ETV Bharat / state

ಪ್ರಾಣಿ ಬೇಟೆ ಬಳಿಕ ರಾಗಿ ಹೊಲದಲ್ಲಿ ಅವಿತಿತ್ತು 12 ಅಡಿ ಉದ್ದದ ಹೆಬ್ಬಾವು..! - ಗೌರಿಬಿದನೂರು ಸುದ್ದಿ

ಪ್ರಾಣಿಯೊಂದನ್ನು ಬೇಟೆಯಾಡಿದ 12 ಅಡಿ ಉದ್ದದ ಹೆಬ್ಬಾವುಅನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸಂರಕ್ಷಿಸಿ ಕಾಡಿನಲ್ಲಿ ಬಿಟ್ಟಿದ್ದಾರೆ.

python
ಹೆಬ್ಬಾವು
author img

By

Published : Oct 2, 2020, 4:54 PM IST

ಚಿಕ್ಕಬಳ್ಳಾಪುರ: ಗೌರಿಬಿದನೂರು ತಾಲೂಕಿನ ನಾಮಗೊಂಡ್ಲು ಸಮೀಪದ ವೆಂಕಟಪುರ ಬಳಿ ರಾಗಿ ಹೊಲದಲ್ಲಿ ಬೃಹತ್ ಗಾತ್ರದ ಹೆಬ್ಬಾವುವೊಂದು ಪತ್ತೆಯಾಗಿದೆ.

ಹೆಬ್ಬಾವು ಸಂರಕ್ಷಿಸಿ ಅರಣ್ಯಕ್ಕೆ ಬಿಟ್ಟ ಅರಣ್ಯಾಧಿಕಾರಿಗಳು

ರಾಗಿ ಹೊಲದಲ್ಲಿ ಪ್ರಾಣಿಯೊಂದನ್ನು ಬೇಟೆಯಾಡಿದ್ದ ಈ ಹಾವನ್ನು ಗ್ರಾಮಸ್ಥರು ಕಂಡು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದ್ದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿ ಯಲ್ಲಪ್ಪ ಮತ್ತು ಸಿಬ್ಬಂದಿ ಬೃಹತ್ ಗಾತ್ರದ ಹೆಬ್ಬಾವುಅನ್ನು ಸಂರಕ್ಷಿಸಿ ಜಿಲ್ಲೆಯ ಗುಡಿಬಂಡೆ ಹೊರವಲಯದ ಕಾಡಿನಲ್ಲಿ ಬಿಟ್ಟಿದ್ದಾರೆ.

ಗ್ರಾಮದ ಸುತ್ತಮುತ್ತ ಬೆಟ್ಟ-ಗುಡ್ಡಗಳು ಇರುವುದರಿಂದ ಬೃಹತ್ ಗಾತ್ರದ ಹಾವುಗಳು ಬರುವುದು ಸಹಜ. ಅವು ಬೇಟಿಯಾಡಿದ ನಂತರ ಬೇರೊಂದು ಕಡೆ ಹೋಗಲು ಸಾಧ್ಯವಾಗದ ಹಿನ್ನೆಲೆ ಅಲ್ಲೇ ಕೆಲಕಾಲ ಇರುತ್ತವೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹೆಬ್ಬಾವು 35 ಕೆಜಿ ತೂಕ ಹಾಗೂ 12 ಅಡಿ ಉದ್ದವಿದ್ದು, ನೋಡುಗರನ್ನು ಬೆಚ್ಚಿಬೀಳಿಸುವಂತಿತ್ತು. ಈ ಹಾವನ್ನು ಹಿಡಿಯುವ ದೃಶ್ಯವನ್ನು ಕಂಡು ಸ್ಥಳೀಯರು ನಿಬ್ಬೆರಗಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.