ಚಿಕ್ಕಬಳ್ಳಾಪುರ: ಜನರು ಕೂಲಿ ಮಾಡಿ ಕಷ್ಟಪಟ್ಟು ದುಡಿದ ಹಣದಲ್ಲಿ ಅಲ್ಪಸ್ವಲ್ಪವನ್ನು ಎತ್ತಿಟ್ಟು ಪೋಸ್ಟ್ ಆಫೀಸ್ನಲ್ಲಿ 100-200 ರೂ.ಗಳಂತೆ ಠೇವಣಿ ಮಾಡಿದ್ದರು. ಜನರ ಬಳಿ ದುಡ್ಡು ಪಡೀತಿದ್ದ ಪೋಸ್ಟ್ ಮಾಸ್ಟರ್ ಲಕ್ಷಾಂತರ ರೂಪಾಯಿ ಹಣವನ್ನು ನಂದಿ ಉಪಪೋಸ್ಟ್ ಆಫೀಸ್ಗೆ ಕಟ್ಟದೆ ತಾನೇ ಸ್ವಂತಕ್ಕೆ ಬಳಸಿಕೊಂಡಿರುವ ಆರೋಪ ಎದುರಿಸುತ್ತಿದ್ದಾನೆ. ಈ ವಿಷಯ ತಿಳಿದ ಜನರು ತಮ್ಮ ಹಣ ವಾಪಸ್ ನೀಡುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಉಪಅಂಚೆ ಕಚೇರಿ ವ್ಯಾಪ್ತಿಯ ಕಂದವಾರ ಬ್ರಾಂಚ್ ಪೋಸ್ಟ್ ಆಫೀಸಿನಲ್ಲಿ ಈ ಘಟನೆ ನಡೆದಿದೆ. ಗ್ರಾಹಕರು ಕಂದವಾರ ಬ್ರಾಂಚ್ ಪೋಸ್ಟ್ ಆಫೀಸಿನ ಪೋಸ್ಟ್ ಮಾಸ್ಟರ್ ಜಯರಾಜ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿದಿನ ಹಣ ಕಟ್ಟುತ್ತಿದ್ರೂ ಅವರ ಖಾತೆಗಳಲ್ಲಿ ಹಣವೇ ಇಲ್ಲ. ಬಳಿಕ ಪೋಸ್ಟ್ ಮಾಸ್ಟರ್ ಜಯರಾಜ್ನ ಕರೆಸಿ ವಿಚಾರಣೆ ಮಾಡಿದಾಗ ಸತ್ಯ ಹೊರಬಂದಿದೆ.
13 ಲಕ್ಷ ರೂ. ಹಣ ಪಡೆದ ಜಯರಾಜ್: ಬಡವರ ಬಳಿ ಹಣ ಪಡೆಯುತ್ತಿದ್ದ ಜಯರಾಜ್ ಗ್ರಾಹಕರಿಗೆ ನಕಲಿ ಸೀಲ್, ಸಹಿ ಮಾಡಿದ ರಶೀದಿ ನೀಡಿದ್ದಾನೆ. ಈ ಹಣವನ್ನು ಆತ ಪೋಸ್ಟ್ ಆಫೀಸ್ಗೆ ಕಟ್ಟಿಲ್ಲ. ಇದ್ರಿಂದ ಹಣ ಕಳೆದುಕೊಂಡ ಜನ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ತಮ್ಮ ಹಣವನ್ನು ವಾಪಸ್ ಕೊಡಿಸುವಂತೆ ಮನವಿ ಮಾಡಿದ್ದಾರೆ. ಕಂದವಾರ ಶಾಖೆಯಲ್ಲಿ 30 ಜನ ಖಾತೆದಾರರ ಬಳಿ 13 ಲಕ್ಷ ರೂ. ಹಣವನ್ನು ಪಡೆದಿದ್ದಾನೆ. ವಂಚನೆ ಮಾಡಿದ ಜಯರಾಜ್‌ನನ್ನು ಇಲಾಖೆ ಅಮಾನತು ಮಾಡಿದೆ. ಆದ್ರೆ ಜನರು ಮಾತ್ರ ತಮ್ಮ ದುಡ್ಡು ಅದ್ಯಾವಾಗ ಸಿಗುತ್ತೋ ಏನೋ ಎಂದು ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ.
ಇದನ್ನೂ ಓದಿ: ಪಿಎಸ್ಐ ಭ್ರಷ್ಟಾಚಾರಿ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿ: ರಮೇಶ್ ಕುಮಾರ್