ಚಿಂತಾಮಣಿ: ನಗರದಲ್ಲಿ 3 ಕೊರೊನಾ ಪ್ರಕರಣಗಳು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ ನಗರದ ಚಲನವಲನ ಗಮನಿಸಲು ಹಾಗೂ ಪ್ರಚಾರ ಕಾರ್ಯಕ್ಕೆ ಡ್ರೋಣ್ ಕ್ಯಾಮೆರಾ ಬಳಸುತ್ತಿದ್ದು, ಕ್ಷೇತ್ರದ ಶಾಸಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಜನರಲ್ ಏರೋನಾಟಿಕ್ಸ್ ಮತ್ತು ವಿಶಾಲ್ ಕನ್‌ಸ್ಟ್ರಕ್ಷನ್ ಕಂಪನಿಯಿಂದ ಡ್ರೋಣ್ ಕ್ಯಾಮೆರಾವನ್ನು ತೆಗೆದುಕೊಳ್ಳಲಾಗಿದ್ದು, ಡ್ರೋಣ್ ಧ್ವನಿವರ್ಧಕದ ಮೂಲಕ ಜನರು ಹೊರಗೆ ಬರಬಾರದು ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗುತ್ತಿದೆ.