ಚಿಕ್ಕಬಳ್ಳಾಪುರ: ಕಾಂಗ್ರೆಸ್ ಪಕ್ಷ ವಿರೋಧ ಪಕ್ಷವಾಗಿ ಇರ್ಲಿಕ್ಕೆ ಯೋಗ್ಯ ಅಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರು ಚಿಕ್ಕಬಳ್ಳಾಪುರದಲ್ಲಿ ಗಂಭೀರವಾಗಿ ಆರೋಪ ಮಾಡಿದ್ದಾರೆ.
ನಗರದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು, ಸಚಿವ ಸಂಪುಟ ವಿಸ್ತರಣೆ ಸಿಎಂ ಸರ್ವೋಚ್ಚ ತೀರ್ಮಾನ ಎಂದು ಕಾಂಗ್ರೆಸ್ ಹಿರಿಯ ನಾಯಕರು, ವಿರೋಧ ಪಕ್ಷದ ನಾಯಕರೇ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ವಿರೋಧ ಪಕ್ಷವಾಗಿ ಇರ್ಲಿಕ್ಕೆ ಯೋಗ್ಯ ಅಲ್ಲ. ಸದ್ಯ ಕಾಂಗ್ರೆಸ್ ದೇಶಗಲ್ಲಿ ಅಸ್ತಿತ್ವ ಕಳೆದುಕೊಂಡಿದೆ. ಅದು ಗೋಡೆ ಮೇಲೆ ಬರೆದಿರುವ ಸತ್ಯ. ಜನರ ಅಭಿವೃದ್ಧಿ, ಸುಭದ್ರ ಸರ್ಕಾರ ನಮ್ಮ ನಿಲುವಾಗಿದೆ ಎಂದು ತಿಳಿಸಿದರು.
ಇನ್ನು ವೀರಶೈವ ಅಭಿವೃದ್ಧಿ ನಿಗಮ ಮಂಡಳಿ ಬಗ್ಗೆ ಮಾತನಾಡಿ, ನಾನಗೆ ಅಷ್ಟೇನು ಗೊತ್ತಿಲ್ಲ, ಸಿಎಂ ತೀರ್ಮಾನದ ಬಗ್ಗೆ ಇಗ್ತಾನೆ ಗೊತ್ತಾಯ್ತು. ಅನೇಕ ಅಭಿವೃದ್ಧಿ ನಿಗಮಗಳು ಮಾಡೋದ್ರಿಂದ ಸಮುದಾಯದ ಅಭಿವೃದ್ಧಿಗೆ ಮಹತ್ವ ಸಿಗುತ್ತೆ. ಇದರಿಂದ ಎಲ್ಲಾ ಸಮುದಾಯದ ಅಭಿವೃದ್ಧಿಗೆ ಮಹತ್ವ ಸಿಗಲಿದೆ. ಅಭಿವೃದ್ಧಿ ನಿಗಮಕ್ಕೆ ಇನ್ನು ಬೇಡಿಕೆಗಳು ಹೆಚ್ಚಾಗಲಿದೆ ಎಂದು ತಿಳಿಸಿದರು.