ETV Bharat / state

ಚಿಂತಾಮಣಿಯಲ್ಲಿ ದೇವಸ್ಥಾನದ ಪೂಜಾರಿ, ಶಿಷ್ಯ ಆತ್ಮಹತ್ಯೆ?.. ಸಾವಿನ ಸುತ್ತ ಅನುಮಾನದ ಹುತ್ತ - ಪೂಜಾರಿ, ಶಿಷ್ಯ ಅನುಮಾನಾಸ್ಪದ ಸಾವು ಪ್ರಕರಣ

ದೇವಸ್ಥಾನದ ಪೂಜಾರಿ ಹಾಗೂ ಅವರ ಶಿಷ್ಯ (priest and his disciple death) ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಈ ನಡುವೆ ಪೂಜಾರಿಯ ಮತ್ತೋರ್ವ ಶಿಷ್ಯ ಕಳೆದೊಂದು ವಾರದಿಂದ ನಾಪತ್ತೆಯಾಗಿರುವುದು ಹಲವು ಅನುಮಾನ ಮೂಡುವಂತೆ ಮಾಡಿದೆ.

priest-and-his-disciple-death-in-chintamani
ದೇವಸ್ಥಾನದ ಪೂಜಾರಿ, ಶಿಷ್ಯ ಆತ್ಮಹತ್ಯೆ?
author img

By

Published : Nov 13, 2021, 4:12 PM IST

Updated : Nov 13, 2021, 5:12 PM IST

ಚಿಕ್ಕಬಳ್ಳಾಪುರ: ದೇವಸ್ಥಾನದ ಪೂಜಾರಿ ಹಾಗೂ ಅವರ ಶಿಷ್ಯ (priest and his disciple death) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ (Chintamani taluk) ಗುಟ್ಟಹಳ್ಳಿ ದೇವಾಲಯದ ಬಳಿ ನಡೆದಿದೆ.

ಪೂಜಾರಿ ಶ್ರೀಧರ್ ಹಾಗೂ ​ಶಿಷ್ಯ ಲಕ್ಷ್ಮೀಪತಿ ಎಂಬುವರು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಶ್ರೀಧರ್ ಗುಟ್ಟಹಳ್ಳಿ ಗ್ರಾಮದಲ್ಲಿ (guttahalli village) ಒಂದು ಚಿಕ್ಕ ಗುಡಿ ಕಟ್ಟಿಕೊಂಡಿದ್ದರು. ಇವರನ್ನು ದೈವ ಪುರುಷ ಎಂದೇ ಜನರು ನಂಬಿದ್ದರು ಎನ್ನಲಾಗ್ತಿದೆ. ಅಲ್ಲದೆ, ಇವರ ಮೇಲೆ ನಂಬಿಕೆ ಇರಿಸಿಕೊಂಡಿದ್ದ ಸ್ಥಳೀಯರು ಎರಡು ಎಕರೆ ಜಮೀನು ಬಿಟ್ಟುಕೊಟ್ಟಿದ್ದಲ್ಲದೆ, ಪ್ರತಿ ಶುಕ್ರವಾರ ಹಾಗೂ ಪ್ರತಿ ಅಮಾವಾಸ್ಯೆಯಂದು ಕೊಳಾಲಮ್ಮ ದೇವಿ ಶ್ರೀಧರ್ ಮೈಮೇಲೆ ಬರುತ್ತಾಳೆ ಎಂದು ನಂಬಿದ್ದರು.

ಅಮ್ಮನವರ ಸೇವೆ ಮಾಡುವಂತೆ ತಾಕೀತು?

ಅಲ್ಲದೆ, ಶ್ರೀಧರ್​ ಹಾಗೂ ಅವರ ಶಿಷ್ಯ ಕೊಳಾಲಮ್ಮ ದೇವಿ ದೇವಸ್ಥಾನ ನಿರ್ಮಿಸಿ ಸಾಕಷ್ಟು ಅಭಿವೃದ್ಧಿ ಮಾಡಿದ್ದರಂತೆ. ಹಲವಾರು ವರ್ಷಗಳಿಂದ ಹೀಗೆ ನಡೆದುಕೊಂಡು ಬಂದಿದ್ದು, ಕಷ್ಟಗಳು ಪರಿಹಾರ ಆಗಬೇಕಾದರೆ 10-15 ದಿನ ಅಮ್ಮನವರ ಸೇವೆ ಮಾಡಬೇಕೆಂದು ಸನ್ನಿಧಿಗೆ ಬರುವ ಮಹಿಳೆಯರು ಹಾಗೂ ಪುರುಷರಿಗೆ ಅಲ್ಲಿಯೇ ಇರುವಂತೆ ಹೇಳುತ್ತಿದ್ದರು. ಈ ಬಗ್ಗೆ ಸ್ಥಳೀಯರಿಗೆ ಹಲವು ಅನುಮಾನ ಮೂಡಿತ್ತು ಎಂದು ಹೇಳಲಾಗ್ತಿದೆ.

