ETV Bharat / state

ಚೇಳೂರಿನಲ್ಲಿ ಪೋಷಕರಿಗೆ ಬುದ್ಧಿ ಹೇಳಿ ಅಪ್ರಾಪ್ತೆಯ ಮದುವೆ ನಿಲ್ಲಿಸಿದ ಅಧಿಕಾರಿಗಳು

ತಾಲೂಕಿನ ಚೇಳೂರು ಹೋಬಳಿಯ ಗ್ರಾಮವೊಂದರಲ್ಲಿ ಬಾಲಕಿಗೆ ಮದುವೆ ಮಾಡಲು ಸಿದ್ಧತೆ ಮಾಡಿದ್ದು, ಚೇಳೂರು ಹೋಬಳಿ ಕಂದಾಯ ಇಲಾಖೆಯ ಅಧಿಕಾರಿ ಎನ್.ರಮಾನಂದ್ ನೇತೃತ್ವದ ತಂಡ ಗ್ರಾಮಕ್ಕೆ ಭೇಟಿ ನೀಡಿ ಬಾಲಕಿಯ ತಂದೆ-ತಾಯಿಗೆ ಬುದ್ಧಿ ಹೇಳಿ ಮದುವೆ ನಿಲ್ಲಿಸಿದೆ.

Child marriage   in Chelur
ಚೇಳೂರಿನಲ್ಲಿ ಅಪ್ರಪ್ತಾ ಬಾಲಕಿಗೆ ಮದುವೆ ನಿಶ್ಚಯ
author img

By

Published : Apr 23, 2020, 11:37 PM IST

ಬಾಗೇಪಲ್ಲಿ: ತಾಲೂಕಿನ ಚೇಳೂರು ಹೋಬಳಿಯ ಗ್ರಾಮವೊಂದರಲ್ಲಿ ಅಪ್ರಪ್ತೆಗೆ ಮದುವೆ ಮಾಡಲು ಸಿದ್ಧತೆ ಮಾಡಿದ್ದು, ಅಧಿಕಾರಿಗಳು ಖುದ್ದು ತೆರಳಿ ಮದುವೆ ನಿಲ್ಲಿಸಿದ್ದಾರೆ.

ಗ್ರಾಮದ 14 ವರ್ಷದ ಹುಡುಗಿಗೆ ನಲ್ಲಗುಟ್ಲಪಲ್ಲಿ ಗ್ರಾಮದ ಹುಡುಗನೊಂದಿಗೆ ಮದುವೆ ನಿಶ್ಚಯವಾಗಿತ್ತು. ಪಾತಪಾಳ್ಯ ಹೋಬಳಿಯ ಬಿಳ್ಳೂರು ಗ್ರಾಮದ ಆಂಜನೇಯಸ್ವಾಮಿ ದೇವಾಲಯದಲ್ಲಿ ಬುಧವಾರ ಮದುವೆ ಮಾಡಲು ಪೋಷಕರು ಸಿದ್ಧತೆ ಮಾಡಿಕೊಂಡಿದ್ದರು. ಈ ಬಗ್ಗೆ ಅಪರಿಚಿತರೊಬ್ಬರು ಚಿಕ್ಕಬಳ್ಳಾಪುರ ಜಿಲ್ಲೆಯ ಮಹಿಳಾ ಮಕ್ಕಳ ಸಹಾಯವಾಣಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಚೇಳೂರು ಹೋಬಳಿ ಕಂದಾಯ ಇಲಾಖೆಯ ಅಧಿಕಾರಿ ಎನ್.ರಮಾನಂದ್ ನೇತೃತ್ವದ ತಂಡ ಗ್ರಾಮಕ್ಕೆ ಭೇಟಿ ನೀಡಿ ಬಾಲಕಿಯ ತಂದೆ-ತಾಯಿಗೆ ಬುದ್ಧಿ ಹೇಳಿದೆ. ಈ ಸಂದರ್ಭದಲ್ಲಿ ಪೋಷಕರು ತಮ್ಮ ಮಗಳಿಗೆ ಮದುವೆ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.