ETV Bharat / state

ಬಾಗೇಪಲ್ಲಿ: ಭಾರತ ಕಮ್ಯುನಿಸ್ಟ್ ಪಕ್ಷಕ್ಕೆ 100 ರ ಸಂಭ್ರಮ... - bagepalli Communist Party of India celebrates 100th anniversary

ಬ್ರಿಟಿಷರ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದುಕೊಳ್ಳಬೇಕು ಎನ್ನುವ ಉದ್ದೇಶದಿಂದ ಹೋರಾಟವನ್ನು ನಡೆಸಲು ಸ್ಥಾಪನೆ ಮಾಡಿದ ಕಮ್ಯುನಿಸ್ಟ್ ಪಕ್ಷವನ್ನು ಸ್ಥಾಪನೆ ಮಾಡಿ 100 ವರ್ಷಗಳು ಆಗಿದ್ದರಿಂದ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಹಾಗೂ ತಾಲೂಕು ಸಮಿತಿ ವತಿಯಿಂದ ಸಿಪಿಐಎಂ ಪಕ್ಷದ ಕಾ. ಸುಂದರಯ್ಯ ಭವನ ಕಚೇರಿಯಲ್ಲಿ ಶನಿವಾರ ಸಂಭ್ರಮ ಆಚರಿಸಿದರು.

bagepalli
ಭಾರತ ಕಮ್ಯುನಿಸ್ಟ್ ಪಕ್ಷಕ್ಕೆ 100 ರ ಸಂಭ್ರಮ
author img

By

Published : Oct 18, 2020, 12:00 AM IST

ಬಾಗೇಪಲ್ಲಿ: ತಾಲೂಕು ಸಿಪಿಐಎಂ ಪಕ್ಷದ ಕಾ.ಸುಂದರಯ್ಯ ಭವನ ಮುಂದೆ ಕಮ್ಯುನಿಸ್ಟ್ ಪಕ್ಷದ ಧ್ವಜವನ್ನು ಹಾರಿಸುವ ಮೂಲಕ 100ನೇ ವರ್ಷದ ಸಂಭ್ರಮ ಆಚರಿಸಲಾಯಿತು

ಬ್ರಿಟಿಷರ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದುಕೊಳ್ಳಬೇಕು ಎನ್ನುವ ಉದ್ದೇಶದಿಂದ ಹೋರಾಟವನ್ನು ನಡೆಸಲು ಕಮ್ಯುನಿಸ್ಟ್ ಪಕ್ಷವನ್ನು ಸ್ಥಾಪನೆ ಮಾಡಿ 100 ವರ್ಷಗಳು ಆಗಿದ್ದರಿಂದ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಹಾಗೂ ತಾಲೂಕು ಸಮಿತಿ ವತಿಯಿಂದ ಸಿಪಿಐಎಂ ಪಕ್ಷದ ಕಾ. ಸುಂದರಯ್ಯ ಭವನ ಕಚೇರಿಯಲ್ಲಿ ಶನಿವಾರ ಸಂಭ್ರಮ ಆಚರಿಸಿದರು.

