ಚಿಕ್ಕಬಳ್ಳಾಪುರ: ಗಂಡನ ಮನೆಯವರ ಕಿರುಕುಳ ತಾಳಲಾರದೆ ಬಾವಿಗೆ ಬಿದ್ದು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಬೋದಿಕದಿರೆಪಲ್ಲಿಯಲ್ಲಿ ನಡೆದಿದೆ.
ಪ್ರತಿ ನಿತ್ಯ ಮದ್ಯ ಸೇವಿಸಿ ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ಕುಡುಕ ಗಂಡನನ್ನು ಮದ್ಯವ್ಯಸನದಿಂದ ಬಿಡಿಸಲು ಆಸ್ಪತ್ರೆಗೆ ಸೇರಿಸಿದ್ದರು. ಆ ಸಂದರ್ಭದಲ್ಲಿ ಮನೆಯಲ್ಲಿ ಅತ್ತೆ ಮಾವನ ಕಡೆಯವರು ನೀಡುತ್ತಿದ್ದ ಕಿರುಕುಳ ತಾಳಲಾರದೆ ಪಲ್ಲವಿ (22) ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.
ಪಲ್ಲವಿ, ಬೋದಿಕದಿರೆಪಲ್ಲಿಯ ಪವನ್ ಕುಮಾರ್ ಜೊತೆ ನಾಲ್ಕು ವರ್ಷದ ಹಿಂದೆ ಮದುವೆ ಆಗಿದ್ದಳು. ಮನೆಯಲ್ಲಿ ಗಂಡ ಇಲ್ಲದ ಸಂದರ್ಭದಲ್ಲಿ ಮಾವ ರವಿ, ಅತ್ತೆ ಸುನಿತಾ ಹಾಗೂ ನಾದಿನಿ ಉಮಾ ಕಿರುಕುಳ ತಾಳಲಾರದೆ ಗ್ರಾಮದ ಬಳಿ ಇರುವ ಬಾವಿಗೆ ಬಿದ್ದು ಪಲ್ಲವಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಲಾಗಿದೆ.
ಬಾಗೆಪಲ್ಲಿಯ ಹೊರಠಾಣೆ ಪಾತಪಾಳ್ಯದಲ್ಲಿ ದೂರು ದಾಖಲಾಗಿದೆ.