ETV Bharat / state

ಚಿಂತಾಮಣಿ ಹಾಲಿ ಶಾಸಕರ ವಿರುದ್ಧ ಮಾಜಿ ಶಾಸಕರ ಕಿಡಿ

ಸರ್ಕಾರದಿಂದ ಅನುದಾನ ತಂದು ಆಸ್ಪತ್ರೆಯನ್ನು ಅಭಿವೃದ್ಧಿ ಮಾಡಲಿ. ಶಾಸಕರಾಗಿ ನೀವು ಏನು ಮಾಡಿದ್ದೀರಾ, ಶಾಸಕರಾಗಿ ನಿಮ್ಮ ಕೈಲಾಗದ ಕೆಲಸ ನಾವು ಮಾಡುತ್ತಿದ್ದೇವೆ. ಆಸ್ಪತ್ರೆಯ ಕಮಿಟಿಯ ಅಧ್ಯಕ್ಷರಾಗಿರುವ ನೀವು ಎಷ್ಟು ಬಾರಿ ಸಭೆ ಮಾಡಿದ್ದೀರಾ, ಆಸ್ಪತ್ರೆಯ ಎಷ್ಟು ಸಮಸ್ಯೆಗಳನ್ನು ಬಗೆಹರಿಸಿದ್ದೀರಾ ಎಂದು ಖಾರವಾಗಿ ಪ್ರಶ್ನಿಸಿದ ಅವರು, ಅವನ್ಯಾರೋ ಕಾಲ್ ಮಾಡಿ ವೈದ್ಯರನ್ನು ಬೆದರಿಸುತ್ತಾರಂತೆ, ಆಸ್ಪತ್ರೆ ಏನು ಶಾಸಕರ ಆಸ್ತಿನಾ..

JK Krishna Reddy, MC Sudhakar
ಜೆಕೆ ಕೃಷ್ಣಾರೆಡ್ಡಿ, ಎಂಸಿ ಸುಧಾಕರ್
author img

By

Published : Jul 10, 2021, 6:09 PM IST

Updated : Jul 10, 2021, 10:54 PM IST

ಚಿಕ್ಕಬಳ್ಳಾಪುರ : ಕವರ್‌ನಲ್ಲಿ ಏನೋ ಕೊಟ್ಟು ಪುಕ್ಕಟೆ ಪ್ರಚಾರ ಪಡೆಯುವ ಬದಲು, ಸರ್ಕಾರದಿಂದ ಅನುದಾನ ತಂದು ಆಸ್ಪತ್ರೆ ಅಭಿವೃದ್ಧಿ ಪಡಿಸಲಿ. ಸರ್ಕಾರಿ ಆಸ್ಪತ್ರೆ ಯಾರಪ್ಪನ ಸ್ವತ್ತಲ್ಲ. ಯೋಗ್ಯತೆ ಇದ್ದರೆ ಸರ್ಕಾರದಿಂದ ಅನುದಾನ ತಂದು ಆಸ್ಪತ್ರೆಯನ್ನು ಅಭಿವೃದ್ಧಿ ಪಡಿಸಲಿ. ಅದು ಬಿಟ್ಟು ಅಧಿಕಾರಿಗಳ ಮೇಲೆ ಧರ್ಪ ತೋರಿಸಿ ಕಾರ್ಯಕ್ರಮಗಳಿಗೆ ತಡೆಯುವುದು ಸರಿಯಲ್ಲ ಎಂದು ಚಿಂತಾಮಣಿ ಹಾಲಿ ಶಾಸಕ ಜೆ ಕೆ ಕೃಷ್ಣಾರೆಡ್ಡಿ ವಿರುದ್ಧ ಮಾಜಿ ಶಾಸಕ ಎಂ ಸಿ ಸುಧಾಕರ್ ಕಿಡಿಕಾರಿದ್ದಾರೆ.