ಚಿಂತಾಮಣಿಯಲ್ಲಿ ದೇವಸ್ಥಾನದ ಪೂಜಾರಿ, ಶಿಷ್ಯ ಆತ್ಮಹತ್ಯೆ?.. ಸಾವಿನ ಸುತ್ತ ಅನುಮಾನದ ಹುತ್ತ

ಆದರೆ ಶುಕ್ರವಾರ ರಾತ್ರಿ ಊಟ ಮಾಡಿ ಮಲಗಿದ ಪೂಜಾರಿ ಶ್ರೀಧರ್ ಮತ್ತು ಆತನ ಶಿಷ್ಯ ಲಕ್ಷ್ಮೀಪತಿ, ಇಂದು ಬೆಳಗಿನಜಾವ ನಾಲ್ಕು ಗಂಟೆಗೆ ನೇಣಿಗೆ ಶರಣಾಗಿದ್ದಾರೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.

ಅನುಮಾನ ಹುಟ್ಟಿಸಿದ ಸ್ಟೇಟಸ್:

ಬೆಳಗಿನಜಾವ ನಾಲ್ಕು ಗಂಟೆಗೆ ಸಾವನ್ನಪ್ಪಿದ ಶಿಷ್ಯ ಲಕ್ಷ್ಮೀಪತಿ ಮೊಬೈಲ್​ನಿಂದ ಆರು ಗಂಟೆ ವೇಳೆಗೆ 'ನಿನ್ನ ಮಡಿಲಲ್ಲಿ ಮಕ್ಕಳಂತೆ ಕಾಪಾಡುತ್ತಿದ್ದೆ, ಈಗ ನಮ್ಮೆಲ್ಲರನ್ನು ಅನಾಥ ಮಕ್ಕಳನ್ನಾಗಿ ಮಾಡಿದೆ ಅಮ್ಮ, ಮಿಸ್​​ ಯು ಅಮ್ಮ' ಎಂದು ಸ್ಟೇಟಸ್ ಹಾಕಿರುವುದು ಬೆಳಕಿಗೆ ಬಂದಿದೆ. ಆದರೆ ನಾಲ್ಕು ಗಂಟೆಗೆ ಸಾವನ್ನಪ್ಪಿದ ಲಕ್ಷ್ಮೀಪತಿ ಸ್ಟೇಟಸ್​ ಹಾಕಲು ಹೇಗೆ ಸಾಧ್ಯ? ಎಂಬ ಪ್ರಶ್ನೆ ಮೂಡಿದೆ.

ಮತ್ತೊಬ್ಬ ಶಿಷ್ಯ ನಾಪತ್ತೆ?

ಇನ್ನೊಂದೆಡೆ ಪೂಜಾರಿಯ ಮತ್ತೊಬ್ಬ ಶಿಷ್ಯ ಅನಿಲ್ ಎಂಬಾತ ಕಳೆದ ಒಂದು ವಾರದಿಂದ ನಾಪತ್ತೆ ಆಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಪೂಜಾರಿ ಶ್ರೀಧರ್ ಮತ್ತು ಶಿಷ್ಯ ಲಕ್ಷ್ಮೀಪತಿ ಸಾವಿನ ಬಗ್ಗೆ ನಿಖರ ಕಾರಣ ತಿಳಿದುಬಂದಿಲ್ಲ.

ಇದನ್ನೂ ಓದಿ: Gadchiroli encounter.. ಮಹಾರಾಷ್ಟ್ರದಲ್ಲಿ ನಾಲ್ವರು ನಕ್ಸಲರು ಹತ

Last Updated : Nov 13, 2021, 5:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.