ಕರ್ನಾಟಕ ರಾಜ್ಯದ ಕೂಲಿ ಕಾರ್ಮಿಕರ ಸಂಘದ ಕಾರ್ಯದರ್ಶಿ ಹಾಗೂ ಎಡಪಂಥೀಯ ಚಿಂತಕ ಪಿ.ಎಂ.ಮುನಿ ವೆಂಕಟಪ್ಪ ಮಾತನಾಡಿ, ಬ್ರಿಟಿಷರ ವಿರುದ್ಧ ಹೋರಾಟಗಳನ್ನು ನಡೆಸಲು ಪಕ್ಷವನ್ನು ಕಟ್ಟಿಕೊಳ್ಳಲಾಗಿತ್ತು. ದೇಶಕ್ಕೆ ಸ್ವಾತಂತ್ರ್ಯ ದೊರೆತ ಮೇಲೆಯು ಸಹ ಪಕ್ಷವು ಹೋರಾಟಗಳನ್ನು ನಡೆಸುತ್ತಿದೆ. ಬಡವರ, ಹಿಂದುಳಿದವರ, ಕಾರ್ಮಿಕರ, ಕೂಲಿಕಾರರ ಪರವಾಗಿ ಪಕ್ಷವು ನಿಂತುಕೊಂಡು ಅವರಿಗೆ ನ್ಯಾಯವನ್ನು ಕೊಡಿಸುವಂತಹ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಆಂಧ್ರ ಪ್ರದೇಶದ ಸಿಪಿಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರು ಹಾಗೂ ಅಖಿಲ ಭಾರತ ಕಾರ್ಮಿಕ ಮುಖಂಡರಾದ ಕಾಮ್ರೇಡ್ ನರಸಿಂಗರಾವ್ ಪ್ರಮುಖ ಭಾಷಣಕಾರರಾಗಿ ಮಾತನಾಡಿ, ಭಾರತದ ಕಮ್ಯುನಿಸ್ಟ್ ಚಳುವಳಿಯ ದಿಗ್ಗಜರಲ್ಲಿ ಒಬ್ಬರು, ಚಾರಿತ್ರಿಕ ತೆಲಂಗಾಣ ಶಸಸ್ತ್ರ ಹೋರಾಟದ ರೂವಾರಿಗಳೂ, ಸಿಪಿಐ(ಎಂ) ಪಕ್ಷದ ಪ್ರಥಮ ಪ್ರಧಾನ ಕಾರ್ಯದರ್ಶಿಗಳು ಆದ ಪುಚ್ಚಲಪಲ್ಲಿ ಸುಂದರಯ್ಯನವರು ಹಾಗೂ ಸಿಪಿಐಎಂ ಪಕ್ಷದ ನವರತ್ನಗಳು ಕ್ರಾಂತಿಕಾರಿ ಚಳವಳಿಯ ಮೂಲಕ ಹೋರಾಟದ ಹಾದಿಗಳನ್ನು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯಬೇಕು. ಶತಮಾನೋತ್ಸವವನ್ನು ಇಡೀ ವರ್ಷ ದೇಶದಾದ್ಯಂತ ಆಚರಿಸಲು ಪಕ್ಷದ ಕೇಂದ್ರ ಸಮಿತಿ ಕರೆ ನೀಡಿದೆ ಎಂದರು.

ಎಡಪಂಥೀಯ ಚಿಂತಕ, ಪ್ರಜಾ ವೈದ್ಯ ಡಾ.ಅನಿಲ್ ಕುಮಾರ್ ಮಾತನಾಡಿ ಸಿಪಿಐಎಂ ಪಕ್ಷ ಸಾಮ್ರಾಜ್ಯಶಾಹಿ, ಬಂಡವಾಳಶಾಹಿ ಮತ್ತು ಭೂಮಾಲಕರ ಶೋಷಣೆಯನ್ನು ಕೊನೆಗೊಳಿಸುವ ಕಾರ್ಯಕ್ರಮವನ್ನು ಜಾರಿ ಮಾಡುತ್ತಾ ಈ ಮೂಲಭೂತ ಪರಿವರ್ತನೆ ತರುವ ಸತತ ಪ್ರಯತ್ನದಲ್ಲಿ ತೊಡಗಿದೆ. ದೇಶದ ಮಂಚೂಣಿ ಎಡ ಪಕ್ಷವಾಗಿ ಪ್ರಸಕ್ತ ಭೂಮಾಲೀಕರ ನೀತಿಗಳಿಗೆ ನಿಜವಾದ ಬದಲಿ ನೀತಿಗಳನ್ನು ಪ್ರಸ್ತುತ ಪಡಿಸಬಲ್ಲ ಎಡ ಮತ್ತು ಪ್ರಜಾಸತ್ತಾತ್ಮಕ ರಂಗವನ್ನು ಕಟ್ಟಲು ಪಣ ತೊಟ್ಟಿದೆ.

ಇತರ ರಾಜ್ಯಗಳಂತೆ ಸಿಪಿಐಎಂ ಕರ್ನಾಟಕ ಘಟಕ ಸಹ 1964 ರಲ್ಲಿ ಅವಿಭಜಿತ ಕಮ್ಯುನಿಸ್ಟ್ ಚಳುವಳಿಯ ಒಳಗಿನ ಸೈದ್ಧಾಂತಿಕ ಹೋರಾಟದ ಭಾಗವಾಗಿ ಹುಟ್ಟಿ, ಸತತವಾಗಿ ಬೆಳೆಯುತ್ತಾ ಬಡವರ, ಕಾರ್ಮಿಕರ, ರೈತರ, ದಲಿತ, ಅಲ್ಪಸಂಖ್ಯಾತ ವರ್ಗದ ಸಮಸ್ಯೆಗಳನ್ನು ಹಾಗೂ ಹೋರಾಟಗಳನ್ನು ಮಾಡುತಾ ಬಂದಿದೆ. ನಾವು ವ್ಯಕ್ತಿ ನಿಷ್ಠೆ ಬಿಟ್ಟು ಪಕ್ಷದ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಪಕ್ಷವನ್ನು ಬೆಳೆಸಬೇಕಾಗಿದೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.