ETV Bharat / state

ಶಿಕ್ಷಕರ ಹಿತ ರಕ್ಷಣೆಗೆ ಶಕ್ತಿ ಮೀರಿ ಶ್ರಮಿಸುತ್ತೇನೆ; ಪಿ.ವೆಂಕಟರವಣಪ್ಪ

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬಾಗೇಪಲ್ಲಿ ತಾಲೂಕು ಘಟಕದ ಅಧ್ಯಕ್ಷರಾಗಿ ಪಿ. ವೆಂಕಟರವಣಪ್ಪ, ಉಪಾಧ್ಯಕ್ಷರಾಗಿ ಆಂಜನೇಯಲು, ಮಹಿಳಾ ಉಪಾಧ್ಯಕ್ಷರಾಗಿ ಸುಮಾ.ವಿ, ಪ್ರಧಾನ ಕಾರ್ಯದರ್ಶಿಯಾಗಿ ಸಿ.ವೆಂಕಟರಾಯಪ್ಪ, ಖಜಾಂಚಿ ವರುಣ್ ಹೆಚ್.ಎಸ್., ಸಹ ಕಾರ್ಯದರ್ಶಿಗಳು ಫಯಾಜ್ ಅಹಮದ್, ಸಂಘಟನಾ ಕಾರ್ಯದರ್ಶಿಗಳಾಗಿ ಕದಿರಪ್ಪ ಇವರುಗಳು ಆಯ್ಕೆಯಾಗಿದ್ದಾರೆ.

P Venkataravanappa talk about Bagepall primary teachers Protection
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ
author img

By

Published : Jan 3, 2021, 4:50 PM IST

ಬಾಗೇಪಲ್ಲಿ: ಮೊದಲ ಅವಧಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಅನೇಕ ಸಮಸ್ಯೆಗಳನ್ನು ಪರಿಹರಿಸಿದ್ದು, ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ವ ಪ್ರಯತ್ನ ಮಾಡಿದ್ದೇನೆ. ಪ್ರಾಥಮಿಕ ಶಿಕ್ಷಕರ ಹಿತರಕ್ಷಣೆಗೆ ಶಕ್ತಿ ಮೀರಿ ಶ್ರಮಿಸಲಿದ್ದೇನೆ ಎಂದು ನೂತನ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಿ. ವೆಂಕಟರವಣಪ್ಪ ಹೇಳಿದರು.

P Venkataravanappa talk about Bagepall primary teachers Protection
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ

ನಮ್ಮದು ನೌಕರರ ಜಾತಿ ನಾವೆಲ್ಲರೂ ಒಂದೇ, ಸಮಸ್ಯೆಗಳು ಸಹ ಒಂದೇ ಆಗಿವೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಮೂಲಕ ಶಿಕ್ಷಕರಿಗೆ ನ್ಯಾಯ ಒದಗಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ನೌಕರರ ಸಂಘದಡಿ ಒಂದಾಗಿ ಸಾಗೋಣ ಎಂದು ಹೇಳಿದರು. ನಮ್ಮ ತಾಲೂಕಿನಲ್ಲಿ ಶಿಕ್ಷಕರು ಕಂಡ ಅನೇಕ ವರ್ಷಗಳ ಕನಸಾದ ಗುರು ಭವನ ನಿರ್ಮಾಣ ಮಾಡುವುದು ನಮ್ಮ ಮೊದಲ ಅದ್ಯತೆಯಾಗಿದೆ ಎಂದರು.

ಓದಿ: ಜೆಡಿಎಸ್​ ಸೋಲಿಸಲಾಗದ ಬಿಜೆಪಿಯಿಂದ ಮೈತ್ರಿಯ ಕಪಟ ನಾಟಕ; ಎಚ್​ಡಿಕೆ ಕಿಡಿ

ಬಾಗೇಪಲ್ಲಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಸಿದ್ದಪ್ಪ ಮಾತನಾಡಿ, ಚುನಾವಣೆಯಲ್ಲಿ ಪದಾಧಿಕಾರಿಗಳು ಸೋತವರು ಗೆದ್ದವರ ನಡುವೆ ಭಿನ್ನಾಭಿಪ್ರಾಯ ತೊರೆದು ಶಿಕ್ಷಕರ ಹಿತಕ್ಕಾಗಿ ದುಡಿಯಬೇಕು. ಏನೇ ಸಮಸ್ಯೆಗಳು ಇದ್ದರೂ ಎಲ್ಲರೂ ಒಟ್ಟಾಗಿ ಸೇರಿ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 2020-25 ನೇ ಅವಧಿಗೆ ನಡೆದ ತಾಲೂಕು ಘಟಕದ ಚುನಾವಣೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬಾಗೇಪಲ್ಲಿ ತಾಲೂಕು ಘಟಕದ ಅಧ್ಯಕ್ಷರಾಗಿ ಪಿ. ವೆಂಕಟರವಣಪ್ಪ, ಉಪಾಧ್ಯಕ್ಷರಾಗಿ ಆಂಜನೇಯಲು, ಮಹಿಳಾ ಉಪಾಧ್ಯಕ್ಷರಾಗಿ ಸುಮಾ.ವಿ, ಪ್ರಧಾನ ಕಾರ್ಯದರ್ಶಿಯಾಗಿ ಸಿ.ವೆಂಕಟರಾಯಪ್ಪ, ಖಜಾಂಚಿ ವರುಣ್ ಹೆಚ್.ಎಸ್., ಸಹ ಕಾರ್ಯದರ್ಶಿಗಳು ಫಯಾಜ್ ಅಹಮದ್, ಸಂಘಟನಾ ಕಾರ್ಯದರ್ಶಿಗಳಾಗಿ ಕದಿರಪ್ಪ ಇವರುಗಳು ಆಯ್ಕೆಯಾಗಿರುತ್ತಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.