ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮತ್ತೊಂದು ಕೊರೊನಾ ಸೋಂಕು ಪ್ರಕರಣ ಪತ್ತೆಯಾಗಿದೆ.
ಗೌರಿಬಿದನೂರು ತಾಲೂಕಿನ ಅಲಿಪುರದ ಹಿರೇಬಿದನೂರು ಗ್ರಾಮದಲ್ಲಿ ಇಂದು ಒಬ್ಬರಲ್ಲಿ ಸೋಂಕು ಇರುವುದು ದೃಢವಾಗಿದೆ.
ನಿನ್ನೆ ಮಗನಲ್ಲಿ ಸೋಂಕು ಇರುವುದು ದೃಢವಾಗಿತ್ತು. ಇಂದು ತಾಯಿಯಲ್ಲಿ ಸೋಂಕು ಕಂಡುಬಂದಿದೆ. ತಾಯಿ ಮತ್ತು ಮಗ ಇಬ್ಬರು ಮೆಕ್ಕಾದಿಂದ ಬಂದಿದ್ದರು. ರಾಜ್ಯ ಸರ್ಕಾರದಿಂದ ಈ ಬಗ್ಗೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಾಗಿದೆ.
ಇವರ ಸಂಪರ್ಕದಲ್ಲಿದ್ದ 22 ಜನರ ತಪಾಸಣೆ ನಡೆಸಲಾಗಿದೆ.