ಚಿಕ್ಕಬಳ್ಳಾಪುರ: ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಪಕ್ಷದವರು ಕ್ಷುಲ್ಲಕ ಕಾರಣಗಳನ್ನು ಇಟ್ಟುಕೊಂಡು ಸುಳ್ಳು ಆಪಾದನೆಗಳನ್ನು ಮಾಡುವುದನ್ನು ಕರಗತ ಮಾಡಿಕೊಂಡಿದ್ದಾರೆ ಎಂದು ಆರೋಗ್ಯ ಸಚಿವ ಸುಧಾಕರ್ ಟೀಕಿಸಿದರು.
ಓಟರ್ ಐಡಿ ಹಗರಣ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ನವರು ಕ್ಷುಲ್ಲಕ ಕಾರಣಗಳನ್ನು ಇಟ್ಟುಕೊಳ್ಳುತ್ತಾರೆ. ಜಾತಿ ಸಮೀಕ್ಷೆಗೆ ಕಾಂತರಾಜ್ ಸಮಿತಿ 130 ಕೋಟಿ ರೂ ಖರ್ಚು ಮಾಡಿದ್ದಾರೆ. ಕಾಂತರಾಜ್ ಜಾತಿ ಸಮೀಕ್ಷೆ ಹೊಣೆಗಾರಿಕೆಯನ್ನು ಕಾಂಗ್ರೆಸ್ನವರು ಹೊರುತ್ತಾರಾ? ನೂರ ಮೂವತ್ತು ಕೋಟಿಗೆ ಕಾಂಗ್ರೆಸ್ ಲೆಕ್ಕಾ ಕೊಡುತ್ತಾ?, ಕೇವಲ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಹಂಚಿಕೆ ಮಾಡಿಲ್ಲವಾ? ಆ ವಿಷಯಗಳನ್ನು ನಾನು ವಾಟ್ಸಾಪ್ನಲ್ಲಿ ಶೇರ್ ಮಾಡ್ಲಾ ಎಂದರು.
ಗೌಪ್ಯವಾಗಿ ಅವರಿಗೆ ಬೇಕಾದ ಕ್ಯಾಂಡಿಡೇಟ್ಗಳಿಗೆ ಮಾಹಿತಿ ಸೋರಿಕೆ ಮಾಡಿಲ್ಲವಾ?, ಕಾನೂನು ಮೀರಿ ಸಮೀಕ್ಷೆ ಮಾಡಿದರೆ ಶಿಕ್ಷೆ ಖಂಡಿತಾ ಆಗುತ್ತದೆ. ತಾರ್ಕಿಕ ವಿಷಯಗಳನ್ನು ಇಟ್ಟುಕೊಂಡು ಚರ್ಚೆಗೆ ಬರಲಿ. ಕ್ಷುಲ್ಲಕ ವಿಷಯಗಳನ್ನು ಇಟ್ಟುಕೊಂಡು ಹೋದರೆ ಜನರ ಮುಂದೆ ಬೆತ್ತಲಾಗುತ್ತೀರಾ. ಅಭಿವೃದ್ದಿ ವಿಚಾರದಲ್ಲಿ ಪಕ್ಷ ಮುಂದಿದೆ ಎಂದು ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಆರೋಗ್ಯ ಸಚಿವ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ತಾವೇ ಬೂತ್ ಮಟ್ಟದ ಅಧಿಕಾರಿಗಳು ಎಂದು ಹೇಳಿರುವ ಬಗ್ಗೆ ಎಫ್ಐಆರ್ನಲ್ಲಿ ಉಲ್ಲೇಖವಿದೆ: ಪ್ರತಾಪ್ ರೆಡ್ಡಿ