೈವಾರ ಹೋಬಳಿಯ ಉಪ ತಹಸೀಲ್ದಾರ್ ಮೋಹನ್, ಗ್ರಾಮ ಲೆಕ್ಕಾಧಿಕಾರಿಗಳಾದ ನಾಗರಾಜ್ ಒತ್ತುವರಿಯಾಗಿದ್ದ ರಸ್ತೆಯನ್ನು ತೆರವುಗೊಳಿಸಲು ಹೋದಾಗ ಅಲ್ಲಿನ ಕೆಲ ಸ್ಥಳೀಯರು ಅಡ್ಡಿಪಡಿಸಿದ್ದಾರೆ. ಆದರೂ ಬೆದರದ ಅಧಿಕಾರಿಗಳು ಹಾಗೂ ದಂಡಾಧಿಕಾರಿಗಳು ಖುದ್ದಾಗಿ ಮುಂದೆ ನಿಂತು ಸರ್ವೇ ನಡೆಸಿ ಒತ್ತುವರಿಯಾದ ರಸ್ತೆಯನ್ನು ಜೆಸಿಬಿ ಮೂಲಕ ತೆರವುಗೊಳಿಸಿದ್ದಾರೆ.