ETV Bharat / state

ಚಿಕ್ಕಬಳ್ಳಾಪುರ: ಲವರ್ಸ್ ಡೇಗೆ ನಾಲ್ಕು‌ ದಿನ ಬಾಕಿ ಇರುವಾಗಲೇ ಪೊಲೀಸ್ ಠಾಣೆ ಮೆಟ್ಟಿಲೇರಿದ ನವ ಜೋಡಿ - ಚಿಕ್ಕಬಳ್ಳಾಫುರದಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನವ ಜೋಡಿ

ಚಿಕ್ಕಬಳ್ಳಾಪುರ ತಾಲೂಕಿನ ಆರೋಗ್ಯ ಸಚಿವ ಡಾ. ಸುಧಾಕರ್ ತವರು ಗ್ರಾಮ ಪೆರೇಸಂದ್ರ ಗ್ರಾಮದ ಕೃಷ್ಣಪ್ಪ ಅವರ ಪುತ್ರಿ ವಸುಧಾ ಮತ್ತು ಅಪ್ಪಸನ ಹಳ್ಳಿ ಗ್ರಾಮದ ಗೋವಿಂದ ಬಿನ್ ಶೆಟ್ಟಿ ರಾಮಯ್ಯ ಎಂಬಾತನನ್ನು ಪ್ರೀತಿಸಿ ಕಳೆದ 10 ದಿನಗಳ ಹಿಂದೆ ಮದುವೆಯಾಗಿದ್ದಾರೆ.

lovers-going-to-police-station-against-parents-in-chikkaballapura
ನವಜೋಡಿ
author img

By

Published : Feb 10, 2022, 10:08 PM IST

Updated : Feb 10, 2022, 11:05 PM IST

ಚಿಕ್ಕಬಳ್ಳಾಪುರ: ಪೋಷಕರ ಕಡೆಯಿಂದ ನಮಗೆ ಪ್ರಾಣ ಬೆದರಿಕೆ ಇದೆ. ನಮಗೆ ನ್ಯಾಯ ದೊರಕುವವರೆಗೂ ಪೊಲೀಸ್ ಠಾಣೆ ಬಿಟ್ಟು ಹೋಗಲ್ಲ ಎಂದು ನವ ವಿವಾಹಿತ ಜೋಡಿಯೊಂದು ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.

ದೂರುದಾರರು ಮಾತನಾಡಿದರು

ಚಿಕ್ಕಬಳ್ಳಾಪುರ ತಾಲೂಕಿನ ಆರೋಗ್ಯ ಸಚಿವ ಡಾ. ಸುಧಾಕರ್ ತವರು ಗ್ರಾಮ ಪೆರೇಸಂದ್ರ ಗ್ರಾಮದ ಕೃಷ್ಣಪ್ಪ ಅವರ ಪುತ್ರಿ ವಸುಧಾ ಮತ್ತು ಅಪ್ಪಸನ ಹಳ್ಳಿ ಗ್ರಾಮದ ಗೋವಿಂದ ಬಿನ್ ಶೆಟ್ಟಿ ರಾಮಯ್ಯ ಎಂಬಾತನನ್ನು ಪ್ರೀತಿಸಿ ಕಳೆದ 10 ದಿನಗಳ ಹಿಂದೆ ಮದುವೆಯಾಗಿದ್ದಾರೆ. ಆದರೆ, ಪೋಷಕರಿಗೆ ಮಾಹಿತಿ ತಿಳಿಯುತ್ತಿದ್ದಂತೆ ಪ್ರಾಣ ಬೆದರಿಕೆ ಕರೆಗಳು ಬಂದಿವೆ. ನಮಗೆ ಬದುಕಲು ಅವಕಾಶ ಕೊಡಿ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿ ಪೋಷಕರ ಮೇಲೆ ದೂರು ದಾಖಲಿಸಿದ್ದಾರೆ.

ಮದುವೆಯ ನಂತರ ಧರ್ಮಸ್ಥಳಕ್ಕೆ ಹೋಗಿದ್ದೇವೆ. ಆದರೆ, ಅಷ್ಟರೊಳಗೆ ಜೀವ ಬೆದರಿಕೆ ಕರೆಗಳು ಬಂದಿವೆ. ಸದ್ಯ ಏನಾದ್ರು ಆಗಲೀ ನಮ್ಮನ್ನು ಬಿಡಿಸಿ ಬೇರೆ ಮದುವೆ ಮಾಡಲು ಪೋಷಕರು ನಿರ್ಧರಿಸಿದ್ದಾರೆ. ನಮ್ಮ ತಂದೆ ಮಾವಂದಿರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿರುವ ಅವರು, ಪ್ರಾಣ ರಕ್ಷಣೆಗಾಗಿ ಚಿಂತಾಮಣಿ ನಗರ ಠಾಣೆಯ ಮೆಟ್ಟಿಲೇರಿರುವುದಾಗಿ ಹಾಗೂ ನಮಗೆ ನ್ಯಾಯ ದೊರಕಿಸಿಕೊಡುವವರೆಗೂ ಇಲ್ಲಿಯೇ ಇರುವುದಾಗಿ ಬೇಡಿಕೊಂಡಿದ್ದಾರೆ.

ಓದಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಕೊಪ್ಪಳದಲ್ಲಿ 16 ಎಕರೆ ಕಬ್ಬು ಬೆಂಕಿಗಾಹುತಿ

Last Updated : Feb 10, 2022, 11:05 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.