ETV Bharat / state

ಚುನಾವಣಾ ಫಲಿತಾಂಶ ಸಮ್ಮಿಶ್ರ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ: ಕೃಷಿ ಸಚಿವ

ಇತ್ತೀಚೆಗೆ ಹೊರಬಂದ ಚುನಾವಣಾ ಸಮೀಕ್ಷೆಗಳು ಸಂಪೂರ್ಣ ನಂಬಿಕೆಗೆ ಅರ್ಹವಲ್ಲ ಎಂಬುದು ಫಲಿತಾಂಶದ ನಂತರ ತಿಳಿಯಲಿದೆ. ಚಿಕ್ಕಬಳ್ಳಾಪುರದಲ್ಲಿ ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯ್ಲಿ ಗೆಲ್ಲುತ್ತಾರೆ ಎಂದು ಕೃಷಿ ಸಚಿವ ವಿಶ್ವಾಸ ವ್ಯಕ್ತಪಡಿಸಿದರು.

ಕೃಷಿ‌ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಶಂಕರ್ ರೆಡ್ಡಿ
author img

By

Published : May 22, 2019, 12:50 AM IST

ಚಿಕ್ಕಬಳ್ಳಾಪುರ: ಸಮ್ಮಿಶ್ರ ಸರ್ಕಾರದ ಶಾಸಕರಲ್ಲಿ ಭಿನ್ನಾಭಿಪ್ರಾಯ ಇರೋದು ನಿಜ. ಆದರೆ, ಲೋಕಸಭಾ ಚುನಾವಣೆ ಫಲಿತಾಂಶ ನಂತರ ಸಮ್ಮಿಶ್ರ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕೃಷಿ‌ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಶಂಕರ್ ರೆಡ್ಡಿ ಸ್ಪಷ್ಟಪಡಿಸಿದರು.

ನಗರದಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ 5 ವರ್ಷ ಅವಧಿ ಪೂರೈಸುತ್ತದೆ ಹಾಗೂ ರಾಜ್ಯದಲ್ಲಿ ಮೈತ್ರಿ ಪಕ್ಷಗಳಿಂದ 15 ಎಂಪಿ ಸೀಟು ಗೆಲ್ಲುತ್ತೇವೆಂದು ವಿಶ್ವಾಸ ವ್ಯಕ್ತಪಡಿಸಿದರು.

ಇತ್ತಿಚೇಗೆ ಹೊರಬಂದ ಚುನಾವಣಾ ಸಮೀಕ್ಷೆಗಳು ಸಂಪೂರ್ಣ ನಂಬಿಕೆಗೆ ಅರ್ಹವಲ್ಲ ಎಂಬುದು ಫಲಿತಾಂಶದ ನಂತರ ತಿಳಿಯಲಿದೆ. ಚಿಕ್ಕಬಳ್ಳಾಪುರದಲ್ಲಿ ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯ್ಲಿ ಗೆಲ್ಲುತ್ತಾರೆ ಎಂದು ತಿಳಿಸಿದರು.

ಕೃಷಿ‌ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಶಂಕರ್ ರೆಡ್ಡಿ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಒಕ್ಕಲಿಗರಾದ್ದರಿಂದ ಜಿಲ್ಲೆಯ ಬಹುತೇಕ ಮತಗಳು ಕಮಲದ ಪಾಲಾಗಲಿದೆ ಎನ್ನಲಾಗಿತ್ತು. ಅಷ್ಟೇ ಅಲ್ಲದೆ ಒಕ್ಕಲಿಗ ಸಮುದಾಯದವರು ಸಹ ಈ ಬಾರಿ ಕಾಂಗ್ರೆಸ್​ಗೆ ತಮ್ಮ ಬೆಂಬಲವಿಲ್ಲವೆಂದು ಸ್ಪಷ್ಟಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಒಕ್ಕಲಿಗ ಮತಗಳು ಬಿಜೆಪಿ ಅಭ್ಯರ್ಥಿ ಪಾಲಾಗಿದ್ರೂ ಇತರೆ ಸಮುದಾಯಗಳು ಮೈತ್ರಿ ಕೈ ಹಿಡಿದಿವೆ ಎಂದು ತಿಳಿಸಿದರು.

ರಾಜ್ಯದಲ್ಲಿ ಭೀಕರ ಬರಗಾಲ ಹಿನ್ನೆಲೆ ಮೋಡ ಬಿತ್ತನೆಗೆ ಸಕಲ ಸಿದ್ಧತೆ ಮಾಡಿದ್ದು, ಜೂನ್ 15 ರಂದು ಹುಬ್ಬಳ್ಳಿ ಹಾಗೂ ಬೆಂಗಳೂರು ಕೇಂದ್ರಗಳಲ್ಲಿ ಮೋಡ ಬಿತ್ತನೆಗೆ ಚಾಲನೆ ನೀಡಲಾಗುವುದು ಎಂದರು. ಅಲ್ಲದೇ ಚುನಾವಣಾ ನೀತಿ ಸಂಹಿತೆಯಿಂದ ಬರ ನಿರ್ವಹಣೆಗೆ ಯಾವುದೇ ಅಡಚಣೆ ಆಗಿಲ್ಲ ಎಂದು ತಿಳಿಸಿದರು.

