ಚಿಕ್ಕಬಳ್ಳಾಪುರ: ನಕಲಿ ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಕಾರ್ಯಾಚರಣೆ ನಡೆಸಿ 10 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಸರಕು ಸರಂಜಾಮುಗಳನ್ನು ವಶಪಡಿಸಿಕೊಂಡಿರುವ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ತಾದೂರಿನಲ್ಲಿ ನಡೆದಿದೆ.
ತಾದೂರು ಗ್ರಾಮದ ರೇಷ್ಮೆ ಶೆಡ್ನಲ್ಲಿ ನಕಲಿ ಮದ್ಯ ತಯಾರಿಸಿ ವಿವಿಧ ಬ್ರ್ಯಾಂಡ್ಗಳ ಲೇಬಲ್ ಹಾಕಿ ಮದ್ಯ ತಯಾರಿಕಾ ಘಟಕವನ್ನೇ ತಯಾರಿಸಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಜಿಲ್ಲಾ ಅಬಕಾರಿ ಅಧಿಕಾರಿಗಳು 37,800 ಲೀಟರ್ ನಕಲಿ ಮದ್ಯ ಹಾಗೂ 1290 ಲೀಟರ್ ಸ್ಪಿರಿಟ್ ಜಪ್ತಿ ಮಾಡಿ ಆರೋಪಿ ಟಿ.ಎಂ. ಮಂಜುನಾಥ್ನನ್ನು ಬಂಧಿಸಿದ್ದಾರೆ.
ವಿವಿಧ ಬ್ರ್ಯಾಂಡ್ಗಳ ನಕಲಿ ಮದ್ಯ ತಯಾರಿಸಿ ತಮಿಳುನಾಡಿಗೆ ಸರಬರಾಜು ಮಾಡುತ್ತಿರುವುದಾಗಿ ಆರೋಪಿ ಹೇಳಿದ್ದಾನೆ ಎಂದು ಜಿಲ್ಲಾ ಅಬಕಾರಿ ಉಪಆಯುಕ್ತ ನರೇಂದ್ರ ಕುಮಾರ್ ಮಾಹಿತಿ ನೀಡಿದ್ದಾರೆ.