ಚಿಂತಾಮಣಿ: ತಾಲೂಕಿನ ಪೆರಮಾಚನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂದನಹಳ್ಳಿ ಗ್ರಾಮದ ಜೆಡಿಎಸ್ ಪಕ್ಷದ 100ಕ್ಕೂ ಹೆಚ್ಚಿನ ಮಂದಿ ಇಂದು ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಶೇಖರ್ ನೇತೃತ್ವದಲ್ಲಿ ಜೆಡಿಎಸ್ ಪಕ್ಷ ತೊರೆದು ಮಾಜಿ ಶಾಸಕ ಡಾ.ಎಂ.ಸಿ ಸುಧಾಕರ್ ಬಣಕ್ಕೆ ಸೇರ್ಪಡೆಗೊಂಡಿದ್ದಾರೆ.
ಗ್ರಾಮ ಪಂಚಾಯಿತಿ ಚುನಾವಣೆಗೆ ಕ್ಷಣಗಣನೆ ಎಂಬಂತೆ ಅಭ್ಯರ್ಥಿಗಳು ತಮ್ಮದೇ ಆದ ಬಿರುಸಿನ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಆದರೆ, ನಾಮಪತ್ರ ಸಲ್ಲಿಕೆಯ ನಂತರ ಕೆಂದನಗಳ್ಳಿಯ 30ಕ್ಕೂ ಹೆಚ್ಚಿನ ಕುಟುಂಬಗಳು ಜೆಡಿಎಸ್ ಪಕ್ಷ ತೊರೆದು ಮಾಜಿ ಶಾಸಕ ಡಾ. ಎಂ.ಸಿ ಸುಧಾಕರ್ ಬಣಕ್ಕೆ ಇಂದು ಸೇರಿಕೊಂಡಿದ್ದು ಮಾಜಿ ಶಾಸಕ ಸೇರ್ಪಡೆಗೊಂಡ ಗ್ರಾಮದ ಮುಖಂಡರಿಗೆ ಹೂವಿನ ಹಾರ ಹಾಕಿ ತಮ್ಮ ಬಣ್ಣಕ್ಕೆ ಬರಮಾಡಿಕೊಂಡರು.
ನಂತರ ಮಾತನಾಡಿದ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಕೆ.ಎಲ್ ನಾರಾಯಣಸ್ವಾಮಿ ಹಲವು ವರ್ಷಗಳಿಂದ ನಾವು ಜೆಡಿಎಸ್ ಪಕ್ಷದಲ್ಲಿ ಇದ್ದು, ಕೆಲ ಕಾರಣಾಂತರಗಳಿಂದ ಜೆಡಿಎಸ್ ಪಕ್ಷವನ್ನು ತೊರೆದು ನಮ್ಮ ಸ್ವ - ಇಚ್ಛೆಯಿಂದ ನಾವು ಮಾಜಿ ಶಾಸಕ ಡಾ.ಎಂ.ಸಿ ಸುಧಾಕರ್ ಬಣ್ಣಕ್ಕೆ ಸೇರ್ಪಡೆಗೊಂಡವು ಎಂದರು.
ಈ ಸಂದರ್ಭದಲ್ಲಿ ಸೇರ್ಪಡೆ ಆದ ಕೆ.ಎಲ್ ನಾರಾಯಣ ಸ್ವಾಮಿ ,ರಂಗಪ್ಪ ,ಮಂಜುನಾಥ್, ಕರಗಪ್ಪ ,ಗೋವಿಂದಪ್ಪ, ಅಂಜನಪ್ಪ , ತಿಪ್ಪಣ್ಣ ,ಶಿವಪ್ಪ, ಸೇರಿದಂತೆ ಕೆಂದನಲ್ಲಿ ಮತ್ತು ಚಾಪುರ ಗ್ರಾಮದ ಮುಖಂಡರು ಗ್ರಾಮಸ್ಥರು ಉಪಸ್ಥಿತರಿದ್ದರು.
ಓದಿ...ಬಾಗೇಪಲ್ಲಿ: 22 ಅಭ್ಯರ್ಥಿಗಳು ಅವಿರೋಧ ಆಯ್ಕೆ, ಅಂತಿಮ ಕಣದಲ್ಲಿ 1,038 ಮಂದಿ