ಚಿಕ್ಕಬಳ್ಳಾಪುರ: ಬೆಳಗಿನ ಜಾವ ಎ.ಆರ್.ಟಿ.ಒ.ಅಧಿಕಾರಿ ನಾಗರೆಡ್ಡಿ ಹಾಗೂ ತಂಡದವರು ಕಾರ್ಯಾಚರಣೆ ನಡೆಸಿ ಪರವಾನಗಿ ಇಲ್ಲದೆ ಸಂಚರಿಸುತ್ತಿದ್ದ ಖಾಸಗಿ ಬಸ್ಸನ್ನು ಜಪ್ತಿ ಮಾಡಿದ್ದಾರೆ. ಬಳಿಕ ಬಸ್ಸನ್ನು ಚಿಂತಾಮಣಿ ನಗರದ ಸರ್ಕಾರಿ ಬಸ್ ಡಿಪೋಗೆ ಸಾಗಿಸಿದ್ದಾರೆ.
ತಾಲ್ಲೂಕಿನ ಚಿನ್ನಸಂದ್ರ ಬಳಿ ಇರುವ ಬೈಪಾಸ್ ಬಳಿ ಬೆಂಗಳೂರು ಕಡೆಯಿಂದ ಆಂಧ್ರ ಪ್ರದೇಶದ ಬಿ.ಕೊತ್ತಕೋಟ ಹಾಗೂ ಮದನಪಲ್ಲಿ ಕಡೆಗೆ ಹೋಗುವ ಆಂಧ್ರ ಸರ್ಕಾರಿ ಬಸ್ಸುಗಳು ನಗರಕ್ಕೆ ಬಾರದೆ ಬೈಪಾಸ್ ಮೇಲೆ ಹೋಗುತ್ತಿದ್ದುದುನ್ನು ಕಂಡು ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.

ಒಂದು ವೇಳೆ ಚಿಂತಾಮಣಿ ನಗರಕ್ಕೆ ಆಂಧ್ರ ಸರ್ಕಾರಿ ಬಸ್ಸುಗಳು ಬರದೇ ಹೋದ ಸಂದರ್ಭದಲ್ಲಿ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದು ಎ.ಆರ್.ಟಿ.ಒ. ಅಧಿಕಾರಿ ನಾಗರಡ್ಡಿ ಎಚ್ಚರಿಕೆ ನೀಡಿದ್ದಾರೆ.