ಚಿಕ್ಕಬಳ್ಳಾಪುರ: ಹೊರರಾಜ್ಯದ ಪ್ರಯಾಣಿಕರಿಂದ ರಾಜ್ಯದಲ್ಲಿ ಆತಂಕ ಹೆಚ್ಚಾಗಿದ್ದು, ಈ ಬಗ್ಗೆ ತಲೆಬಿಸಿ ಮಾಡಿಕೊಂಡಿರುವ ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್ ಟ್ವಿಟರ್ನಲ್ಲಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿನ ಘಟನಾವಳಿಗಳಿಂದ ಆತಂಕ ಹೆಚ್ಚಾಗಿದೆ. ಇದರಿಂದ ನನಗೆ ನಿದ್ದೆಯೇ ಬರುತ್ತಿಲ್ಲ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.
![Medical Education Minister Sudhakar tweet about outer state travelers](https://etvbharatimages.akamaized.net/etvbharat/prod-images/kn-ckb-01-21-sudhakar-tweet-av-7202617_21052020120542_2105f_1590042942_943.jpg)
ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೇ ಮಹಾರಾಷ್ಟ್ರದಿಂದ ಸುಮಾರು 250 ಜನರನ್ನು 6 ಬಸ್ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಕಳುಹಿಸಿರುವುದು ದುರದೃಷ್ಟಕರ ಹಾಗೂ ದುಡುಕಿನ ನಿರ್ಧಾರ. ಹೊರರಾಜ್ಯದ ಪ್ರಯಾಣಿಕರಿಂದ ಸೋಂಕಿತರ ಸಂಖ್ಯೆ ಹೆಚ್ಚಳವಾಗಬಹುದೆಂಬ ಆತಂಕದಿಂದ ನಿದ್ದೆ ಬರುತ್ತಿಲ್ಲ. ಸದ್ಯ ಎಲ್ಲಾ ಜಿಲ್ಲಾಡಳಿತಗಳು ಎಚ್ಚರವಹಿಸಬೇಕು ಎಂದು ಟ್ವಿಟರ್ನಲ್ಲಿ ಮನವಿ ಮಾಡಿದ್ದಾರೆ.
![Medical Education Minister Sudhakar tweet about outer state travelers](https://etvbharatimages.akamaized.net/etvbharat/prod-images/kn-bng-06-medical-students-thanked-minister-script-7208083_18052020203753_1805f_1589814473_51.jpg)
ಇನ್ನು ಈಗಾಗಲೇ ಮಖ್ಯ ಕಾರ್ಯದರ್ಶಿಯ ಜೊತೆ ಮಾತನಾಡಿದ್ದು, ಕಳೆದ ಎರಡು ದಿನಗಳಿಂದ ನಮ್ಮ ಗಡಿಯಲ್ಲಿ ಬಂದು ಕಾಯುತ್ತಿದ್ದರು. ಹೀಗಾಗಿ ಮಾನವೀಯತೆ ದೃಷ್ಟಿಯಿಂದ ಅವರನ್ನು ಬಿಡಬೇಕಾಯಿತೆಂದು ತಿಳಿಸಿದ್ದಾರೆ. ಇನ್ನು ಹೊರ ರಾಜ್ಯದಿಂದ ಬಂದ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗುತ್ತಿದ್ದು, ಎಲ್ಲರ ಪರೀಕ್ಷೆಯನ್ನು ಮಾಡಲಾಗುತ್ತಿದೆ. ಜಿಲ್ಲೆಯ ಜನರು ಆತಂಕಪಡಬೇಕಿಲ್ಲ ಎಂದಿದ್ದಾರೆ.