ಚಿಕ್ಕಬಳ್ಳಾಪುರ: ನಾಯಿಗಳ ದಾಳಿಗೆ ಸಿಲುಕಿ 11 ವರ್ಷದ ಬಾಲಕ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಜಿಲ್ಲೆಯ ಶಿಡ್ಲಘಟ್ಟ ನಗರದ ಸಂತೋಷ ಬಡಾವಣೆಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಶಿಡ್ಲಘಟ್ಟದ ಉರ್ದು ಶಾಲೆಯಲ್ಲಿ 4ನೇ ತರಗತಿಯಲ್ಲಿ ಓದುತ್ತಿದ್ದ ಖಲಂದರ್ ಖಾನ್ (10) ಎಂಬಾತ ಮೃತ ಬಾಲಕ. ತಂದೆ ಕೂಲಿಗಾಗಿ ಹೊರಗೆ ಹೋದಾಗ ಬಾಲಕ ಮನೆಯಿಂದ ಹೊರಗಡೆ ಬಂದಿದ್ದ. ಈ ವೇಳೆ 20ಕ್ಕೂ ಅಧಿಕ ನಾಯಿಗಳು ದಾಳಿ ನಡೆಸಿದ್ದು, ಆತನ ಮೈ ಮೇಲೆ ಬಟ್ಟೆಯೂ ಉಳಿದಿರಲಿಲ್ಲ. ತಲೆ, ಮೈ, ಕೈ ಸೇರಿದಂತೆ ಎಲ್ಲೆಡೆ ನಾಯಿಗಳು ಕಚ್ಚಿ ಗಾಯಗೊಳಿಸಿದ್ದವು.
ಸ್ಥಳೀಯರು ಬಂದು ಬಿಡಿಸುವ ವೇಳೆಗೆ ಬಾಲಕ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಸ್ಥಳಕ್ಕೆ ಶಿಡ್ಲಘಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಿಡ್ಲಘಟ್ಟ ನಗರದ ಸಂತೋಷ ಬಡಾವಣೆಯಲ್ಲಿ ನಾಯಿಗಳ ಹಾವಳಿ ಅತಿಯಾಗಿದ್ದು, ಆದರೆ ನಗರಸಭೆ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಜನರು ಹಿಡಿಶಾಪ ಹಾಕಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ: ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಗರ್ಭಿಣಿಯನ್ನಾಗಿಸಿದ ಕಿರಾತಕ