ETV Bharat / state

ಪ್ರಿಯತಮೆ ಮೇಲಿನ ದ್ವೇಷಕ್ಕೆ 3 ವರ್ಷದ ಕಂದಮ್ಮನ ಬಲಿ ಪಡೆದ ಮಾಜಿ ಪ್ರಿಯಕರ - ಮಗು ಕೊಲೆ

ಕಳೆದ 14 ದಿನಗಳ ಹಿಂದೆ ನಿಗೂಢವಾಗಿ ಕಾಣೆಯಾಗಿದ್ದ ಮೂರು ವರ್ಷದ ವಿಷ್ಣುವರ್ಧನ್‌ ಎಂಬ ಬಾಲಕನಿಗಾಗಿ ಪೋಷಕರು ತಮ್ಮ ಸ್ವಗ್ರಾಮ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದಾರೆ. ಆ ನಂತರ ಪೊಲೀಸ್ ಠಾಣೆಗೆ ಇದೇ ತಿಂಗಳ 16ರಂದು ದೂರು ನೀಡಿದ್ದರು.

former-lover-kills-his-female-friends-three-year-child
ಪ್ರಿಯತಮೆ ಮೇಲಿನ ದ್ವೇಷಕ್ಕೆ 3 ವರ್ಷದ ಕಂದಮ್ಮನ ಬಲಿ ಪಡೆದ ಮಾಜಿ ಪ್ರಿಯಕರ
author img

By

Published : Mar 29, 2021, 8:39 PM IST

ಚಿಕ್ಕಬಳ್ಳಾಪುರ: ಮಹಿಳೆಯೋರ್ವಳ ಮೂರು ವರ್ಷದ ಮಗುವನ್ನು ಮಾಜಿ ಪ್ರಿಯಕರನೊಬ್ಬ ಕತ್ತು ಹಿಸುಕಿ ಕೊಲೆಗೈದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನೆ ನಡೆದು 14 ದಿನಗಳ ಬಳಿಕ ಮೂಳೆಗಳು ದೊರೆತಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಕಳೆದ 14 ದಿನಗಳಿಂದ ಹಿಂದೆ ನಿಗೂಢವಾಗಿ ಕಾಣೆಯಾಗಿದ್ದ ಬಾಲಕನಿಗಾಗಿ ಪೋಷಕರು ತಮ್ಮ ಸ್ವಗ್ರಾಮ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಹುಡುಕಾಟ ನಡೆಸಿ ನಂತರ ಪೊಲೀಸ್ ಠಾಣೆಯಲ್ಲಿ ಇದೇ ತಿಂಗಳ 16ರಂದು ದೂರು ದಾಖಲಿಸಿದ್ದರು.

ಪ್ರಿಯತಮೆ ಮೇಲಿನ ದ್ವೇಷಕ್ಕೆ 3 ವರ್ಷದ ಕಂದಮ್ಮನ ಬಲಿ ಪಡೆದ ಮಾಜಿ ಪ್ರಿಯಕರ

ನಾಪತ್ತೆ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರು ಸಂಶಯಸ್ಥರನ್ನು ವಿಚಾರಣೆ ಮಾಡುವ ವೇಳೆ ಮಹಿಳೆ ಹಾಗೂ ಪ್ರಿಯಕರನ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ. ಆರೋಪಿ ರಾಮಾಂಜಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿ ವೇಳೆ ಕಿಡ್ನಾಪ್ ಮಾಹಿತಿ ಬಾಯ್ಬಿಟ್ಟಿದ್ದಾನೆ.

ಹಳೆ ಪ್ರಿಯತಮೆ ಹಾಗೂ ರಾಮಾಂಜಿ ನಡುವೆ ಅನೈತಿಕ ಸಂಬಂಧ ನಡೆಯುತ್ತಿತ್ತು ಎನ್ನಲಾಗಿದೆ. ಈ ನಡುವೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಜಗಳ ನಡೆದಿದೆ. ಇದಕ್ಕೆ ಪ್ರತೀಕಾರ ತಿರಿಸಿಕೊಳ್ಳಲು ಮಗನನ್ನು ಅಪಹರಿಸಿ ಕತ್ತು ಹಿಸುಕಿ ಕೊಲೆ ಮಾಡಿದ್ದಲ್ಲದೆ ಶವವನ್ನು ಗ್ರಾಮದ ಹೊರವಲಯದಲ್ಲಿ ಎಸೆದಿದ್ದಾನೆ ಎಂಬುದು ತಿಳಿದುಬಂದಿದೆ.

ಇದನ್ನೂ ಓದಿ: ಕೆರೆಗೆ ಸ್ನಾನಕ್ಕೆ ಹೋದ ಯುವಕ ನೀರಲ್ಲಿ ಮುಳುಗಿ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.