ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಇದುವರೆಗೂ 10 ಪಾಸಿಟಿವ್ ಕೊರೊನಾ ಸೊಂಕಿತರು ಪತ್ತೆಯಾಗಿದ್ದು, ಅವರ ಸಂಪರ್ಕದಲ್ಲಿದ್ದ ಉಳಿದವರಿಗೆ ಸೋಂಕು ಹರಡಿಲ್ಲ ಎಂದು ಜಿಲ್ಲಾಧಿಕಾರಿ ಆರ್.ಲತಾ ಸ್ಪಷ್ಟಪಡಿಸಿದ್ದಾರೆ.
ಜಿಲ್ಲೆಯ ಗೌರಿಬಿದನೂರು ತಾಲೂಕಿನಲ್ಲಿ 10 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಇವರ ಸಂಪರ್ಕದಲ್ಲಿ ಬಂದ ಸುಮಾರು 50 ಜನರ ರಕ್ತ ಹಾಗೂ ಕಫಾ ಪರೀಕ್ಷೆಯ ವರದಿ ಬಂದಿದ್ದು, ಎಲ್ಲವೂ ನೆಗೆಟಿವ್ ಆಗಿವೆ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ವಿದೇಶಗಳಿಂದ ಬಂದ 162 ಸೋಂಕು ಹರಡಿಲ್ಲ. ಆದರೆ ನಾವು ಎಷ್ಟು ಮುನ್ನೆಚ್ಚರಿಕೆಯಿಂದ ಇರುತ್ತೇವೆಯೋ ಅಷ್ಟು ಉತ್ತಮ. ಆದಷ್ಟು ಮನೆಯಲ್ಲೇ ಇರಿ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.