Intro:ಸಮ್ಮಿಶ್ರ ಸರ್ಕಾರದ ಶಾಸಕರಲ್ಲಿ ಭಿನ್ನಾಭಿಪ್ರಾಯ ಇರೋದು ನಿಜ ಆದರೆ ಲೋಕಸಭಾ ಚುನಾವಣೆ ಫಲಿತಾಂಶ ನಂತರ ಸಂಮಿಶ್ರ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲಾ ಎಂದು ಕೃಷಿ‌ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸ್ಪಷ್ಟಪಡಿಸಿದ್ದಾರೆ.

Body:ಸಮ್ಮೀಶ್ರ ಸರ್ಕಾರ 5 ವರ್ಷ ಅವಧಿ ಪೂರೈಸುತ್ತೆ ಹಾಗೂ ರಾಜ್ಯದಲ್ಲಿ ಮೈತ್ರಿ ಪಕ್ಷಗಳಿಂದ 15 ಎಂಪಿ ಸೀಟು ಗೆಲ್ಲುತ್ತೇವೆಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನೂ ಇತ್ತಿಚ್ಚೇಗೆ ಹೊರಬಂದ ಚುನಾವಣೆ ಸಮೀಕ್ಷೆಗಳು ಸಂಪೂರ್ಣ ನಂಬಿಕಾರ್ಹವಲ್ಲ ಪಲಿತಾಂಶದ ನಂತರ ತಿಳಿಯಲಿದೆ.ಇನ್ನೂ ಚಿಕ್ಕಬಳ್ಳಾಫುರದಲ್ಲಿ ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯ್ಲಿ ಗೆಲ್ಲುತ್ತಾರೆ ಎಂದು ತಿಳಿಸಿದರು.

ಇನ್ನೂ ಈ ಬಾರೀಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಒಕ್ಕಲಿಗರಾದರಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಬಹುತೇಕ ಮತಗಳು ಕಮಲದ ಪಾಲಗಿದೆ ಎಂದು ಭವಿಷ್ಯ ನುಡಿದಿದ್ದರು.ಅಷ್ಟೇ ಅಲ್ಲದೇ ವಕ್ಕಲಿಗ ಸಮುದಾಯದವರು ಸಹ ಈ ಬಾರೀ ಕಾಂಗ್ರೆಸ್‌ ತಮ್ಮ ಬೆಂಬಲವಿಲ್ಲವೆಂದು ಸ್ಪಷ್ಟ ಪಡಿಸಿದರು. ಸದ್ಯ ಕೃಷಿ ಸಚಿವರು ಒಕ್ಕಲಿಗರ ಮತಗಳು ಬಿಜೆಪಿ ಪಾಲಗಿದೆ ಎಂದು ಮತ್ತೊಮ್ಮೆ ಸ್ಪಷ್ಟ ಪಡಿಸಿದ್ದಾರೆ. ಒಕ್ಕಲಿಗ ಮತಗಳು ಬಿಜೆಪಿ ಅಭ್ಯರ್ಥಿ ಪಾಲಾಗಿದ್ರೂ ಇತರೆ ಸಮುದಾಯಗಳು ಮೈತ್ರಿ ಕೈ ಹಿಡಿದಿವೆ ಎಂದು ತಿಳಿಸಿದ್ದಾರೆ.

ಇನ್ನೂ ಜಿಲ್ಲೆಯಲ್ಲೂ ಬೀಕರ ಬರಗಾಲವಿದ್ದು ರಾಜ್ಯಾದಲ್ಲಿ ಭೀಕರ ಬರಗಾಲ ಹಿನ್ನಲೆ ಮೊಡ ಬಿತ್ತನೆಗೆ ಸಕಲ ಸಿದ್ದತೆಯನ್ನು ಮಾಡಿದ್ದು ಜುನ್ ೧೫ ರಂದು ಹುಬ್ಬಳ್ಳಿ ಹಾಗೂ ಬೆಂಗಳೂರು ಕೇಂದ್ರಗಳಲ್ಲಿ ಮೋಡ ಬಿತ್ತನೆಗೆ ಚಾಲನೆ ನೀಡಲಾಗುವುದು ಅದೇ ರೀತಿ ಚುನಾವಣಾ ನೀತಿಸಂಹಿತೆ ಬರ ನಿರ್ವಹಣೆಗೆ ಯಾವುದೇ ಅಡಚಣೆ ಆಗಿಲ್ಲಾ ಎಂದು ಜಿಲ್ಲಾಧಿಕಾರಿ ಕಛೇರಿ ಬಳಿ ತಿಳಿಸಿದರು.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.