ETV Bharat / state

ಆರೋಗ್ಯ ಸಚಿವರ ತವರಿನಲ್ಲೇ ಹಿಂಗಾದ್ರೇ.. ಹೂವಿನ ಮಾರುಕಟ್ಟೆಯಲ್ಲಿ ಕೋವಿಡ್​ ನಿಯಮಗಳ ಉಲ್ಲಂಘನೆ

ಜಿಲ್ಲೆಯಲ್ಲಿ ನಿತ್ಯ 300 ರಿಂದ 500 ಪ್ರಕರಣಗಳು ದಾಖಲಾಗುತ್ತಿದ್ದು, 2500ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಆಸ್ಪತ್ರೆಗಳಲ್ಲಿ ಬೆಡ್​ಗಳ ಕೊರತೆ ಎದುರಾಗಿದ್ದರೂ ಸಹ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ..

chikkaballapur
ಕೋವಿಡ್​ ನಿಯಮಗಳ ಉಲ್ಲಂಘನೆ: ಹೂ ಕೊಳ್ಳಲು ಮುಗಿಬಿದ್ದ ಜನತೆ
author img

By

Published : Apr 26, 2021, 2:34 PM IST

ಚಿಕ್ಕಬಳ್ಳಾಪುರ : ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತವರು ಜಿಲ್ಲೆ ಚಿಕ್ಕಬಳ್ಳಾಪುರದ ಹೊರವಲಯದ ಕೆವಿ ಕ್ಯಾಂಪಸ್ ಬಳಿಯ ಹೂವಿನ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಮತ್ತು ಮಾಸ್ಕ್ ಮರೆತು ಗ್ರಾಹಕರು ಮತ್ತು ವ್ಯಾಪಾರಿಗಳು ಕೋವಿಡ್​ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.

ಕೋವಿಡ್​ ನಿಯಮಗಳ ಉಲ್ಲಂಘನೆ : ಹೂ ಕೊಳ್ಳಲು ಮುಗಿಬಿದ್ದ ಜನತೆ

ಮಾರುಕಟ್ಟೆಯಲ್ಲಿ ಮಾರಾಟಗಾರರು ಮತ್ತು ಗ್ರಾಹಕರು ಮಾಸ್ಕ್ ಮತ್ತು ಸಾಮಾಜಿಕ ಅಂತರ ಮರೆತು ಹೂವಿನ ವ್ಯಾಪಾರದಲ್ಲಿ ತೊಡಗಿದ್ದಾರೆ.

ನಿಯಮ ಪಾಲನೆ ಮಾಡಬೇಕಾದ ಎಪಿಎಂಸಿ ಇಬ್ಬರು ಸೆಕ್ಯೂರಿಟಿಗಳನ್ನು ಮಾತ್ರ ನೇಮಿಸಿದ್ದು, ಪದೇಪದೆ ಎಚ್ಚರಿಕೆ ನೀಡುತ್ತಿದ್ದರು ಅವರ ಮಾತನ್ನು ಯಾರೂ ಕೇಳುತ್ತಿರಲಿಲ್ಲ.

ಕೊರೊನಾ ನಿಯಮ ಜಾರಿ ಮಾಡಬೇಕಾದ ಅಧಿಕಾರಿಗಳು ಮತ್ತು ಪೊಲೀಸರು ಮಾತ್ರ ಹೂವಿನ ಮಾರುಕಟ್ಟೆಯತ್ತ ಸುಳಿದಿಲ್ಲ ಎನ್ನಲಾಗ್ತಿದೆ.

ಜಿಲ್ಲೆಯಲ್ಲಿ ನಿತ್ಯ 300 ರಿಂದ 500 ಪ್ರಕರಣಗಳು ದಾಖಲಾಗುತ್ತಿದ್ದು, 2500ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಆಸ್ಪತ್ರೆಗಳಲ್ಲಿ ಬೆಡ್​ಗಳ ಕೊರತೆ ಎದುರಾಗಿದ್ದರೂ ಸಹ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿರುವುದು ವಿಪರ್ಯಾಸವೇ ಸರಿ.

ಆರೋಗ್ಯ ಸಚಿವರ ತವರು ಜಿಲ್ಲೆಯಲ್ಲಿಯೇ ಈ ಗತಿಯಾದರೆ ರಾಜ್ಯದ ಉಳಿದೆಡೆ ಹೇಗೆ ಕಾನೂನು ಪಾಲನೆಯಾಗುತ್ತದೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಕೊರೊನಾ ಮೊದಲ ಅಲೆ ಬಂದಾಗ ನಗರದ ಎಂ.ಜಿ.ರಸ್ತೆಯಲ್ಲಿದ್ದ ಎಪಿಎಂಸಿ ಮತ್ತು ಹೂವಿನ ಮಾರು ಕಟ್ಟೆಯನ್ನು ಚಿಕ್ಕಬಳ್ಳಾಪುರದ ಹೊರವಲಯದ ಕೆ ವಿ ಕ್ಯಾಂಪಸ್ ಬಳಿಗೆ ಸ್ಥಳಾಂತರಿಸಲಾಗಿತ್ತು.

ಕೊರೊನಾ ಕಡಿಮೆಯಾದ ನಂತರ ತರಕಾರಿ ಮಾರುಕಟ್ಟೆ ಮಾತ್ರ ಎಪಿಎಂಸಿಗೆ ವರ್ಗಾಯಿಸಿ ಹೂವಿನ ಮಾರುಕಟ್ಟೆಯನ್ನು ಕೆವಿ ಕ್ಯಾಂಪಸ್ ಬಳಿಯೇ ಉಳಿಸಿದ್ದರು. ಸದ್ಯ ಇಲ್ಲಿಯೂ ಕೊವೀಡ್ ನಿಯಮಗಳನ್ನು ಪಾಲನೆ ಮಾಡದೇ ದಿವ್ಯ ನಿರ್ಲಕ್ಷ ತೋರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.