ಚಿಂತಾಮಣಿ ಹಾಲಿ ಶಾಸಕರ ವಿರುದ್ಧ ಮಾಜಿ ಶಾಸಕರ ಕಿಡಿ

ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಂಡಿದ್ದ ಆಶ್ರಯ ಹಸ್ತ ಟ್ರಸ್ಟ್ ವತಿಯಿಂದ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಿರುವ 300 ಎಲ್‌ಪಿಎಂ ಆಮ್ಲಜನಕ ತಯಾರಿ ಘಟಕದ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮಕ್ಕೆ ಜಿಲ್ಲಾ ಆರೋಗ್ಯಾಧಿಕಾರಿಗಳು ಬರುವುದಾಗಿ ತಿಳಿಸಿದ್ದರು. ಆದರೆ, ತಾಲೂಕಿನ ಸಮಾಜ ಸೇವೆ ಗುಂಗಿನಲ್ಲಿ ಬಂದ ಮಹಾನುಭಾವರು, ನಿಮ್ಮೆಲ್ಲರ ಮತಗಳನ್ನು ಪಡೆದು ಶಾಸಕರಾದಂತಹವರು, ಅಧಿಕಾರಿಗಳಿಗೆ ಬೆದರಿಕೆ ಹಾಕಿ ಕಾರ್ಯಕ್ರಮಕ್ಕೆ ಬಂದರೆ, ಅಮಾನತು ಮಾಡಿಸುತ್ತೇನೆ, ಹಕ್ಕುಚ್ಯುತಿ ಹಾಕಿಸುತ್ತೇನೆಂದು ಬೆದರಿಕೆ ಹಾಕುವುದು ಸರಿ ಅಲ್ಲ ಎಂದರು.

ಇನ್ನು, ಕವರ್‌ಗಳಲ್ಲಿ ಏನೋ ಹಾಕಿಕೊಟ್ಟು ದಿನಕ್ಕೆ ಎರಡು ಫೋಟೋ ಪೇಪರ್‌ಗಳಲ್ಲಿ ಹಾಕಿಸಿಕೊಂಡು ಯಾರೋ ಕೊಡುವ ಕಿಟ್‌ಗಳಿಗೆ ಇವರು ಹೋಗಿ ಕೈಜೋಡಿಸಿ ಹೆಸರು ಪಡೆಯುವುದು ನಮಗೆ ಅವಶ್ಯಕತೆ ಇಲ್ಲ. ಅಂತಹ ಚಿಲ್ಲರೆ, ಪುಕ್ಕಟೆ ಕೆಲಸಕಗಳು ಮಾಡುವುದು ನಮಗೆ ಬೇಕಾಗಿಲ್ಲ. ಆದ್ದರಿಂದ ಮೈಮೇಲೆ ಪ್ರಜ್ಞೆ ಇಟ್ಟು ಯಾವುದು ಸರ್ಕಾರಿ, ಯಾವುದು ಖಾಸಗಿ ಕಾರ್ಯಕ್ರಮ ಎಂಬ ಖಚಿತ ಜ್ಞಾನ ಇಟ್ಟುಕೊಳ್ಳಿ ಎನ್ನು ವ ಮೂಲಕ ಹಾಲಿ ಶಾಸಕರ ವಿರುದ್ಧ ಕಿಡಿಕಾರಿದರು.

ಸರ್ಕಾರದಿಂದ ಅನುದಾನ ತಂದು ಆಸ್ಪತ್ರೆಯನ್ನು ಅಭಿವೃದ್ಧಿ ಮಾಡಲಿ. ಶಾಸಕರಾಗಿ ನೀವು ಏನು ಮಾಡಿದ್ದೀರಾ, ಶಾಸಕರಾಗಿ ನಿಮ್ಮ ಕೈಲಾಗದ ಕೆಲಸ ನಾವು ಮಾಡುತ್ತಿದ್ದೇವೆ. ಆಸ್ಪತ್ರೆಯ ಕಮಿಟಿಯ ಅಧ್ಯಕ್ಷರಾಗಿರುವ ನೀವು ಎಷ್ಟು ಬಾರಿ ಸಭೆ ಮಾಡಿದ್ದೀರಾ, ಆಸ್ಪತ್ರೆಯ ಎಷ್ಟು ಸಮಸ್ಯೆಗಳನ್ನು ಬಗೆಹರಿಸಿದ್ದೀರಾ ಎಂದು ಖಾರವಾಗಿ ಪ್ರಶ್ನಿಸಿದ ಅವರು, ಅವನ್ಯಾರೋ ಕಾಲ್ ಮಾಡಿ ವೈದ್ಯರನ್ನು ಬೆದರಿಸುತ್ತಾರಂತೆ, ಆಸ್ಪತ್ರೆ ಏನು ಶಾಸಕರ ಆಸ್ತಿನಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

Last Updated : Jul 10, 2021, 10:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.