ಚಿಕ್ಕಬಳ್ಳಾಪುರ: ನಗರದ ಹೊರವಲಯದಲ್ಲಿರುವ ಉಪ ಕಾರಾಗೃಹದ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿವ ಮಿಥುನ್ ಕುಮಾರ್ ನೇತೃತ್ವದಲ್ಲಿ ಧಿಡೀರ್ ದಾಳಿ ನಡೆಸಿ ಬಿಡಿ ಸಿಗರೇಟ್,ಗುಟ್ಕಾ ಪಾಕೇಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಗರದ ಹೊರ ವಲಯದ ಅಣಕನೂರು ಬಳಿ ಇರುವ ಉಪ ಕಾರಾಗೃಹವನ್ನು ಸುಮಾರು ಮೂರುವರೆ ಗಂಟೆಗೂ ಅಧಿಕ ಕಾಲ ಸಂಪೂರ್ಣವಾಗಿ ಪರಿಶೀಲನೆ ಮಾಡಿದ ಪೋಲಿಸರು ಪರಿಶೀಲನಾ ವೇಳೆ 8 ಕೆಜಿ ಯಷ್ಟು ಬೀಡಿ -ಸಿಗರೇಟು, ಗುಟ್ಕಾ ಪಾಕೇಟುಗಳ ವಶಕ್ಕೆ ಪಡೆದರು.
ಜಿಲ್ಲಾ ಎಸ್.ಪಿ.ಮಿಥುನ್ ಕುಮಾರ್ ನೇತೃತ್ವದಲ್ಲಿ ಡಿವೈಎಸ್ ಪಿ ರವಿಶಂಕರ್, ಸರ್ಕಲ್ ಇನ್ಸ್ ಪೆಕ್ಟರ್ ಪ್ರಶಾಂತ್ ಸೇರಿದಂತೆ 35 ಸಿಬ್ಬಂದಿ ಭಾಗಿಯಾಗಿ ದಾಳಿ ನಡೆಸಿದ್ದು,ಉಪ ಕಾರಾಗೃಹದಲ್ಲಿ ಖೈದಿಗಳಿಗೆ ಮಾದಕ ವಸ್ತುಗಳು ಯಾವ ರೀತಿ ಬಂದಿವೆ ಎಂಬುವುದನ್ನು ತನಿಖೆ ನಡೆಸಲಾಗುತ್ತಿದೆ.
ಗಾಂಜಾ ಸಪ್ಲೇ ಗೆ ಸಂಬಂಧಿಸಿದಂತೆ ಜೈಲರ್ ರೂಪರಾಣಿಯ ಪತಿ ಸುಂದರೇಶನ್ಗೆ ಗೂಗಲ್ ಪೇ ಮೂಲಕ ಹಣ ರವಾನೆ ಶಂಕೆಯ ದೂರು ಕೇಳಿ ಬಂದಿದ್ದು, ಈ ಬಗ್ಗೆ ರೂಪರಾಣಿಯಿಂದ ಸ್ಪಷ್ಟನೆ ಕೇಳಿರಿವುದಾಗಿ ತಿಳಿದು ಬಂದಿದೆ. ಸದ್ಯ ದಾಳಿಯಲ್ಲಿ ದೊರೆತ ನಿರ್ಬಂಧಿತ ವಸ್ತುಗಳ ಬಗ್ಗೆ ಜೈಲಿನ ಮೇಲಾಧಿಕಾರಿಗಳಿಗೆ ಎಸ್ ಪಿ ಮಿಧುನ್ ಕುಮಾರ್ ವರದಿ ನೀಡಲಿದ್ದಾರೆ.